ನಾವು ನಮ್ಮ ಹಿಂದೂ ಧಾರ್ಮಿಕ ನಂಬಿಕೆಗಳನ್ನು(Hindu believes) ನೋಡಿದಾಗ ಕೆಲವೊಂದು ವಿಷಯಗಳನ್ನು ಮಹಿಳೆಯರು ಮಾಡೋದನ್ನು ನಿಷೇಧಿಸಲಾಗಿದೆ. ಪೂಜೆ ಮಾಡೋದು, ತೆಂಗಿನಕಾಯಿ ಒಡೆಯೋದು, ಜನಿವಾರ ಹಾಕೋದನ್ನೆಲ್ಲಾ, ಕೇವಲ ಗಂಡಸರಿಗೆ ಮಾತ್ರ ಸೀಮಿತವಾಗಿರಿಸಿದ್ದಾರೆ. ಆದರೆ ಇದನ್ನ ಯಾಕೆ ಮಾಡಲಾಗಿದೆ ಅನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ಇರೋದಿಲ್ಲ. ಯಾವೆಲ್ಲ ಕೆಲಸ ಮಹಿಳೆಯರು ಮಾಡೊದನ್ನು ನಿಷೇಧಿಸಲಾಗಿದೆ ನೋಡೋಣ.
ಹವನ ಅಥವಾ ಧಾರ್ಮಿಕ ಆಚರಣೆಗಳನ್ನು ಮಾಡುವುದು
ಯಾವುದೇ ಧಾರ್ಮಿಕ ಆಚರಣೆ ಅಥವಾ ಹವನದ (Havan) ಸಮಯದಲ್ಲಿ ಮಹಿಳೆಯರು ಮುಖ್ಯ ಪಾತ್ರ ವಹಿಸೋದಿಲ್ಲ. ಮಹಿಳೆಯರಿಗೆ ತಮ್ಮ ಗಂಡಂದಿರೊಂದಿಗೆ ಕುಳಿತುಕೊಳ್ಳಲು ಮಾತ್ರ ಅವಕಾಶವಿದೆ. ಆದಾಗ್ಯೂ, ಇಲ್ಲಿಯವರೆಗೆ ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವನ್ನು ಬಹಿರಂಗಪಡಿಸಲಾಗಿಲ್ಲ, ಅಥವಾ ಧರ್ಮಗ್ರಂಥಗಳಲ್ಲಿ ಎಲ್ಲಿಯೂ ಈ ಬಗ್ಗೆ ಉಲ್ಲೇಖಿಸಲಾಗಿಲ್ಲ.
ಜನಿವಾರ ಧರಿಸುವುದು
ಹೆಚ್ಚಿನ ಪುರುಷರಿಗೆ ಜನಿವಾರ ಧರಿಸುವ ಹಕ್ಕನ್ನು ನೀಡಲಾಗಿದೆ. ಮಹಿಳೆಯರು ಇದನ್ನು ಧರಿಸುವಂತಿಲ್ಲ ಅಥವಾ ಅದನ್ನು ಮುಟ್ಟುವಂತಿಲ್ಲ. ಧಾರ್ಮಿಕ ದೃಷ್ಟಿಕೋನದಿಂದ ಇದರ ಹಿಂದಿನ ಕಾರಣವೆಂದರೆ ಋತುಚಕ್ರದಿಂದಾಗಿ (periods) ಮಹಿಳೆಯರು ಪವಿತ್ರ ಜನಿವಾರವನ್ನು ಧರಿಸುವಂತಿಲ್ಲ.
ಇವುಗಳನ್ನು ಸ್ಪರ್ಶಿಸಬಾರದು
ಮಹಿಳೆಯರು ಶಿವಲಿಂಗ ಮತ್ತು ಹನುಮಾನ್ ವಿಗ್ರಹವನ್ನು ಮುಟ್ಟಬಾರದು. ಈ ನಂಬಿಕೆಯ ಹಿಂದೆ ಎರಡು ವಾದಗಳಿವೆ. ಮೊದಲನೆಯದಾಗಿ, ಭಜರಂಗಬಲಿ ಬಾಲ ಬ್ರಹ್ಮಚಾರಿ, ಹಾಗಾಗಿ ಹೆಣ್ಣು ಮಕ್ಕಳು ಮುಟ್ಟಬಾರದು ಮತ್ತು ಎರಡನೆಯದಾಗಿ, ಧರ್ಮಗ್ರಂಥಗಳಲ್ಲಿ, ಶಿವಲಿಂಗವನ್ನು ಶಿವನ ಲಿಂಗದ ಪ್ರತಿರೂಪವೆಂದು ಪರಿಗಣಿಸಲಾಗಿದೆ.
ತೆಂಗಿನಕಾಯಿ ಒಡೆಯುವಂತಿಲ್ಲ
ಧಾರ್ಮಿಕ ನಂಬಿಕೆಗಳು ಮಹಿಳೆಯರು ತೆಂಗಿನಕಾಯಿ ಒಡೆಯುವುದನ್ನು ನಿಷೇಧಿಸುತ್ತವೆ. ತೆಂಗಿನಕಾಯಿ (coconut) ಮಹಿಳೆಯ ಗರ್ಭವನ್ನು ಸಂಕೇತಿಸುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಮಹಿಳೆಯರು ತೆಂಗಿನಕಾಯಿಯನ್ನು ಒಡೆಯಬಾರದು. ಮಹಿಳೆಯರು ಧಾರ್ಮಿಕ ಕಾರ್ಯಗಳಲ್ಲಿ ತೆಂಗಿನಕಾಯಿಗಳನ್ನು ಒಡೆಯುವುದರಿಂದ ಮಕ್ಕಳನ್ನು ಪಡೆಯುವಲ್ಲಿ ಸಮಸ್ಯೆ ಉಂಟಾಗುತ್ತದೆ ಎನ್ನಲಾಗಿದೆ.
ಬಲಿ ನೀಡುವುದು
ಮಹಿಳೆಯರು ಬಲಿ ನೀಡುವುದನ್ನು ಸಹ ನಿಷೇಧಿಸಲಾಗಿದೆ. ಹಿಂದಿನ ಕಾಲದಲ್ಲಿ ಬಲಿ ನೀಡುವ ಅಭ್ಯಾಸವಿದ್ದರೂ, ಈಗ ಈ ಅಭ್ಯಾಸವು ಕೊನೆಗೊಂಡಿದೆ. ಧರ್ಮಗ್ರಂಥಗಳಲ್ಲಿ, ಬಲಿ ನೀಡುವ ಅಭ್ಯಾಸವನ್ನು ತಪ್ಪು ಎಂದು ವಿವರಿಸಲಾಗಿದೆ. ಹಾಗಾಗಿ ಇಂದು ಇದನ್ನು ಯಾರೂ ಕೂಡ ಮಾಡುವುದಿಲ್ಲ.