ರಾಮಾಯಣದ (Ramayan) ಪ್ರಕಾರ, ಭಗವಾನ್ ಶಿವನು ರಾಮ ಸೇವೆಗಾಗಿ ಹನುಮಂತನಾಗಿ ಅವತರಿಸಿದನು ಎನ್ನಲಾಗಿದೆ. ಈ ಕಾರಣಕ್ಕಾಗಿ, ಹನುಮಂತನನ್ನು ರುದ್ರಾವತಾರ ಎಂದು ಪರಿಗಣಿಸಲಾಗುತ್ತದೆ. ಆದರೆ, ಹನುಮಂತ ಕೋತಿಯ ರೂಪದಲ್ಲಿ ಏಕೆ ಜನಿಸಿದರು ಎಂಬುದು ಇನ್ನೂ ರಹಸ್ಯವಾಗಿದೆ.
ಶಾಪದಿಂದಾಗಿ ಕೋತಿಯ ರೂಪ
ದಂತಕಥೆಯ ಪ್ರಕಾರ, ಹನುಮಂತನ ತಾಯಿ ಅಂಜನಾ (Anjana mother of Anjaneya)ಹಿಂದಿನ ಜನ್ಮದಲ್ಲಿ ಇಂದ್ರರಾಜನ ಅರಮನೆಯ ಅಪ್ಸರೆಯಾಗಿದ್ದಳು. ಅವಳ ಹೆಸರು ಪುಂಜಿಕಸ್ಥಲ. ಅಪ್ಸರೆಯಾಗಿದ್ದರಿಂದ ಅವಳು ಆಕರ್ಷಕವಾಗಿರುತ್ತಿದ್ದಳು ಮಾತ್ರವಲ್ಲದೆ ಸ್ವಭಾವತಃ ಹಾಸ್ಯಪ್ರವೃತ್ತಿಯುಳ್ಳವಳಾಗಿದ್ದಳು. ಇದುವೇ ಅವಳಿಗೆ ಶಾಪ ಸಿಗಲು ಕಾರಣವಾಯಿತು.
ತಮಾಷೆಗಾಗಿ ಋಷಿ ಮುನಿಗಳನ್ನು ಅಪಹಾಸ್ಯ ಮಾಡಿದ ಕಾರಣ, ಪುಂಜಿಕಸ್ಥಲ ಮುಂದಿನ ಜನ್ಮದಲ್ಲಿ ವಾನರ ರೂಪದಲ್ಲಿ ಜನಿಸುವ ಶಾಪವನ್ನು ಎದುರಿಸಬೇಕಾಯಿತು. ಋಷಿಯ ಶಾಪಕ್ಕೆ (curse) ಹೆದರಿದ ಪುಂಜಿಕಸ್ಥಲ ತನ್ನ ಅಪರಾಧವನ್ನು ಅರಿತುಕೊಂಡು, ಕ್ಷಮೆಯಾಚಿಸಿದಾಗ, ಋಷಿಗಳು ಕ್ಷಮಿಸಿದರು. ನಂತರ ಋಷಿ ಕೋತಿ ರೂಪದ ನಂತರವೂ, ನೀನು ಅಪ್ರತಿಮ ತೇಜಸ್ವಿನಿ ಆಗುವೆ, ಜೊತೆಗೆ ದೈವಿಕ ಮತ್ತು ಯಶಸ್ವಿ ಮಗನನ್ನು ಪಡೆಯುವೆ ಎಂದು ಹರಸಿದರು.
ತಪಸ್ಸಿನಿಂದ ವರದಾನ
ಶಾಪದ ನಂತರ, ಪುಂಜಿಕಸ್ಥಲ ತಪಸ್ಸಿನ ಮಾರ್ಗವನ್ನು ಆರಿಸಿಕೊಂಡಳು ಮತ್ತು ತೀವ್ರವಾದ ತಪಸ್ಸು ಮಾಡಲು ಕಾಡಿಗೆ ಹೋದಳು, ಅಲ್ಲಿ ಅವಳು ಶಿವನಿಗೆ ತಪಸ್ಸು ಮಾಡಿದಳು. ಶಿವನು ಸಂತೋಷಗೊಂಡು ಪುಂಜಿಕಸ್ಥಲಗೆ ದರ್ಶನ ನೀಡಿದನು.
ಶಾಪದ ಪರಿಣಾಮವನ್ನು ಕೊನೆಗೊಳಿಸಲು ಪುಂಜಿಕಸ್ಥಲ ಶಿವನನ್ನು ಪ್ರಾರ್ಥಿಸಿದಳು. ಆವಾಗ ಶಿವನು ಈ ಶಾಪದ ಮಹತ್ವವನ್ನು ಪುಂಜಿಕಸ್ಥಲಗೆ ವಿವರಿಸಿದನು, ಅಷ್ಟೇ ಅಲ್ಲದೇ ತಾನು ಸ್ವತಃ ನಿನ್ನ ಗರ್ಭದಿಂದ ಜನಿಸುತ್ತೇನೆ ಮತ್ತು ರಾಮನ ಯುಗದಲ್ಲಿ ಜನಿಸುತ್ತೇನೆ ಎಂದು ಹರಸಿದನು. ಇದನ್ನು ಕೇಳಿ ಪುಂಜಿಕಸ್ಥಲಗೆ ಅಪಾರ ಸಂತೋಷವಾಯಿತು..
ಪುಂಜಿಕಸ್ಥಲ ತನ್ನ ತಪಸ್ಸನ್ನು ಮತ್ತಷ್ಟು ಮುಂದುವರೆಸಿದಳು. ಮುಂದಿನ ಜನ್ಮದಲ್ಲಿ, ಆಕೆ ಅಂಜನಿಯಾಗಿ ಜನಿಸಿ ವನರರಾಜ ಕೇಸರಿಯನ್ನು ವಿವಾಹವಾದರು. ಮದುವೆಯ ನಂತರ, ಶಿವನ ಹೇಳಿಕೆಯು ನಿಜವಾಯಿತು ಮತ್ತು ಶಿವನು ಅಂಜನಿ ಮಾತಾ ಮತ್ತು ಕೇಸರಿಯ ಪುತ್ರ ಹನುಮಂತನಾಗಿ (Hanuman) ಜನಿಸಿದನು.
ಮಗನಿಗೆ ಜನ್ಮ ನೀಡುವಾಗ ಅಂಜನಿ ಮಾತಾ ವಾನರ ರೂಪದಲ್ಲಿದ್ದ ಕಾರಣ, ಹನುಮಂತ ಕೂಡ ಕೋತಿಯ ರೂಪದಲ್ಲಿ ಜನ್ಮ ನೀಡಿದರು ಮತ್ತು ರಾಮನ ಭಕ್ತರಾದರು. ರಾಮ ಭಕ್ತ ಹನುಮನಾಗಿ ಜಗದ್ವಿಖ್ಯಾತನಾದನು. ಮತ್ತೆಲ್ಲವು ನಿಮಗೆ ತಿಳಿದೆ ಇದೆ.