ಮೃತ್ಯುವಿನ ನಂತ್ರ ಎಲ್ಲಿಗೆ ಹೋಗುತ್ತೆ ಆತ್ಮ? ಎಷ್ಟು ದಿನದ ನಂತ್ರ ಪುನರ್ಜನ್ಮ ಪಡೆಯುತ್ತೆ?

First Published | Jun 8, 2024, 4:10 PM IST

ಗರುಣ ಪುರಾಣದಲ್ಲಿ ಮನುಷ್ಯನ ಜೀವನದಲ್ಲಿ ಮಾಡಿದ ಪಾಪಗಳಿಗೆ ಅನುಸಾರವಾಗಿ ಶಿಕ್ಷೆಯನ್ನು ನೀಡುವ ಬಗ್ಗೆ ವಿವರಿಸಿದೆ.  ಇದರಲ್ಲಿ ಕರ್ಮದ ಆಧಾರದ ಮೇಲೆ ಆತ್ಮವನ್ನು ಸ್ವರ್ಗ ಅಥವಾ ನರಕಕ್ಕೆ ಕಳುಹಿಸಲಾಗುತ್ತದೆ. ಇದರ ನಂತರ ಪುನರ್ಜನ್ಮ ಬರುತ್ತದೆ ಎನ್ನಲಾಗುವುದು.
 

ಗರುಡ ಪುರಾಣ (Garuda Purana) ಹಿಂದೂ ಧರ್ಮದ ಪ್ರಮುಖ ಗ್ರಂಥಗಳಲ್ಲಿ ಒಂದಾಗಿದೆ. ಗರುಡ ಪುರಾಣದಲ್ಲಿ, ಮಾನವರ ಜೀವನ, ಸಾವು ಮತ್ತು ನಂತರದ ಪ್ರಯಾಣ ಅಂದರೆ ಸಾವಿನ ನಂತರದ ಏನಾಗುತ್ತೆ ಅನ್ನೋದನ್ನು ವಿವರಿಸಲಾಗಿದೆ. ಇದಲ್ಲದೆ, ಮನುಷ್ಯನ ವಿಭಿನ್ನ ಕರ್ಮಗಳಿಗೆ ವಿಭಿನ್ನ ಶಿಕ್ಷೆಗಳನ್ನು ಸಹ ವಿವರಿಸಲಾಗಿದೆ. ನಿಮಗೂ ಸಾವಿನ ನಂತರ ಏನಾಗುತ್ತೆ ಅನ್ನೋದನ್ನು ತಿಳಿಯಬೇಕೆ? ಹಾಗಿದ್ರೆ ಇದನ್ನ ಪೂರ್ತಿಯಾಗಿ ಓದಿ. 
 

ಗರುಡ ಪುರಾಣವನ್ನು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಮರಣದ ನಂತರ ಅವನ ಶವಸಂಸ್ಕಾರದ ನಂತರ ಮುಂದಿನ 13 ದಿನಗಳವರೆಗೆ ಪಠಿಸಲಾಗುತ್ತದೆ. ಆದರೆ ಯೋಚಿಸಬೇಕಾದ ವಿಷಯವೆಂದರೆ, ಒಬ್ಬ ವ್ಯಕ್ತಿಯ ಮರಣದ ನಂತರ, ಅವನ ಆತ್ಮ ಎಲ್ಲಿಗೆ ಹೋಗುತ್ತದೆ? ಮರಣದ ನಂತರ ಯಾರಾದರೂ ಮತ್ತೆ ಜನಿಸಿದರೆ, ಯಾವಾಗ, ಎಲ್ಲಿ ಮತ್ತು ಎಷ್ಟು ದಿನಗಳ ನಂತರ ಆತ್ಮಕ್ಕೆ ಪುನರ್ಜನ್ಮ (Rebirth) ಸಿಗುತ್ತೆ? ಇವುಗಳ ಬಗ್ಗೆ ತಿಳಿಯೋ ಕುತೂಹಲ ಇದ್ಯಾ? ಹಾಗಿದ್ರೆ ಸಂಪೂರ್ಣ ಮಾಹಿತಿ ಓದಿ. 
 

Tap to resize

ಸಾವಿನ ನಂತರ ಆತ್ಮ ಎಲ್ಲಿಗೆ ಹೋಗುತ್ತೆ?
ಗರುಡ ಪುರಾಣದ ಪ್ರಕಾರ, ಯಾವುದೇ ವ್ಯಕ್ತಿಯ ಮರಣದ (after death) ನಂತರ, ಅವನ ಆತ್ಮವು ಬಹಳ ದೂರ ಪ್ರಯಾಣಿಸುತ್ತದೆ. ಮೊದಲನೆಯದಾಗಿ, ಆತ್ಮವನ್ನು ಯಮಲೋಕಕ್ಕೆ ಕರೆದೊಯ್ಯಲಾಗುತ್ತದೆ. ಇದರ ನಂತರ, ಸತ್ತ ವ್ಯಕ್ತಿಯ ಕಾರ್ಯಗಳನ್ನು ಯಮರಾಜನ ಮುಂದೆ ಲೆಕ್ಕಹಾಕಲಾಗುತ್ತದೆ

ನಿಮ್ಮ ಕಾರ್ಯಗಳು ಕೆಟ್ಟದಾಗಿದ್ದರೆ, ಯಮದೂತ ನಿಮ್ಮ ಆತ್ಮವನ್ನು ಶಿಕ್ಷಿಸುತ್ತಾನೆ. ಮತ್ತೊಂದೆಡೆ, ನಿಮ್ಮ ಕಾರ್ಯಗಳು ಉತ್ತಮವಾಗಿದ್ದರೆ ನಿಮ್ಮ ಪ್ರಯಾಣವು ತುಂಬಾ ಆರಾಮದಾಯಕವಾಗಿರುತ್ತೆ. ಮರಣದ ನಂತರ, ಆತ್ಮವು ಯಮರಾಜನನ್ನು ತಲುಪಲು ಸುಮಾರು 86 ಸಾವಿರ ಯೋಜನಗಳಷ್ಟು ದೂರ ಪ್ರಯಾಣಿಸಬೇಕಾಗುತ್ತಂತೆ. ಇದನ್ನ ನಾವು ಹೇಳ್ತಿಲ್ಲ, ಪುರಾಣದಲ್ಲಿ ತಿಳಿಸಿದೆ. 
 

ಪುನರ್ಜನ್ಮವನ್ನು ಹೇಗೆ ನಿರ್ಧರಿಸಲಾಗುತ್ತೆ?
ಮರಣದ ನಂತರ 3 ದಿನಗಳಿಂದ 40 ದಿನಗಳ ಒಳಗೆ ಪುನರ್ಜನ್ಮ ಸಂಭವಿಸುತ್ತದೆ ಎನ್ನುವ ನಂಬಿಕೆ ಇದೆ. ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯ ಪುನರ್ಜನ್ಮವನ್ನು ಅವನ ಕರ್ಮದ ಆಧಾರದ ಮೇಲೆ ಮಾತ್ರ ನಿರ್ಧರಿಸಲಾಗುತ್ತದೆ ಏಕೆಂದರೆ ಪಾಪಿ ವ್ಯಕ್ತಿಯ ಆತ್ಮವನ್ನು (soul of the person) ನರಕಕ್ಕೆ ಕಳುಹಿಸಲಾಗುತ್ತದೆ ಮತ್ತು ಸದ್ಗುಣಶೀಲ-ಪವಿತ್ರ ಆತ್ಮವನ್ನು ಸ್ವರ್ಗಕ್ಕೆ ಕಳುಹಿಸಲಾಗುತ್ತದೆ.

ವ್ಯಕ್ತಿಯ ಆತ್ಮ ತನ್ನ ಕಾರ್ಯಗಳಿಗೆ ಅನುಗುಣವಾಗಿ ಶಿಕ್ಷೆ ಅನುಭವಿಸಿದಾಗ, ಅವನು ಮತ್ತೆ ಮತ್ತೊಂದು ಜನ್ಮವನ್ನು ಪಡೆಯುತ್ತಾನೆ. ಮುಂದಿನ ಜನ್ಮ ಯಾವ ಪರಿಸ್ಥಿತಿಯಲ್ಲಿ ಹುಟ್ಟಬೇಕು? ಕೆಟ್ಟವನಾಗಿ ಹುಟ್ಟುವನೋ? ಒಳ್ಳೆಯವನಾಗಿ ಹುಟ್ಟುವನೋ? ಶ್ರೀಮಂತನಾಗುವನೋ? ಅಥವಾ ಬಡವನಾಗಿ ಜನಿಸುವನೋ? ಇವೆಲ್ಲವೂ ಅವನ ಕರ್ಮವನ್ನು ಅವಲಂಭಿಸಿರುತ್ತೆ. 
 

Latest Videos

click me!