ಊಟ ಮಾಡೋವಾಗ ಪದೇ ಪದೇ ಕೂದಲು ಸಿಗುತ್ತಾ? ಇದು ಏನನ್ನು ಸೂಚಿಸುತ್ತೆ ಗೊತ್ತಾ?

First Published | Jun 8, 2024, 4:31 PM IST

ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಭವಿಷ್ಯದಲ್ಲಿನ ಸೋಲು -ಗೆಲುವಿನ ಮುನ್ಸೂಚನೆ ಕೊಡುತ್ತೆ. ಕೆಲವೊಂದು ಘಟನೆಗಳು ಜೀವನದಲ್ಲಿ ದೊಡ್ಡ ಬದಲಾವಣೆಯಾಗೋದನ್ನು ಸೂಚಿಸಿದ್ರೆ, ಮತ್ತೆ ಕೆಲವು ಏನೋ ದೊಡ್ಡದು ಸಂಭವಿಸುತ್ತೆ ಅನ್ನೋದನ್ನು ಸೂಚಿಸುತ್ತೆ. 
 

ಜೀವನ ಖಂಡಿತವಾಗಿ ನಾವು ಅಂದುಕೊಂಡಂತೆ ಇರೋದೆ ಇಲ್ಲ. ಯಾವಾಗ ಏನಾಗುತ್ತೆ ಅನ್ನೋದೆ ಗೊತ್ತಾಗಲ್ಲ. ಕೆಲವೊಂದು ಘಟನೆಗಳು ನಡೆದಾಗ ಯಾಕೆ ಹೀಗಾಯ್ತು ಎಂದು ಅಚ್ಚರಿ ಪಡ್ತೀವಿ. ಅನೇಕ ಬಾರಿ ನಮ್ಮ ಜೀವನದಲ್ಲಿ ಸಂಭವಿಸುವ ಘಟನೆಗಳು ಭವಿಷ್ಯಕ್ಕೆ ಮಿಶ್ರ ಫಲಿತಾಂಶ ನೀಡುತ್ತವೆ. ಪದೇ ಪದೇ ನಿಮ್ಮ ಜೀವನದಲ್ಲಿ ಏನಾದ್ರೂ ನಡಿತಿದೇ ಅಂದ್ರೆ, ಯಾವುದೋ ದೊಡ್ಡ ಘಟನೆ ಸಂಭವಿಸಬಹುದು ಎಂದರ್ಥ.

ನಾವು ತಿಳಿದೋ ತಿಳಿಯದೆಯೋ ನಮ್ಮ ಸುತ್ತಲೂ ಕೆಲವು ಘಟನೆಗಳನ್ನು ನೋಡುತ್ತೇವೆ, ಅದು ಖಂಡಿತವಾಗಿಯೂ ನಮ್ಮ ಜೀವನದಲ್ಲಿ ಪರಿಣಾಮ (effect on life) ಬೀರುತ್ತದೆ. ವರ್ತಮಾನದಲ್ಲಿ ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಒಂದು ಘಟನೆ ಭವಿಷ್ಯದಲ್ಲಿ ಏನಾಗಲಿದೆ ಎಂಬುದರ ಸಂಕೇತವೂ ಆಗಿರಬಹುದು. ಕೆಲವೊಮ್ಮೆ ಯಾವುದೋ ಒಂದು ಘಟನೆ ಮುಂಬರುವ ಸಮಯದಲ್ಲಿ ಏನಾದರೂ ಅಹಿತಕರ ಘಟನೆಯನ್ನು ಸೂಚಿಸುತ್ತದೆ, ಕೆಲವೊಮ್ಮೆ ವರ್ತಮಾನದಲ್ಲಿ ಏನಾದರೂ ಆದರೂ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲ, ಕೆಲವೊಮ್ಮೆ ಅದರಿಂದ ನಿಮ್ಮ ಭವಿಷ್ಯದ ಜೀವನದಲ್ಲಿ (future life) ದೊಡ್ಡ ಸಮಸ್ಯೆ ತಂದಿಡುವ ಸಾಧ್ಯತೆ ಇದೆ. 

Tap to resize

ಅಂತಹ ಒಂದು ಘಟನೆ ಬಗ್ಗೆ ನಾವಿಲ್ಲಿ ಹೇಳ್ತೀವಿ. ಕೆಲವೊಮ್ಮೆ ನಾವು ಊಟ ಮಾಡೋವಾಗ ಊಟದಲ್ಲಿ ಕೂದಲು (finding hair in food) ಸಿಗುತ್ತೆ. ಇದರಿಂದ ನಮಗೆ ಇರಿಟೇಟ್ ಆಗುತ್ತೆ. ಆದರೆ ಊಟ ಪ್ರಾರಂಭಿಸಿದ ತಕ್ಷಣ ಅಥವಾ ಆಹಾರದ ತಟ್ಟೆಯಲ್ಲಿ ಆಗಾಗ್ಗೆ ಕೂದಲು ಸಿಗೋದು ಸಾಮಾನ್ಯ ಘಟನೆಯಲ್ಲ, ಇದು ನಿಮ್ಮ ಜೀವನದ ಮೇಲೆ ಪರಿಣಾಮವನ್ನು ಬೀರುವಂತಹ ಘಟನೆಯನ್ನು ಸೂಚಿಸುತ್ತೆ. 
 

ಆಹಾರದಲ್ಲಿ ಪದೇ ಪದೇ ಕೂದಲು ಸಿಗೋದು ಏನನ್ನು ಸೂಚಿಸುತೆ? 
ನಿಮ್ಮ ಆಹಾರದಲ್ಲಿ ಪದೇ ಪದೇ ಕೂದಲು ಸಿಗುತ್ತಿದ್ರೆ ಜ್ಯೋತಿಷ್ಯದ ಪ್ರಕಾರ ಅದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ (bad luck). ನೀವು ತಿನ್ನಲು ಪ್ರಾರಂಭಿಸಿದ ತಕ್ಷಣ ಅಥವಾ ಮೊದಲ ತುತ್ತಿನಲ್ಲಿ ಕೂದಲು ಸಿಕ್ಕಿದರೆ, ಅದು ಪಿತೃ ದೋಷಕ್ಕೆ ಪ್ರಮುಖ ಕಾರಣವಾಗಬಹುದು ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಇದು ಪೂರ್ವಜರ ಅಸಮಾಧಾನದ ಸಂಕೇತವೂ ಆಗಿರಬಹುದು. ನಿಮ್ಮ ಪೂರ್ವಜರಲ್ಲಿ ಒಬ್ಬರು ಕೋಪಗೊಂಡಾಗ ಮತ್ತು ಅವರ ಶಾಂತಿಗಾಗಿ ನೀವು ಯಾವುದೇ ಕ್ರಮ ತೆಗೆದುಕೊಳ್ಳದಿದ್ದಾಗ ಮಾತ್ರ ಇದು ಮತ್ತೆ ಮತ್ತೆ ಸಂಭವಿಸುತ್ತೆ. ಇದು ಒಂದು ಅಥವಾ ಎರಡು ಬಾರಿ ಸಂಭವಿಸಿದರೆ ಅದು ಸಾಮಾನ್ಯ., ಆದರೆ ಇದು ಮತ್ತೆ ಮತ್ತೆ ಸಂಭವಿಸಿದರೆ, ಪೂರ್ವಜರ ಶಾಂತಿಗಾಗಿ ನೀವು ಕ್ರಮಗಳನ್ನು ತೆಗೆದುಕೊಳ್ಳಬೇಕು.
 

ಅಶುಭ ಘಟನೆಯ ಸಂಕೇತವಾಗಿದೆ
ಆಹಾರದಲ್ಲಿ ಪದೇ ಪದೇ ಕೂದಲು ಸಿಗೋದು ಭವಿಷ್ಯದಲ್ಲಿ ಸಂಭವಿಸುವ ಕೆಲವು ಕೆಟ್ಟ ಘಟನೆಯ ಸಂಕೇತವಾಗಿರಬಹುದು. ಅಥವಾ ಜೀವನದಲ್ಲಿ ಉಂಟಾಗುವ ನಕಾರಾತ್ಮಕ ಬದಲಾವಣೆಯನ್ನ (negative changes) ಇದು ಸೂಚಿಸುತ್ತದೆ. ನೀವು ತಿನ್ನಲು ಕುಳಿತಾಗಲೆಲ್ಲಾ ನಿಮ್ಮ ತಟ್ಟೆಯಲ್ಲಿ ಕೂದಲು ಸಿಕ್ಕರೆ, ಅದು ಭವಿಷ್ಯದಲ್ಲಿ ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕೂದಲಿರುವಂತಹ ಆಹಾರ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತೆ. 

ಶಕ್ತಿಯ ಹರಿವಿಗೆ ಅಡ್ಡಿಯಾಗಬಹುದು
ಕೂದಲು ಶಕ್ತಿ ಮತ್ತು ಚೈತನ್ಯದೊಂದಿಗೆ ಸಂಬಂಧ ಹೊಂದಿದೆ, ಇದು ದೇಹದೊಳಗಿನ ಚೈತನ್ಯದ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ. ಆಹಾರದಲ್ಲಿ ಕೂದಲು ಪದೇ ಪದೇ ಕಾಣಿಸಿಕೊಂಡಾಗ, ಅದು ಶಕ್ತಿಯ ಹರಿವಿನಲ್ಲಿ ಅಡಚಣೆ ಅಥವಾ ಚೈತನ್ಯದಲ್ಲಿ ತೊಂದರೆಯ ಸೂಚನೆ. ಇದು ದೈಹಿಕ, ಭಾವನಾತ್ಮಕ ಅಥವಾ ಆಧ್ಯಾತ್ಮಿಕ ಅಸಮತೋಲನವನ್ನುಂಟು (Emotional and Spiritual Imbalance in life) ಮಾಡಬಹುದು. 

ನಕಾರಾತ್ಮಕತೆಯ ಸಂಕೇತ
ಆಹಾರದಲ್ಲಿ ಹಠಾತ್ ಕೂದಲು ಸಿಗೋದು ಕಲ್ಮಶದ ಸಂಕೇತ. ಜ್ಯೋತಿಷ್ಯದ ಪ್ರಕಾರ, ಇದರಿಂದ  ಜೀವನದಲ್ಲಿ ನಕಾರಾತ್ಮಕ ಶಕ್ತಿ ಪ್ರಭಾವ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಆಲೋಚನೆಗಳು(negative thoughts) ಮತ್ತು ಕ್ರಿಯೆಗಳನ್ನು ಶುದ್ಧವಾಗಿಡಬೇಕು.  ಈ ಬಗ್ಗೆ ಎಚ್ಚರವಿರಲಿ. 

ಇದು ಪಿತೃ ದೋಷಕ್ಕೆ ಕಾರಣವೇ?
ಒಬ್ಬ ವ್ಯಕ್ತಿಯ ಜಾತಕದಲ್ಲಿ ಪಿತ್ರ ದೋಷವಿದ್ದರೆ, ಅವನು ಹಲವು ಸಮಸ್ಯೆ ಹೊಂದಬಹುದು. ಆಹಾರದಲ್ಲಿ ಕೂದಲು ಸಿಗೋದು ಸಹ ಪಿತೃ ದೋಷಕ್ಕೆ ಕಾರಣ. ಪಿತೃ ದೋಷ ನಿವಾರಣೆಗಾಗಿ ನೀವು ಜ್ಯೋತಿಷಿಗಳ ಸಹಾಯ ಪಡೆದುಕೊಳ್ಳಬಹುದು. ಇಲ್ಲಾಂದ್ರೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. 
 

Latest Videos

click me!