ಚಾಣಕ್ಯನ ಪ್ರಕಾರ ನಿಜವಾದ ಗುರು ಯಾರು? ಈ ಸ್ಥಾನಕ್ಕೆ ಯಾರು ಅರ್ಹರು?

First Published Jul 3, 2023, 4:59 PM IST

ನೀವು ಸಹ ಗುರು ಪೂರ್ಣಿಮೆಯಂದು ಗುರುವಾಗಲು ಯೋಚಿಸುತ್ತಿದ್ದರೆ, ಅದಕ್ಕೂ ಮೊದಲು, ಖಂಡಿತವಾಗಿಯೂ ಚಾಣಕ್ಯನ ಈ ವಿಷಯಗಳನ್ನು ನೆನಪಿನಲ್ಲಿಡಿ. ಗುರುವು ಉತ್ತಮ ಮತ್ತು ಸತ್ಯವಂತನಾಗಿರೋದು ಅವಶ್ಯಕ, ಆಗ ಮಾತ್ರ ಶಿಷ್ಯನ ಜೀವನವು ಸರಿಯಾದ ಮಾರ್ಗದಲ್ಲಿ ಸಾಗುತ್ತದೆ.
 

ಚಾಣಕ್ಯನು ಸ್ವತಃ ವಿದ್ವಾಂಸ ಮತ್ತು ಮಹಾನ್ ಗುರುವಾಗಿದ್ದ. ಚಾಣಕ್ಯ ನೀತಿಯಲ್ಲಿ (Chanakya Niti) ಅವರು ಹೇಳಿರುವ ಪ್ರಕಾರ, ಗುರುವೇ ನಿಮ್ಮನ್ನು ಗೋವಿಂದನನ್ನು ಭೇಟಿಯಾಗುವಂತೆ ಮಾಡುತ್ತಾರಂತೆ, ಅಂದ್ರೆ ದೇವರನ್ನು ಕಾಣುವಂತೆ ಮಾಡ್ತಾರಂತೆ. ಜೀವನವನ್ನು ಯಶಸ್ವಿಗೊಳಿಸಲು ಗುರುವನ್ನು ಹೊಂದಿರುವುದು ಬಹಳ ಮುಖ್ಯ, ಆದರೆ ನೀವು ಗುರು ಪೂರ್ಣಿಮೆಯಂದು ಗುರುವಾಗಲು ಯೋಚಿಸುತ್ತಿದ್ದರೆ, ಅದಕ್ಕೂ ಮೊದಲು ನೀವು ಚಾಣಕ್ಯನ ಈ ನೀತಿಗಳನ್ನು ಪರಿಗಣಿಸಬೇಕು.
 

ಗುರು ಹೇಗಿರಬೇಕು?
ಚಾಣಕ್ಯನ ಪ್ರಕಾರ, ಉತ್ತಮ ಗುರುವನ್ನು (Best Teacher) ಕಂಡುಕೊಂಡರೆ, ಜೀವನ ಸುಧಾರಿಸುತ್ತದೆ, ಆದರೆ ಸದ್ಗುರು ಮೋಸಗಾರನಾಗಿದ್ದರೆ, ಶಿಷ್ಯನ ಜೀವನವು ಹಾಳಾಗುತ್ತದೆ. ದುರಾಶೆ, ಮಮಕಾರ ಮತ್ತು ಅಹಂನಂತಹ ದುರ್ಗುಣಗಳನ್ನು ಹೊಂದಿರದವನೇ ನಿಜವಾದ ಮತ್ತು ಉತ್ತಮ ಗುರು. 
 

Latest Videos


ತನ್ನ ಕರ್ತವ್ಯಗಳಲ್ಲಿ ಪ್ರಾಮಾಣಿಕನಾಗಿರುವ, ಧರ್ಮ, ನೀತಿ ಅನುಸರಿಸುವ ಮತ್ತು ಕರ್ಮವನ್ನು ನಿರ್ವಹಿಸುವ ವ್ಯಕ್ತಿಯು ನಿಜವಾಗಿಯೂ ಗುರು ಎಂದು ಕರೆಯಲ್ಪಡಲು ಅರ್ಹನಾಗಿರುತ್ತಾನೆ. ಅವನಿಂದಲೇ ಶಿಷ್ಯಂದಿರು ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯವಾಗುತ್ತದೆ.

ಚಾಣಕ್ಯನ ನೀತಿಯ ಪ್ರಕಾರ, ನೀರನ್ನು ಫಿಲ್ಟರ್ ಮಾಡಿ ಕುಡಿಯಬೇಕು, ಅದೇ ರೀತಿ, ಯಾವುದೇ ವ್ಯಕ್ತಿಯ ಮಾತು ಮತ್ತು ಕಾರ್ಯಗಳನ್ನು ತಿಳಿದುಕೊಳ್ಳುವ ಮೂಲಕ ಮಾತ್ರ ಸದ್ಗುರುವಾಗಲು ಸಾಧ್ಯ. ಚಾಣಕ್ಯನು ಗುರು ತನ್ನ ತಪ್ಪುಗಳಿಂದ ಕಲಿಯುತ್ತಾನೆ ಮತ್ತು ತನ್ನ ಶಿಷ್ಯನು ತಾನು ಮಾಡಿದ ತಪ್ಪುಗಳನ್ನು ಮಾಡಬಾರದೆಂದು ಬಯಸುತ್ತಾನೆ ಎಂದು ಹೇಳುತ್ತಾನೆ. ಗುರು ಶಿಷ್ಯನ ನ್ಯೂನತೆಗಳನ್ನು ತೆಗೆದುಹಾಕುತ್ತಾನೆ ಮತ್ತು ಅವನ ಸಾಮರ್ಥ್ಯವನ್ನು ಸುಧಾರಿಸುತ್ತಾನೆ.

ನಿಜವಾದ ಗುರುವಿನ ಸಂಕೇತ
ಯಾವುದೇ ಒಬ್ಬ ವ್ಯಕ್ತಿಯು ತನ್ನ ಎಲ್ಲಾ ಆಕಾಂಕ್ಷೆ ಆಸೆಗಳನ್ನು ಮೀರಿ ತನ್ನ ಶಿಷ್ಯನಿಗೆ ಒಳ್ಳೆಯದನ್ನು ಮಾಡುತ್ತಾನೋ ಆತ ನಿಜವಾದ ಗುರು.  ಗುರು ತನ್ನ ಇಂದ್ರಿಯಗಳನ್ನು ಮೀರಿಕೊಂಡಾಗ ಮಾತ್ರ ತನ್ನ ಶಿಷ್ಯರನ್ನು ಕತ್ತಲೆಯಿಂದ ಬೆಳಕಿಗೆ ತರಲು ಸಾಧ್ಯವಾಗುತ್ತದೆ. ಗುರುವಿನ ಜವಾಬ್ದಾರಿ ಬಹಳ ದೊಡ್ಡದು. ಸಮಾಜ ಮತ್ತು ರಾಷ್ಟ್ರದ ಕಲ್ಯಾಣದಲ್ಲಿ ಗುರುವಿನ ಕೊಡುಗೆ ದೊಡ್ಡದು. ಅಂತಹ ಗುರು ನೀವಾಗಿ. 

click me!