ಪರಮ ಸುಂದರಿ ಅಂದ್ರೆ ಯಾರು? ಶಾಸ್ತ್ರಗಳಲ್ಲಿರೋ ಅಡಗಿರೋ ಸತ್ಯ ಕೇಳಿದ್ರೆ ಖುಷಿಯಾಗುತ್ತೆ!

Published : Sep 09, 2025, 06:39 PM IST

Parama Sundari Definition: ಪರಮ ಸುಂದರಿ ಎಂದರೆ ಕೇವಲ ಸೌಂದರ್ಯವತಿ ಮಾತ್ರವಲ್ಲ, ಧರ್ಮ, ತ್ಯಾಗ, ಪತಿಭಕ್ತಿ ಮತ್ತು ದೈವತ್ವವನ್ನು ಹೊಂದಿರುವವಳು. ಭಾರತೀಯ ಪುರಾಣದಲ್ಲಿ ಸೌಂದರ್ಯದ ಅವಲೋಕನ ಮಾಡಲಾಗಿದೆ.

PREV
18
ಸೌಂದರ್ಯವತಿ ಯಾರು?

ಸೌಂದರ್ಯವತಿ ಯಾರು ಅಂದ್ರೆ ಇಂದಿನ ಜನರು ಸ್ಟಾರ್ ನಟಿಯರ ಹೆಸರು ಹೇಳುತ್ತಾರೆ. ಇನ್ನು ಕೆಲವರು ಮೊನಾಲಿಸಾ ಅಂದ್ರೆ ಅಮ್ಮನ ಮುದ್ದಿನ ಮಕ್ಕಳು ತಾಯಿಯ ಹೆಸರು ಹೇಳುತ್ತಾರೆ. ಮುಖದ ಕಾಂತಿ, ದೈಹಿಕ ಆಕರ್ಷಣೆ, ವೇಷಭೂಷಣದ ಆಧಾರದ ಮೇಲೆಯೂ ಸೌಂದರ್ಯವನ್ನು ತೀರ್ಮಾನಿಸಲಾಗುತ್ತದೆ. ನಮ್ಮ ಭಾರತೀಯ ಧರ್ಮಗ್ರಂಥಗಳು ನಿಜವಾದ ಸೌಂದರ್ಯ ಯಾವುದು ಎಂಬುದನ್ನು ನಮಗೆ ತಿಳಿಸಿಕೊಡುತ್ತವೆ.

28
ಪರಮ ಸುಂದರಿ ಒಂದೇ ಹೆಸರಿಗೆ ಸೀಮಿತ ಅಲ್ಲ

ಪರಮ ಸುಂದರಿ ಎಂದರೆ ಕೇವಲ ಸೌಂದರ್ಯವತಿ ಮಾತ್ರ ಅಲ್ಲ. ಧರ್ಮ, ತ್ಯಾಗ, ಪತಿಯ ಮೇಲಿನ ಭಕ್ತಿ ಮತ್ತು ದೈವತ್ವವನ್ನೂ ಹೊಂದಿರುವ ಮಹಿಳೆಯನ್ನು ಪರಮ ಸುಂದರಿ ಎಂದು ಕರೆಯಬಹುದು. ಸೌಂದರ್ಯ ಅನ್ನೋದು ದೇಹದ ಆಕಾರ ಅಲ್ಲ. ಸುಂದರತೆ ಮಹಿಳೆಯ ಸದ್ಗುಣ, ನಮ್ರತೆ ಮತ್ತು ತೇಜಸ್ಸಿನಲ್ಲಿರುತ್ತದೆ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಶಾಸ್ತ್ರಗಳಲ್ಲಿ ಪರಮ ಸುಂದರಿ ಒಂದೇ ಹೆಸರಿಗೆ ಸೀಮಿತವಾಗಿಲ್ಲ, ಬದಲಾಗಿ ಅದನ್ನು ಆದರ್ಶ ಸ್ಥಿತಿ ಅಂತ ಪರಿಗಣಿಸಲಾಗುತ್ತದೆ.

38
ಲಕ್ಷ್ಮಿ ದೇವಿಯ ರೂಪ ಸರ್ವಸುಂದರಿ

ವಿಷ್ಣು ಮತ್ತು ಪದ್ಮ ಪುರಾಣಗಳಲ್ಲಿ ತಾಯಿ ಲಕ್ಷ್ಮಿ ದೇವಿಯನ್ನು ಸರ್ವಸುಂದರಿ ಎನ್ನಲಾಗುತ್ತದೆ. ಲಕ್ಷ್ಮಿ ದೇವಿ ಕೇವಲ ಸುಂದರಿಯಲ್ಲ, ಸಂಪತ್ತು, ಐಶ್ವರ್ಯ ಮತ್ತು ಮಾಧುರ್ಯದ ಅಧಿದೇವತೆಯೂ ಆಗಿದ್ದಾಳೆ. ಪದ್ಮೇ ಪದ್ಮಾಲಯೇ ದೇವಿ ಪದ್ಮಪತ್ರನಿಭೇಕ್ಷಣೇ. ಯತ್ರ ಲಕ್ಷ್ಮಿ ತತ್ರ ಶ್ರೀಯಃ, ಸೌಂದರ್ಯಂ ತತ್ರ ಸುಂದರಿ ಎಂಬ ಶ್ಲೋಕದಲ್ಲಿ ಕ್ಷ್ಮಿ ಇರುವಲ್ಲಿ ಸೌಂದರ್ಯ ಮತ್ತು ಸಮೃದ್ಧಿ ಇರುತ್ತೆ ಎಂದು ತಿಳಿಸಲಾಗಿದೆ.

48
ತ್ರಿಲೋಕ ಸುಂದರಿ ಯಾರು?

ಶಿವ ಪುರಾಣ ಮತ್ತು ದೇವಿ ಭಾಗವತಗಳಲ್ಲಿ, ತಾಯಿ ಪಾರ್ವತಿಯನ್ನು ತ್ರೈಲೋಕ್ಯ ಸುಂದರಿ ಎಂದು ಕರೆಯಲಾಗಿದೆ. ತಾಯಿ ಜಗನ್ಮಾಥೆ ಸೌಂದರ್ಯ ಅಚಲವಾದ ತಾಳ್ಮೆ ಮತ್ತು ದೃಢವಾದ ತಪಸ್ಸಿನಲ್ಲಿ ಅಡಗಿದೆ ಎಂದು ಉಲ್ಲೇಖವಾಗಿದೆ. ಶಿವ ಪುರಾಣದಲ್ಲಿ ತ್ವಂ ತ್ರೈಲೋಕ್ಯ ಸುಂದರಿ, ತ್ವಂ ಶಿವ, ತ್ವಂ ಜಗಜ್ಜನನಿ ಎಂದು ಉಲ್ಲೇಖಿಸಲಾಗಿದ್ದು, ಇದರರ್ಥ ಪಾರ್ವತಿ ದೇವಿಯನ್ನು ತ್ರಿಲೋಕ ಸುಂದರಿ ಎಂದು ಹೇಳಲಾಗಿದೆ. ಪಾರ್ವತಿಯ ಸೌಂದರ್ಯವು ತ್ಯಾಗ ಮತ್ತು ತಪಸ್ಸಿನಿಂದ ಬಂದಿದೆ

58
ರತಿ ಸೌಂದರ್ಯ

ಕಾಮದೇವನ ಪತ್ನಿ ರತಿಯನ್ನು ಧರ್ಮಗ್ರಂಥಗಳಲ್ಲಿ ಅನನ್ಯ ರೂಪವತಿ ಎಂದು ಬಣ್ಣಿಸಲಾಗಿದೆ. ಕಾಮಶಾಸ್ತ್ರ ಮತ್ತು ಶಿವಪುರಾಣಗಳಲ್ಲಿ ರತಿದೇವಿಯನ್ನು ಪ್ರೀತಿ ಮತ್ತು ಮಾಧುರ್ಯದ ದೇವತೆ ಎಂದು ಹೇಳಲಾಗಿದೆ. ರತಿ ಸೌಂದರ್ಯ ನೋಟಕ್ಕೆ ಸೀಮಿತವಾಗಿರದೇ ಪ್ರೀತಿ, ಬಯಕೆ ಮತ್ತು ಭಾವನಾತ್ಮಕ ಬಾಂಧವ್ಯದ ಸಂಕೇತವಾಗಿದೆ. ಹಾಗಾಗಿ ರತಿಯನ್ನು ಪರಮಸುಂದರಿ ಎಂದು ಪರಿಗಣಿಸಲಾಗುತ್ತದೆ.

68
ಸೀತಾ ದೇವಿ

ರಾಮಾಯಣದ ಜನಕನ ಮಗಳು ಜಾನಕಿ, ಶ್ರೀರಾಮಚಂದ್ರನ ಅರ್ಧಾಂಗಿ ಸೀತಾದೇವಿಯನ್ನು ಸುಂದರ ಮಹಿಳೆ ಎಂದು ಪರಿಗಣಿಸಲಾಗುತ್ತದೆ. ಗಂಡನಿಗೆ ತ್ಯಾಗ, ತಾಳ್ಮೆ ಮತ್ತು ಭಕ್ತಿಯನ್ನು ಸೀತಾದೇವಿ ಪ್ರತಿನಿಧಿಸುತ್ತಾರೆ. ವನವಾಸದ ಕಷ್ಟಗಳ ಸಮಯದಲ್ಲಿ, ಅಶೋಕವನದಲ್ಲಿದ್ದಾಗಲೂ ಸೀತಾದೇವಿ ಧರ್ಮಪಾಲನೆ ಮಾಡಿದ್ದರು. ಹಾಗಾಗಿ ಮಾತೆ ಸೀತೆಯನ್ನು ಭೂಮಿಯ ಮೇಲಿನ ಅತ್ಯಂತ ಸುಂದರ ಮಹಿಳೆ ಎಂದು ಕರೆಯಲಾಗುತ್ತದೆ.

78
ಸತಿ ಸಾವಿತ್ರಿ

ಪತಿಯನ್ನು ಉಳಿಸಿಕೊಳ್ಳಲು ಯಮಧರ್ಮನೊಂದಿಗೆ ಹೋರಾಡಿದ ಸಾವಿತ್ರಿಯೂ ಪರಮಸುಂದರಿಯರಲ್ಲಿ ಒಬ್ಬರಾಗಿದ್ದಾರೆ. ಸತ್ಯತೆ ಮತ್ತು ದೃಢಸಂಕಲ್ಪವು ಸಾವಿತ್ರಿಯ ಸೌಂದರ್ಯದ ರಹಸ್ಯವಾಗಿದೆ. ಧೈರ್ಯ ಮತ್ತು ಧರ್ಮ ಪಾಲನೆ ಮಾಡಿದ ಸಾವಿತ್ರಿಯನ್ನು ಯಮರಾಜ ಸಹ ಹೊಗಳುತ್ತಾನೆ. ಹಾಗಾಗಿ ಸತಿ ಸಾವಿತ್ರಿಯೂ ಪರಮ ಸುಂದರಿಯರಲ್ಲಿ ಒಬ್ಬರಾಗಿದ್ದಾರೆ.

ಇದನ್ನೂ ಓದಿ: ನಾಳೆ ಸೆಪ್ಟೆಂಬರ್ 10 ಈ ರಾಶಿಗೆ ಬಂಪರ್ ಲಾಭ, ಶ್ರೀಮಂತಿಕೆ ಬರುವ ಕಾಲ

88
ಸೌಂದರ್ಯದ ಪದದ ಅರ್ಥ

ಈ ಮೇಲಿನ ದೇವತೆಯರನ್ನು ಗಮನಿಸಿದಾಗ ಪರಮಸುಂದರಿ ಕೇವಲ ಒಬ್ಬ ವ್ಯಕ್ತಿಯಲ್ಲ, ಬದಲಾಗಿ ಗುಣಗಳ ಸಂಗಮ ಎಂದು ತಿಳಿಯುತ್ತದೆ. ತಾಯಿ ಪಾರ್ವತಿ ಸೌಂದರ್ಯ ಮತ್ತು ತಪಸ್ಸಿನ ಸಂಕೇತ. ರತಿ ಸೌಂದರ್ಯ ಮತ್ತು ಪ್ರೀತಿಯ ಅಧಿದೇವತೆ. ಸೀತೆ ಸೌಂದರ್ಯ ಮತ್ತು ತ್ಯಾಗದ ಸಂಕೇತ ಮತ್ತು ಸಾವಿತ್ರಿ ಸೌಂದರ್ಯ ಮತ್ತು ಸತ್ಯದ ಜೀವಂತ ಉದಾಹರಣೆಯಾಗಿದೆ.

ಇದನ್ನೂ ಓದಿ: ಪಿತೃ ಪಕ್ಷದಲ್ಲಿ ಈ ರಾಶಿಗೆ 3 ಗ್ರಹದ ಸಂಯೋಗದಿಂದ ರಾಜಯೋಗ, ಲಕ್

Read more Photos on
click me!

Recommended Stories