ಶಿವನ ಪೂಜೆಗೇಕೆ ಕುಂಕಮ ಬಳಸೋಲ್ಲ? ಏನೀದಕ್ಕೆ ಕಾರಣ?

First Published Jul 8, 2023, 5:17 PM IST

ಶಿವನ ಆರಾಧನೆಯಲ್ಲಿ ಕೆಲವು ವಸ್ತುಗಳನ್ನು ಅರ್ಪಿಸೋದು ಸೂಕ್ತ, ಆದರೆ ಶಿವನ ಪೂಜೆಯಲ್ಲಿ ಕೆಲವು ವಸ್ತುಗಳನ್ನು ಅರ್ಪಿಸಲಾಗೋದಿಲ್ಲ, ಅವುಗಳನ್ನು ಅರ್ಪಿಸಿದ್ರೆ ಪೂಜೆ ಫಲ ನೀಡೋದಿಲ್ಲವಂತೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ. 

ಶಿವನನ್ನು(Lord SHiva) ದೇವರ ದೇವರೆಂದು ಪೂಜಿಸಲಾಗುತ್ತೆ ಮತ್ತು ಆತನನ್ನು ಪೂಜಿಸುವ ಮೂಲಕ, ಭಕ್ತರ ಎಲ್ಲಾ ಬಯಕೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಶಿವ ಪೂಜೆಯಲ್ಲಿ ಕೆಲವು ವಿಶೇಷ ವಸ್ತುಗಳನ್ನು ಮಾತ್ರ ಅರ್ಪಿಸಬೇಕು, ಆಗ ಮಾತ್ರ ಶಿವನ ಅನುಗ್ರಹಕ್ಕೆ ಪಾತ್ರರಾಗ್ತೇವೆ. ಮುಖ್ಯವಾಗಿ ಶಿವನ ಆರಾಧನೆಯಲ್ಲಿ, ಶ್ರೀಗಂಧ, ಬಿಲ್ವ ಪತ್ರೆ ಮತ್ತು ಅಕ್ಕಿಯನ್ನು ಅರ್ಪಿಸಲಾಗುತ್ತೆ, ಆದರೆ ಅರಿಶಿನ ಮತ್ತು ಕುಂಕುಮ ಅರ್ಪಿಸಬಾರದು ಎನ್ನಲಾಗುತ್ತೆ.. ಕುಂಕುಮವನ್ನು ಯಾವುದೇ ದೇವ ಅಥವಾ ದೇವತೆಯ ಪೂಜೆಯಲ್ಲಿ ಬಳಸಲಾಗುತ್ತೆ, ಆದರೆ ಅದನ್ನು ಶಿವ ಪೂಜೆಯಲ್ಲಿ ಬಳಸೋದನ್ನು ನಿಷೇಧಿಸಲಾಗಿದೆ ಯಾಕೇ?.

ಶಿವನು ಎಲ್ಲಾ ಆಡಂಬರದಿಂದ ದೂರವಿರುತ್ತಾರೆ, ಆದ್ದರಿಂದ ಅಂತಹದೇ ವಸ್ತುಗಳನ್ನು ಅವನಿಗೆ ಅರ್ಪಿಸಲಾಗುತ್ತೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ, ಶಿವನಿಗೆ ಭಸ್ಮವನ್ನು ನೀಡಲಾಗುತ್ತೆ. ಶಿವ ಪೂಜೆಯಲ್ಲಿ(Worship) ಕುಂಕುಮದ ಬಳಕೆಯನ್ನು ಏಕೆ ನಿಷೇಧಿಸಲಾಗಿದೆ ಎಂಬುದರ ಜ್ಯೋತಿಷ್ಯ ಕಾರಣಗಳ ಬಗ್ಗೆ ಇಲ್ಲಿ ತಿಳಿಯೋಣ.

Latest Videos


ಕುಂಕುಮ(Kumkum) ಸೌಂದರ್ಯದ ಸಂಕೇತ
ಕುಂಕುಮವನ್ನು ಸೌಂದರ್ಯದ ಸಂಕೇತವೆಂದು ಪರಿಗಣಿಸಲಾಗುತ್ತೆ ಮತ್ತು ಇದು ಅದೃಷ್ಟಕ್ಕೆ ಸಂಬಂಧಿಸಿದೆ. ವಿವಾಹಿತ ಮಹಿಳೆಯರು ಸಹ ಕುಂಕುಮವನ್ನು ಬಳಸುತ್ತಾರೆ. ಶಿವನನ್ನು ವೈರಾಗಿ ಎಂದು ಕರೆಯಲಾಗುತ್ತೆ, ಆದ್ದರಿಂದ ಅವನಿಗೆ ಮಹಿಳೆಯರಿಗೆ ಸಂಬಂಧಿಸಿದ ವಸ್ತುಗಳೊಂದಿಗೆ ಯಾವುದೇ ಸಂಬಂಧವಿಲ್ಲ. ಈ ಕಾರಣಕ್ಕಾಗಿ, ಶಿವನಿಗೆ ಕುಂಕುಮವನ್ನು ಅರ್ಪಿಸೋದಿಲ್ಲ.  ಕುಂಕುಮವನ್ನು ಸ್ತ್ರೀ ಅಂಶವೆಂದು ಪರಿಗಣಿಸಲಾಗುತ್ತೆ, ಆದ್ದರಿಂದ ಕುಂಕುಮವನ್ನು ಶಿವಲಿಂಗದ ಮೇಲೆ ಅರ್ಪಿಸಬಾರದು ಎನ್ನಲಾಗುತ್ತೆ.

ಕುಂಕುಮವನ್ನು ಅರಿಶಿನದಿಂದ(Turmeric) ತಯಾರಿಸಲಾಗುತ್ತೆ
ಕುಂಕುಮವು ಅರಿಶಿನದಿಂದ ತಯಾರಿಸಿದ ವಸ್ತುವಾಗಿದೆ ಮತ್ತು ಜ್ಯೋತಿಷ್ಯದಲ್ಲಿ, ಅರಿಶಿನವನ್ನು ಶಿವಲಿಂಗದ ಮೇಲೆ ಅರ್ಪಿಸೋದನ್ನು ಸಹ ನಿಷೇಧಿಸಲಾಗಿದೆ. ಶಿವಲಿಂಗದ ಮೇಲೆ ಅರಿಶಿನವನ್ನು ಅರ್ಪಿಸೋದರಿಂದ ಶಿವನ ಪೂಜೆಯ ಫಲ ಸಿಗೋದಿಲ್ಲ ಮತ್ತು ಶಿವನು ಕೋಪಗೊಳ್ಳಬಹುದು ಎಂದು ನಂಬಲಾಗಿದೆ.

ಮಹಿಳೆಯರ ಸೌಂದರ್ಯ(Beauty) ಹೆಚ್ಚಿಸಲು ಅರಿಶಿನವನ್ನು ಬಳಸಲಾಗುತ್ತೆ. ಅರಿಶಿನವು ಸ್ತ್ರೀ ಅಂಶಗಳೊಂದಿಗಿನ ಸಂಬಂಧದಿಂದಾಗಿ ಶಿವನಿಗೆ ಪ್ರಿಯವಲ್ಲ. ಕುಂಕುಮವನ್ನು ಅರಿಶಿನದಿಂದ ತಯಾರಿಸೋದರಿಂದ, ಇದನ್ನು ಸಹ ಶಿವನ ಪೂಜೆಯಲ್ಲಿ ಬಳಸಲಾಗೋದಿಲ್ಲ.

lord shiva

ಶಿವನನ್ನು ವೈರಾಗಿ ಎಂದು ಕರೆಯಲಾಗುತ್ತೆ 
ಭಗವಾನ್ ಶಿವನು ವೈರಾಗಿ ಮತ್ತು ಲೌಕಿಕ ಸಂತೋಷ ಅಥವಾ ಅದಕ್ಕೆ ಸಂಬಂಧಿಸಿದ ವಸ್ತುಗಳಿಗೆ ಯಾವುದೇ ಸಂಬಂಧ ಹೊಂದಿಲ್ಲ. ಭಗವಾನ್ ಶಿವನು ಲೌಕಿಕ ಸುಖಗಳಿಂದ ದೂರವಿರುವ ಕೈಲಾಸದಲ್ಲಿ(Kailasa) ವಾಸಿಸುವ ಸಂನ್ಯಾಸಿ. ಲೌಕಿಕ ಸುಖಗಳನ್ನು ಸಹ ಅವರು ತ್ಯಜಿಸಿದ್ದಾರೆ, ಹಾಗಾಗಿ ಅವರಿಗೆ ಯಾವುದೇ ಸೌಂದರ್ಯ ವಸ್ತುಗಳನ್ನು ಅರ್ಪಿಸದಂತೆ ಸಲಹೆ ನೀಡುತ್ತಾರೆ.. ಆದ್ದರಿಂದ, ಶಿವನ ಪೂಜೆಯಲ್ಲಿ ಕುಂಕುಮದ ಬಳಕೆಯನ್ನು ನಿಷೇಧಿಸಲಾಗಿದೆ.

ಶಿವ ವಿನಾಶಕ
ಸೌಭಾಗ್ಯವನ್ನು ರಕ್ಷಿಸಲು ಮಹಿಳೆಯರು ಕುಂಕುಮವನ್ನು ಹಚ್ಚುತ್ತಾರೆ ಎಂದು ನಂಬಲಾಗಿದೆ ಮತ್ತು ಶಿವನನ್ನು ವಿನಾಶಕ ಎಂದು ಪರಿಗಣಿಸಲಾಗುತ್ತೆ. ಈ ಕಾರಣಕ್ಕಾಗಿ, ಕುಂಕುಮವು ಶಿವನೊಂದಿಗೆ ಸಂಬಂಧ ಹೊಂದಿಲ್ಲ.ಬದಲಾಗಿ, ಶ್ರೀಗಂಧ(Sandalwood) ಅಥವಾ ಭಸ್ಮವನ್ನು ಹಚ್ಚಿ ಶಿವನನ್ನು ಮೆಚ್ಚಿಸಬಹುದು. ಅಷ್ಟೇ ಅಲ್ಲ ಶಿವನ ಪೂಜೆಯಲ್ಲಿ ಭಾಂಗ್, ಧತುರಾವನ್ನು ನೀಡಲಾಗುತ್ತೆ, ಇದನ್ನು ಸಾಮಾನ್ಯವಾಗಿ ಇತರ ಸ್ಥಳಗಳಲ್ಲಿ ಬಳಸಲಾಗೋದಿಲ್ಲ.
 

ಕುಂಕುಮವನ್ನು ಪಾರ್ವತಿ(Goddess Parvathi) ದೇವಿಗೆ ಅರ್ಪಿಸಲಾಗುತ್ತೆ.
ಶಿವನ ಪೂಜೆಯಲ್ಲಿ ಕುಂಕುಮವನ್ನು ನಿಷೇಧಿಸಲಾಗಿದ್ದರೂ, ಮಾತಾ ಪಾರ್ವತಿಗೆ ಖಂಡಿತವಾಗಿಯೂ ಅರ್ಪಿಸಲಾಗುತ್ತೆ. ಹೀಗೆ ಮಾಡೋದ್ರಿಂದ, ತಾಯಿಯ ಕೃಪೆಯೊಂದಿಗೆ, ಶಿವನ ಅನುಗ್ರಹವನ್ನು ಸಹ ಪಡೆಯುತ್ತೀರಿ ಯಾಕಂದ್ರೆ  ಪಾರ್ವತಿ ದೇವಿ ಶಿವನ ಅರ್ಧಂಗಿ ಮತ್ತು ಆಕೆಯ ನೆಚ್ಚಿನ ವಸ್ತು ಕುಂಕುಮ.ಈ ಕಾರಣಕ್ಕಾಗಿ, ನೀವು ಶಿವನನ್ನು ಪೂಜಿಸೋದಾದ್ರೆ, ಶಿವನೊಂದಿಗೆ ಪಾರ್ವತಿ ದೇವಿಯನ್ನು ಪೂಜಿಸಿ ಮತ್ತು ಶಿವನ ತಲೆಗೆ ಶ್ರೀಗಂಧದ ತಿಲಕ ಮತ್ತು ಮಾತಾ ಪಾರ್ವತಿಗೆ  ಕುಂಕುಮ ಅಥವಾ ಅರಿಶಿನ ತಿಲಕವನ್ನು ಹಚ್ಚಿ.
 

click me!