Chanakya Niti: ಯಶಸ್ಸಿಗಾಗಿ ಯಾರನ್ನೂ ನಂಬಬೇಡಿ, ಹಿಂದೆ ಚೂರಿ ಹಾಕೋರಿರುತ್ತಾರೆ?

First Published Jul 1, 2023, 4:59 PM IST

ಜೀವನದಲ್ಲಿ ಯಶಸ್ಸು ಸಾಧಿಸುತ್ತಾ ಹೋದಂತೆ ಶತ್ರುಗಳು ಹೆಚ್ಚುತ್ತಾರೆ, ಅವರು ನಿಮ್ಮನ್ನು ಸಾಧ್ಯವಾದಷ್ಟು ಕುಗ್ಗಿಸಲು ಪ್ರಯತ್ನಿಸುತ್ತಾರೆ. ಆದರೆ ಈ ಶತ್ರುಗಳನ್ನು ಧೈರ್ಯದಿಂದ ಎದುರಿಸೋದು ಹೇಗೆ ಅನ್ನೋ ಬಗ್ಗೆ ಚಾಣಕ್ಯ ತಿಳಿಸಿದ್ದಾರೆ ನೋಡಿ. 

ನೀವು ಜೀವನದಲ್ಲಿ(Life) ಏನಾದರು ಸಾಧಿಸಲು ಬಯಸೋದಾದ್ರೆ, ನಿಮ್ಮ ಶತ್ರುಗಳಿಗೆ ನೀವು ಎಂದಿಗೂ ಹೆದರದಿರುವುದು ಮುಖ್ಯ. ಒಬ್ಬ ವ್ಯಕ್ತಿ ಜೀವನದ ಆರಂಭದಲ್ಲಿ ಯಶಸ್ವಿಯಾದಾಗ, ಅನೇಕ ಜನರು ಶತ್ರುಗಳಾಗುತ್ತಾರೆ. ಈ ಶತ್ರುಗಳು ನಿಮ್ಮನ್ನು ನಿಮ್ಮ ದಾರಿಯಿಂದ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಾರೆ. ಅಡೆತಡೆಗಳನ್ನು ಸೃಷ್ಟಿಸುವ ಮೂಲಕ ಅವರು ನಿಮ್ಮ ಯೋಜನೆಗಳನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೆ ಅವುಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

ನೀವು ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಬೇಕಾಗಿದೆ. ಪ್ರತಿದಿನ ನಿಮ್ಮನ್ನು ಬಲಪಡಿಸಿಕೊಳ್ಳಿ. ಈ ವಿಚಿತ್ರ ಸಂದರ್ಭಗಳನ್ನು ತಾಳ್ಮೆ(Patience) ಮತ್ತು ಪರಿಶ್ರಮದಿಂದ ಎದುರಿಸಿ. ಆಚಾರ್ಯ ಚಾಣಕ್ಯ ಕೂಡ ಇದೇ ರೀತಿಯ ಸಲಹೆ ನೀಡುತ್ತಾನೆ. ಆಚಾರ್ಯರ ಜೀವನದಲ್ಲಿ ಶತ್ರುಗಳ ಕೊರತೆ ಇರಲಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಆಚಾರ್ಯ ಚಾಣಕ್ಯ ಅವರಿಗೆ ಎಂದಿಗೂ ಹೆದರಲಿಲ್ಲ.

Latest Videos


ಆಚಾರ್ಯ ಚಾಣಕ್ಯ(Acharya Chanakya) ಯಾವಾಗಲೂ ತನ್ನ ಮೇಲೆಯೇ ಕೆಲಸ ಮಾಡುತ್ತಿದ್ದರು. ಚಾಣಕ್ಯ ಹೇಳೋ ಪ್ರಕಾರ ನಾನು ಶತ್ರುಗಳನ್ನು ಎದುರಿಸಲು ನನ್ನನ್ನು ಸಿದ್ಧಪಡಿಸಿಕೊಂಡೆ. ಇದರಿಂದ ಚಾಣಕ್ಯ ತಮ್ಮ ಗುರಿಯತ್ತ ಸಾಗುತ್ತಲೇ ಇದ್ದರು. ನೀವೂ ಸಹ ಜೀವನದಲ್ಲಿ ಏನಾದರೂ ದೊಡ್ಡದನ್ನು ಮಾಡುವ ಕನಸು ಕಾಣುತ್ತಿದ್ದರೆ, ನಿಮ್ಮ ಶತ್ರುಗಳ ಮೇಲೆ ನಿಯಂತ್ರಣ ಸಾಧಿಸಲು ಚಾಣಕ್ಯ ನೀಡಿದ ಈ ಸಲಹೆಯನ್ನು ಅನುಸರಿಸಿ. ಜೀವನದಲ್ಲಿ ಈ ಸಲಹೆಗಳನ್ನು ಸರಿಯಾಗಿ ಅನುಸರಿಸಿದ್ರೆ, ನೀವು ಬಯಸಿದ್ರೂ ನಿಮ್ಮ ಶತ್ರುಗಳು ನಿಮ್ಮನ್ನು ಸೋಲಿಸಲು ಸಾಧ್ಯವಾಗೋದಿಲ್ಲ.
 

ಶತ್ರುವಿನ(Enemy) ಶಕ್ತಿಯನ್ನು ಕಡೆಗಣಿಸಬೇಡಿ
ಚಾಣಕ್ಯನ ಪ್ರಕಾರ, ನೀವು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ನಿಮ್ಮ ಎದುರಾಳಿ ನಿಮಗಿಂತ ಕಡಿಮೆ ಶಕ್ತಿಶಾಲಿ ಎಂದು ಭಾವಿಸುವ ತಪ್ಪನ್ನು ಮಾಡಬೇಡಿ. ಶತ್ರು ದುರ್ಬಲನೆಂದು ನೀವು ಪರಿಗಣಿಸಿದ್ರೆ, ಅವನನ್ನು ಎದುರಿಸಲು ನಿಮ್ಮನ್ನು ನೀವು ಎಂದಿಗೂ ಬಲಪಡಿಸಲು ಸಾಧ್ಯವಾಗೋದಿಲ್ಲ. ಪರಿಣಾಮವಾಗಿ, ನೀವು ಸೋಲನ್ನು ಎದುರಿಸಬೇಕಾಗುತ್ತೆ. ಪ್ರತಿಯೊಂದು  ಪರಿಸ್ಥಿತಿಯನ್ನು ನಿರ್ಣಯಿಸುವ ಅಭ್ಯಾಸವನ್ನು ಬೆಳೆಸಿ ಮತ್ತು ಅದಕ್ಕೆ ಅನುಗುಣವಾಗಿ ಪರಿಹಾರದ ಬಗ್ಗೆ ಯೋಚಿಸಿ.

ಶತ್ರುಗಳ ಮೇಲೆ ಕಣ್ಣಿಡಿ 
ಚಾಣಕ್ಯನು ಯಾವಾಗಲೂ ಶತ್ರುವಿನ ಪ್ರತಿಯೊಂದು ಚಲನವಲನಗಳ ಮೇಲೆ ಕಣ್ಣಿಡಬೇಕೆಂದು ಸಲಹೆ ನೀಡುತ್ತಾನೆ. ಅವರ ದೌರ್ಬಲ್ಯಗಳನ್ನು(Weakness) ಕಂಡುಹಿಡಿಯಲು ಪ್ರಯತ್ನಿಸಿ. ಪ್ರತಿಯೊಬ್ಬ ಮನುಷ್ಯನಿಗೂ ಕೆಲವು ದೌರ್ಬಲ್ಯಗಳಿವೆ, ಅದನ್ನು ಗುರುತಿಸೋದು ಮತ್ತು ಶತ್ರುಗಳ ವಿರುದ್ಧ ಬಳಸೋದು ಅವಶ್ಯಕ.

ವೈಫಲ್ಯದ(Failure) ಬಗ್ಗೆ ಭಯಪಡಬೇಡಿ. 
ಚಾಣಕ್ಯನ ಪ್ರಕಾರ, ನಿಮ್ಮ ಗುರಿ ದೊಡ್ಡದಾಗಿದ್ದರೆ ಅದನ್ನು ಸಾಧಿಸಲು ಸಿದ್ಧರಾಗಬೇಕು. ಸಿದ್ಧತೆ ಮತ್ತು ಯೋಜನೆಗೆ ಹೆಚ್ಚು ಸಮಯ ತೆಗೆದುಕೊಳ್ಳಬೇಕು. ಇದಕ್ಕಾಗಿ, ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. ಇದರಲ್ಲಿ ನೀವು ವಿಫಲರಾದರೂ ಸಹ, ಧೈರ್ಯ ಕಳೆದುಕೊಳ್ಳಬೇಡಿ. ನಿಮ್ಮ ತಪ್ಪನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಮತ್ತು ಅದನ್ನು ಎದುರಿಸಿ.

ಎಲ್ಲರನ್ನೂ ನಂಬಬೇಡಿ
ಯಶಸ್ವಿ ವ್ಯಕ್ತಿಯ ಸುತ್ತಲೂ ಯಾವಾಗಲೂ ಅನೇಕ ಅಸೂಯೆ ಪಡುವ ಜನರು ಇರುತ್ತಾರೆ ಎಂದು ಆಚಾರ್ಯ ಚಾಣಕ್ಯ ವಿವರಿಸುತ್ತಾನೆ. ಆದರೆ ಅವರು ನಿಮ್ಮ ಮೇಲೆ ನೇರವಾಗಿ ದಾಳಿ ಮಾಡೋದಿಲ್ಲ, ಆದರೆ ಪರೋಕ್ಷವಾಗಿ ನಿಮ್ಮ ಮೇಲೆ ಅಟ್ಯಾಕ್ ಮಾಡುತ್ತಾರೆ. ಅಂತಹ ಜನರು ತುಂಬಾ ಡೇಂಜರಸ್(Dangerous). ಹಾಗಾಗಿ ಯಾರನ್ನೂ ಕುರುಡಾಗಿ ನಂಬಬಾರದು. ಅಂತಹ ಜನರು ನಿಮ್ಮ ನಂಬಿಕೆಯ ಲಾಭವನ್ನು ಪಡೆಯುತ್ತಾರೆ ಮತ್ತು ನಿಮಗೆ ಹಾನಿ ಮಾಡುತ್ತಾರೆ.

ಕೋಪದಲ್ಲಿ(Angry) ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. 
ಚಾಣಕ್ಯನ ಪ್ರಕಾರ, ಕೋಪವು ನಿಮ್ಮ ಬುದ್ಧಿ ಮತ್ತು ಆತ್ಮಸಾಕ್ಷಿಯನ್ನು ನಾಶಪಡಿಸುತ್ತೆ. ನೀವು ಸಹ ಈ ತಪ್ಪು ಮಾಡಬಹುದು. ಅದನ್ನೇ ನಿಮ್ಮ ಶತ್ರು ಮಾಡಲು ಬಯಸುತ್ತಾನೆ. ಶತ್ರು ಯಾವಾಗಲೂ ನಿಮ್ಮನ್ನು ಪ್ರಚೋದಿಸಲು ಪ್ರಯತ್ನಿಸುತ್ತಾನೆ ಇದರಿಂದ ನೀವು ಕೋಪಗೊಳ್ಳುತ್ತೀರಿ ಮತ್ತು ತಪ್ಪುಗಳನ್ನು ಮಾಡುತ್ತೀರಿ. ನಿಮ್ಮ ಈ ದೌರ್ಬಲ್ಯದ ಲಾಭವನ್ನು ಪಡೆದುಕೊಳ್ಳುವ ಮೂಲಕ, ಅವನು ನಿಮ್ಮನ್ನು ಸೋಲಿಸಬಹುದು, ಆದ್ದರಿಂದ ಕೋಪದಲ್ಲಿ ಎಂದಿಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
 

ಶತ್ರುವನ್ನು ನೇರವಾಗಿ ಎದುರಿಸಬೇಡಿ. 
ಹೌದು, ಶತ್ರುವನ್ನು ನೇರವಾಗಿ ಎದುರಿಸೋದು ಬುದ್ಧಿವಂತಿಕೆಯಲ್ಲ ಎಂದು ಚಾಣಕ್ಯನು ಹೇಳುತ್ತಾನೆ. ಶತ್ರು ನಿಮಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದರೆ, ಹಿಂದೆ ಸರಿಯೋದು ಉತ್ತಮ ಆಯ್ಕೆಯಾಗಿದೆ. ಬಲವಾದ ಕಾರ್ಯತಂತ್ರವನ್ನು ಮಾಡಲು ನೀವು ಸರಿಯಾದ ಸಮಯಕ್ಕಾಗಿ ಕಾಯಬೇಕು. 

ನಿಮ್ಮನ್ನು ನೀವು ಬಲಪಡಿಸಲು ಮತ್ತು ಉತ್ತಮ ಕಾರ್ಯತಂತ್ರವನ್ನು ಸಿದ್ಧಪಡಿಸಲು ಈ ಸಮಯವನ್ನು ಬಳಸಿ. ಇದರಲ್ಲಿ, ನೀವು ನಿಮ್ಮ ನಿಜವಾದ ಹಿತೈಷಿಗಳ ಸಹಾಯವನ್ನು ತೆಗೆದುಕೊಳ್ಳಬಹುದು. ನಿಮಗೆ ಅವಕಾಶ ಸಿಕ್ಕ ಕೂಡಲೇ, ನಿಮ್ಮ ಎದುರಾಳಿಯ ಮೇಲೆ ಪೂರ್ಣ ಬಲದಿಂದ ಮತ್ತೆ ಅಟ್ಯಾಕ್(Attack) ಮಾಡಿ. ಸರಿಯಾಗಿ ಮಾಡಿದರೆ, ನೀವು ಖಂಡಿತವಾಗಿಯೂ ನಿಮ್ಮ ಶತ್ರುಗಳನ್ನು ಸೋಲಿಸಬಹುದು.
 

click me!