ಅಯೋಧ್ಯೆ ಜನರು ಖುಷಿಯಾಗಿರಬಾರದೆಂದು ಸೀತಾಮಾತೆ ಶಾಪ ಇದೆಯೇ?

First Published | Jun 8, 2024, 5:00 PM IST

ಅಯೋಧ್ಯೆ ನಗರದ ಪೌರಾಣಿಕ ಪ್ರಾಮುಖ್ಯತೆಯ ಹೊರತಾಗಿಯೂ, ಈ ನಗರ ತನ್ನ ಹಳೆಯ ಮೌಲ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಹೀನಾಯ ಸೋಲಿನ ನಂತರ, ಅಯೋಧ್ಯೆಗೆ ನೀಡಿದ ಸೀತಾಮಾತೆಯ ಶಾಪದ ಬಗ್ಗೆ ಮತ್ತೆ ಚರ್ಚೆಯಾಗುತ್ತಿದೆ. 
 

ಅಯೋಧ್ಯೆ (Ayodhya) ಶ್ರೀರಾಮ ಜನ್ಮಭೂಮಿ. ಇದಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಇದರ ಹೊರತಾಗಿಯೂ ಅಯೋಧ್ಯೆ ಹಳೆಯ ಗುರುತನ್ನು ಇಂದಿಗೂ ಮತ್ತೆ ಮರುಕಳಿಸಲು ಸಾಧ್ಯವಾಗ್ತಿಲ್ಲ. ಅದೆಷ್ಟೇ ಪ್ರಯತ್ನಿಸಿದರೂ ಮತ್ತೆ ರಾಮರಾಜ್ಯದ ಸ್ಥಾಪನೆ ಮಾಡೊದಕ್ಕೂ ಸಾಧ್ಯವಾಗಿಲ್ಲ. ಈ ಎಲ್ಲ ಸಾಧ್ಯ, ಅಸಾಧ್ಯಗಳ ನಡುವೆ ಅಯೋಧ್ಯೆಗೆ ದೊರಕಿದಂತಹ ಸೀತೆಯ ಶಾಪದ ಬಗ್ಗೆ ತಿಳಿಯೋಣ. 
 

ಅಯೋಧ್ಯೆಯಲ್ಲಿ ಬಿಜೆಪಿಯ ಹೀನಾಯ ಸೋಲಿನ ನಂತರ, ಇಡೀ ದೇಶವು ಅಯೋಧ್ಯೆಯ ಜನರಿಗೆ ಶಾಪ ಹಾಕುತ್ತಿದೆ. ಕೆಲವರು ಅಯೋಧ್ಯೆಯ ಜನರನ್ನು ವಿಶ್ವಾಸಘಾತುಕರು ಎಂದರೆ, ಇನ್ನೂ ಕೆಲವರು ದೇಶದ್ರೋಹಿಗಳು ಎನ್ನುತ್ತಿದ್ದಾರೆ.  ಅಯೋಧ್ಯೆಯಲ್ಲಿ ರಾಮನ ದೇವಾಲಯವನ್ನು ನಿರ್ಮಿಸಿದ ನಂತರವೂ, ಇಲ್ಲಿ ಬಿಜೆಪಿ ಸೋತಿದೆ ಅನ್ನೋದೆ ದೊಡ್ಡ ಚರ್ಚೆಯ ವಿಷಯವಾಗಿದೆ. ಇದೆಲ್ಲದರ ನಡುವೆ, ನಾವು ನಿಮಗೊಂದು ಪೌರಾಣಿಕ ಕಥೆಯೊಂದನ್ನು ಹೇಳ್ತೀವಿ ಮತ್ತು ಸೀತಾ (SIta Mata) ಮಾತೆ ಅಯೋಧ್ಯೆ ಮತ್ತು ಅಲ್ಲಿನ ಜನರಿಗೆ ನೀಡಿದ ಶಾಪದ ಬಗ್ಗೆ ನಿಮಗೆ ಹೇಳ್ತಿವಿ. 
 

Tap to resize

ಹೌದು ಸೀತಾ ಮಾತೆ ಅಯೋಧ್ಯೆಗೆ ಶಾಪ ನೀಡಿದ್ದಳು. ಸೀತಾ ಮಾತೆಯ ಈ ಶಾಪದಿಂದ, ಅಯೋಧ್ಯೆ ನಗರ ಎಂದಿಗೂ ಪ್ರಗತಿ ಹೊಂದೋದಕ್ಕೆ ಸಾಧ್ಯವಾಗಲಿಲ್ಲ ಎನ್ನುವ ನಂಬಿಕೆ ಇದೆ. ನಗರವು ಯಾವಾಗಲೂ ಒಂದಲ್ಲ ಒಂದು ಕೊರತೆಯನ್ನು ಅನುಭವಿಸುತ್ತೆ. ಹಾಗಿದ್ರೆ ಭಗವಾನ್ ರಾಮನು (Lord Shrirama) ರಾವಣನನ್ನು ಸೋಲಿಸಿ ತನ್ನ ಪತ್ನಿ ಸೀತೆಯೊಂದಿಗೆ ಅಯೋಧ್ಯೆಗೆ ಹಿಂದಿರುಗಿದಾಗ ಏನಾಯಿತು ಮತ್ತು ಸೀತಾ ಮಾತೆ ಅಯೋಧ್ಯೆಯನ್ನು ಏಕೆ ಶಪಿಸಿದನು ಎನ್ನುವ ಬಗ್ಗೆ ಇಂಟ್ರೆಸ್ಟಿಂಗ್ ಆಗಿರೋ ಒಂದು ಕಥೆಯನ್ನು ತಿಳಿಯೋಣ. 
 

ತ್ರೇತಾಯುಗದ ಅಂತ್ಯದ ನಂತರ ಅಯೋಧ್ಯೆಯು ನಿರ್ನಾಮವಾಗಲು ಪ್ರಾರಂಭಿಸಿತು. ಅಯೋಧ್ಯೆಯಲ್ಲಿ ಒಂದು ವಿಚಿತ್ರವಾದ ನಿರ್ಜನತೆ, ಮೌನ ಆವರಿಸಿತ್ತು. ಎಲ್ಲೆಲ್ಲಿಂದಲೋ ದಾಳಿಗಳು ನಡೆದವು, ಅಯೋಧ್ಯೆಯಲ್ಲಿದ್ದ ದೇಗುಲಗಳು ಧ್ವಂಸವಾದವು. ಭಗವಾನ್ ರಾಮನ ಜನ್ಮಸ್ಥಳವಾಗಿದ್ದರೂ (birth place), ಈ ಸ್ಥಳವು ಅದಕ್ಕೆ ಅರ್ಹವಾದ ಮಾನ್ಯತೆಯೇ ಪಡೆಯದಂತಾಯಿತು. ಅಯೋಧ್ಯೆಯ ಈ ದುಃಸ್ಥಿತಿಗೆ ಸೀತಾ ಮಾತೆಯ ಶಾಪವೇ ಕಾರಣ ಎಂದು ಜನರು ಹೇಳೋದು ಉಂಟು. 
 

ಅಷ್ಟಕ್ಕೂ, ಸೀತಾ ಮಾತೆ ಅಯೋಧ್ಯೆಗೆ ಶಾಪ ನೀಡಿದ್ದೇಕೆ? 
ವೇದಗಳು ಮತ್ತು ಪುರಾಣಗಳಲ್ಲಿ ತಿಳಿಸಿದಂತೆ, ರಾವಣನ ಸಂಹಾರಾದ ಬಳಿಕ, ವನವಾಸವನ್ನು ಕೊನೆಗೊಳಿಸಿ ಶ್ರೀರಾಮನು ಸೀತಾಳೊಂದಿಗೆ ಅಯೋಧ್ಯೆಗೆ ಮರಳಿದ ಸಮಯವದು. ಒಂದೆಡೆ, ಭಗವಾನ್ ರಾಮನ ಆಗಮನದ ಸಂದರ್ಭದಲ್ಲಿ ತುಪ್ಪದ ದೀಪಗಳನ್ನು ಬೆಳಗಿಸುವ ಮೂಲಕ ಜನ ಸಂತೋಷವನ್ನು ಆಚರಿಸುತ್ತಿದ್ದರೆ, ಮತ್ತೊಂದೆಡೆ, ಅಯೋಧ್ಯೆಯ ಜನರು ಸೀತಾ ಮಾತೆಯ ಬಗ್ಗೆ ಸಂಶಯದ ನೋಟ ಬೀರುತ್ತಾ, ಬಾಯಿಂದ ಬಾಯಿಗೆ ವದಂತಿ ಹರಡುತ್ತಿದ್ರು.
 

ಸೀತೆ ಇಷ್ಟು ದಿನ ಅದ್ಯಾವುದೋ ಬೇರೆ ರಾಜ್ಯದ ಜೀವಿಯಾದ ರಾವಣನೊಂದಿಗೆ ವಾಸಿಸುತ್ತಿದ್ದಳು, ಆಕೆ ಈಗ ಪರಿಶುದ್ಧೆಯೋ? ಅಲ್ಲವೇ? ಎನ್ನುವ ಬಗ್ಗೆ ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು. ಅಯೋಧ್ಯೆಯ ಜನರು ಸೀತಾಮಾತೆಯ ಪರಿಶುದ್ಧತೆಯನ್ನು ಅನುಮಾನಿಸುತ್ತಿದ್ದರು. ಬಟ್ಟೆ ಒಗೆಯುವವನಿಂದ ಸೀತಾಮಾತೆಯ ಬಗ್ಗೆ ಕೆಟ್ಟ ಮಾತುಗಳು ಬಂದಾಗ ರಾಮನು ಸೀತಾಮಾತೆಯನ್ನು ತ್ಯಜಿಸಲು ನಿರ್ಧರಿಸಿದನು. ನಂತರ, ಅವನು ಸೀತಾ ಮಾತೆಯನ್ನು ಲಕ್ಷ್ಮಣನೊಂದಿಗೆ ಮತ್ತೆ ವನವಾಸಕ್ಕೆ ಕಳುಹಿಸಿದನು. 
 

ಅಯೋಧ್ಯೆಯ ಜನರ ಈ ಕೃತ್ಯದ ಬಗ್ಗೆ ಸೀತಾಮಾತೆಗೆ ತಿಳಿದಾಗ, ಅವಳು ಕೋಪದಿಂದ ತತ್ತರಿಸಿದಳು. ತನ್ನ ಗಂಡನಿಂದ ದೂರವಾಗಿ ಮತ್ತೆ ವನವಾಸದಲ್ಲಿ ಸಂತೋಷವಾಗಿರಲು ಸಾಧ್ಯವಾಗೋದೇ ಇಲ್ಲ, ನಾನು ಹೇಗೆ ದುಃಖದಿಂದಿರುವೆನೋ ಹಾಗೆಯೇ ಅಯೋಧ್ಯೆಯ ಜನರು ಸಹ ಯಾವಾಗಲೂ ದುಃಖಿತರಾಗಿರಲಿ ಎಂದು ಸೀತೆ ಶಾಪ ಕೊಟ್ಟಳಂತೆ. ಜೊತೆಗೆ ಅಯೋಧ್ಯೆ ನಿರ್ಜನವಾಗಿರಲಿ,  ಅಲ್ಲಿನ ಜನರು ಬಡವರಾಗಿರಲಿ ಎಂದರಂತೆ. 
 

ಸೀತಾಮಾತೆಯ ಶಾಪದ ಪರಿಣಾಮವಾಗಿ ಮಹಾಭಾರತ (Mahabharat) ಯುದ್ಧದಲ್ಲಿ, ರಘುವಂಶದ ಕೊನೆಯ ರಾಜ ಅಂದರೆ ಭಗವಾನ್ ರಾಮನ ಕೊನೆಯ ವಂಶಸ್ಥ ರಾಜ ಬೃಹದ್ಬಾಲ್ ನಿಧನರಾದರು. ಅದರ ನಂತರ ಅಯೋಧ್ಯೆ ನಗರವು ನಿರ್ಜನವಾಗಿತ್ತು ಎಂದು ಹೇಳಲಾಗುತ್ತದೆ.

Latest Videos

click me!