ಸಾವಿಗೆ ಕಾರಣವಾಯ್ತು ಮೂರು ಶಾಪ, ಇಲ್ಲದಿದ್ದರೆ ಕರ್ಣನಿಗೆ ಸಾವೇ ಇರಲಿಲ್ಲ!

First Published Jul 7, 2023, 6:08 PM IST

ಕೌರವರ ಸೇನಾಧಿಪತಿಯಾದ ಕರ್ಣನು ಅರ್ಜುನನಿಗಿಂತ ದೊಡ್ಡ ಬಿಲ್ಲುಗಾರನಾಗಿದ್ದನು. ಮಹಾಭಾರತ ಯುದ್ಧದಲ್ಲಿ ಕೌರವರು ಸೋತರೂ ಸಹ, ಮಹಾಭಾರತ ಯುದ್ಧವನ್ನು ಕರ್ಣನಿಲ್ಲದೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಮಹಾಭಾರತದ(Mahabharat) ಶಕ್ತಿಶಾಲಿ ಮತ್ತು ಅತಿದೊಡ್ಡ ದಾನಿ ಯೋಧ ಕರ್ಣನನ್ನು ಜನರು ಇನ್ನೂ ದಯೆಯಿಂದ ನೋಡುತ್ತಾರೆ. ಇದಕ್ಕೆ ಕಾರಣ, ಯುದ್ಧದ ಫಲಿತಾಂಶದ ಬಗ್ಗೆ ಯೋಚಿಸದೆ, ಅವನು ತನ್ನ ರಕ್ಷಾಕವಚವನ್ನು ದಾನ ಮಾಡಿದನು. ಅದಕ್ಕಾಗಿಯೇ ಆತ ದಾನ ಶೂರ ಕರ್ಣನಾದನು. ಕರ್ಣ ರಾಜಕುಮಾರನಾಗಿದ್ದರೂ, ಅವನಿಗೆ ರಾಜ್ಯವಿರಲಿಲ್ಲ. ಹುಟ್ಟಿನಿಂದ ಕ್ಷತ್ರಿಯನಾಗಿದ್ದರೂ,  ದೋಣಿ ಚಾಲಕನ ಮನೆಯಲ್ಲಿ ಬೆಳೆದ. ಈ ಕಾರಣಕ್ಕಾಗಿ, ಅವನಿಗೆ ಸುತ ಪುತ್ರ ಎಂಬ ಹೆಸರೂ ಬಂದಿತು. ಕರ್ಣನ ಕಥೆ ಇದು ಮಾತ್ರವಲ್ಲ, ಕರ್ಣನ ದುರಂತ ಅಂತ್ಯದ ಬಗ್ಗೆ ಹೆಚ್ಚಿನ ಕಥೆಗಳಿವೆ. ಕರ್ಣನಿಗೆ ಮಾರಣಾಂತಿಕವೆಂದು ಸಾಬೀತಾದ ಮೂರು ಶಾಪಗಳನ್ನು ತಿಳಿದುಕೊಳ್ಳೋಣ.

ಕರ್ಣನು(Karna) ಸೂರ್ಯನ ವರದಲ್ಲಿ ಹುಟ್ಟಿದ ಕುಂತಿಯ ಮಗ ಎಂದು ನಮಗೆಲ್ಲ ಗೊತ್ತು. ಕರ್ಣನು ಜನಿಸಿದ ಕೂಡಲೇ, ಕುಂತಿ ಅವನನ್ನು ಗಂಗಾ ನದಿಯಲ್ಲಿ ಬಿಟ್ಟಳು, ಏಕೆಂದರೆ ಕುಂತಿ ಅವಿವಾಹಿತೆ. ಇದಾದ ನಂತರ, ಕರ್ಣನನ್ನು ದೋಣಿ ನಡೆಸುವ ಅಂಬಿಗ ರಕ್ಷಿಸಿ ಅವನ ಹೆಂಡತಿ ರಾಧಾ ಜೊತೆ ಸೇರಿ ಪೋಷಿಸಲು ಪ್ರಾರಂಭಿಸಿದ. ಕರ್ಣನು ಕ್ಷತ್ರಿಯರ ಗುಣಗಳನ್ನು ಹೊಂದಿದ್ದರೂ, ರಾಜಮನೆತನದಲ್ಲಿ ಇಲ್ಲದ ಕಾರಣ, ಪಾಂಡವರೊಂದಿಗೆ ತಂತ್ರಗಳನ್ನು ಕಲಿಯಲು ಅವಕಾಶ ಸಿಗಲಿಲ್ಲ. ಇದರ ನಂತರ, ಕರ್ಣ ತನ್ನನ್ನು ಬ್ರಾಹ್ಮಣ ಎಂದು ಹೇಳಿಕೊಳ್ಳುವ ಮೂಲಕ ಪರಶುರಾಮನಿಂದ ಪಾಠಗಳನ್ನು ಕಲಿತನು.

Latest Videos


ಮೊದಲ ಶಾಪ
ಶಿಕ್ಷಣ ಮುಗಿದ ಒಂದು ದಿನದ ನಂತರ, ಕರ್ಣನು ಪರಶುರಾಮನೊಂದಿಗೆ ಕಾಡಿನಲ್ಲಿ ತಿರುಗಾಡುತ್ತಿದ್ದ. ಆಗ ಪರಶುರಾಮನಿಗೆ ಆಯಾಸವಾದಾಗ, 'ಗುರೂಜಿ, ನಿಮ್ಮ ತಲೆಯನ್ನು ನನ್ನ ತೊಡೆಯ ಮೇಲೆ ಇಟ್ಟುಕೊಂಡು ಮಲಗಿ,' ಎಂದನು. 
 

ಸ್ವಲ್ಪ ಸಮಯದ ನಂತರ, ಒಂದು ಚೇಳು ಅಲ್ಲಿಗೆ ಬಂದು ಕರ್ಣನ ತೊಡೆಯ ಮೇಲೆ ಕಚ್ಚಿತು. ಆದರೆ ಕರ್ಣನು ಅಲುಗಾಡಲೇ ಇಲ್ಲ, ಏಕೆಂದರೆ ಕರ್ಣನ ಚಲನೆಯು ಪರಶುರಾಮನ ನಿದ್ರೆಯನ್ನು(Sleep) ಭಂಗಗೊಳಿಸುತ್ತದೆ ಎಂದು. ಆದರೆ ಪರಶುರಾಮನಿಗೆ ಎಲ್ಲವೂ ಗೊತ್ತಿತ್ತು. ಈ ಘಟನೆಯಿಂದ, ಕರ್ಣನು ಬ್ರಾಹ್ಮಣನಾಗಿರಲು ಸಾಧ್ಯವಿಲ್ಲ ಎಂದು ಪರಶುರಾಮ ಅರ್ಥಮಾಡಿಕೊಂಡ. ಅವರು ಕರ್ಣನನ್ನು ಅವನ ಗುರುತನ್ನು ಕೇಳಿದರು. ಆಗ  ಕರ್ಣ ಪರಶುರಾಮನಿಗೆ ಎಲ್ಲವನ್ನೂ ಮರೆಮಾಚದೆ ಹೇಳಿದನು. ಸತ್ಯವನ್ನು ತಿಳಿದ ನಂತರ ಪರಶುರಾಮ ಕೋಪಗೊಂಡನು. ಮೋಸದಿಂದ ಕಲಿತ ಜ್ಞಾನದಿಂದಾಗಿ ಅಗತ್ಯ ಸಮಯ ಬಂದಾಗ, ಕರ್ಣ ತನ್ನ ಎಲ್ಲಾ ಜ್ಞಾನವನ್ನು ಮರೆತು ಬಿಡಲಿ ಎಂದು ಪರಶುರಾಮ ಕರ್ಣನನ್ನು ಶಪಿಸಿದ. ಇದು ಪರಶುರಾಮನಿಂದ ಕರ್ಣನಿಗೆ ಬಂದ ಮೊದಲ ಶಾಪ.
 

ಕರ್ಣನಿಗೆ ಭೂಮಾತೆಯಿಂದ ಮತ್ತೊಂದು ಶಾಪ ಬಂದಿತು
ಇದರ ನಂತರ, ಕರ್ಣನು ಭೂಮಾತೆಯಿಂದ ಶಾಪ ಪಡೆದನು. ಒಮ್ಮೆ ಕರ್ಣ ಯಾವುದೋ ಕೆಲಸಕ್ಕಾಗಿ ಹೊರಗೆ ಹೋಗಿದ್ದ. ದಾರಿಯಲ್ಲಿ ನಿರಂತರವಾಗಿ ಅಳುತ್ತಿದ್ದ ಪುಟ್ಟ ಹುಡುಗಿಯನ್ನು ನೋಡಿದನು. ಕರ್ಣನು ಅಳಲು ಕಾರಣವನ್ನು ಕೇಳಿದಾಗ, 'ನನ್ನ ಎಲ್ಲಾ ಹಾಲು (Milk) ಚೆಲ್ಲಿದೆ. ನಾನು ಈಗ ಮನೆಗೆ ಹೇಗೆ ಹೋಗಲಿ? ನಾನು ತುಂಬಾ ಬೈಯಿಸಿಕೊಳ್ಳಬೇಕಾಗುತ್ತದೆ, ಎಂದಳು. ಕರ್ಣನಿಗೆ ಇದರ ಬಗ್ಗೆ ಸಹಾನುಭೂತಿ ಉಂಟಾಯಿತು. ತನ್ನ ಶಕ್ತಿಯಿಂದ ಭೂಮಿಯ ಎದೆಯನ್ನು ಹಿಸುಕಿ ಆ ಹಾಲನ್ನು ತೆಗೆದು ಕೊಟ್ಟನು. ಭೂಮಿ ತಾಯಿಗೆ ಇದು ಸ್ವಲ್ಪವೂ ಇಷ್ಟವಾಗಲಿಲ್ಲ. ಸಮಯ ಬಂದಾಗ ಕರ್ಣನನ್ನು ಬಿಟ್ಟು ಹೋಗುತ್ತೇನೆ ಎಂದು ಶಪಿಸಿದಳು.

ಕರ್ಣನ ಮೂರನೇ ಶಾಪ
ಒಂದು ದಿನ ಕರ್ಣ ಕಾಡಿನಲ್ಲಿ ಸಮರ ಕಲೆಗಳನ್ನು ಅಭ್ಯಾಸ ಮಾಡುತ್ತಿದ್ದನು. ಮರಗಳ ಹಿಂದೆ ಕಾಡು ಪ್ರಾಣಿ ಇದೆ ಎಂದು ಆತ ಭಾವಿಸಿ ಬಾಣವನ್ನು(Arrow) ಹಾರಿಸಿದರು. ಆದರೆ ಹತ್ತಿರ ಹೋಗಿ ನೋಡಿದರೆ, ಅದು ಬ್ರಾಹ್ಮಣರ ಹಸು ಎಂದು ಗೊತ್ತಾಯಿತು. ಬ್ರಾಹ್ಮಣನಿಗೆ ಬೇರೇನೂ ಜೊತೆ ಇರಲಿಲ್ಲ ಮತ್ತು ತನ್ನ ಪ್ರೀತಿಯ ಹಸುವಿನ ಸಾವಿನಿಂದ ತೀವ್ರ ದುಃಖಿತನಾಗಿದ್ದನು. ಸಮಯ ಬಂದಾಗ, ನೀವೂ ದಾರಿತಪ್ಪುತ್ತೀರಿ ಮತ್ತು ಸಾವಿನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗೋದಿಲ್ಲ ಎಂದು ಅವರು ಕರ್ಣನಿಗೆ ಶಾಪ ಹಾಕಿದರು.

ಕುರುಕ್ಷೇತ್ರದಲ್ಲಿ ಮೂರೂ ಶಾಪಗಳು ಫಲಿಸಿದವು
ಈ ಮೂರು ಶಾಪಗಳು ಕುರುಕ್ಷೇತ್ರ(Kurukshetra) ಭೂಮಿಯಲ್ಲಿ ಫಲಿಸಿದವು. ತನ್ನನ್ನು ರಕ್ಷಿಸಿಕೊಳ್ಳಲು, ಕರ್ಣ ಬ್ರಹ್ಮಾಸ್ತ್ರವನ್ನು ಚಲಾಯಿಸಲು ಪ್ರಯತ್ನಿಸಿದನು ಆದರೆ ಪರಶುರಾಮನ ಶಾಪದಿಂದಾಗಿ, ಅವನು ಮಂತ್ರವನ್ನು ಮರೆತನು. ಭೂಮಾತೆಯ ಶಾಪದಿಂದಾಗಿ, ಕರ್ಣನ ರಥದ ಚಕ್ರವು ಕುಸಿಯಿತು ಮತ್ತು ಅಂತಿಮವಾಗಿ ಬ್ರಾಹ್ಮಣನ ಶಾಪವು ಪರಿಣಾಮ ಬೀರಿತು. ಕರ್ಣನು ತನ್ನ ರಥದ ಚಕ್ರವನ್ನು ಮೇಲೆತ್ತುವಾಗ ಅವನು ಸಾವನ್ನಪ್ಪಿದನು. ಈ ರೀತಿಯಾಗಿ, ಕರ್ಣನು ಪಡೆದ ಈ ಮೂರು ಶಾಪಗಳು ಅವನಿಗೆ ಮಾರಕವಾಯಿತು.
 

click me!