ಪೂಜೆ ನಡುವೆ ಪಿರಿಯಡ್ಸ್ ಆದ್ರೆ ಪೂಜೆ ಮುಂದುವರೆಸಬಹುದೇ? ಗುರುಗಳು ಹೇಳಿದ್ದೇನು?

First Published | Jul 28, 2024, 11:33 AM IST

ಕಲರ್ಸ್ ಕನ್ನಡಲ್ಲಿ ಪ್ರಸಾರವಾಗುವ ಮಹರ್ಷಿ ದರ್ಶನದಲ್ಲಿ ಗುರುಗಳು ಪೂಜೆಯ ನಡುವೆ ಮಹಿಳೆಯರಿಗೆ ಪಿರಿಯಡ್ಸ್ ಆದರೆ ಅದು ಅಪಶಕುನವೇ? ಆವಾಗ ಏನು ಮಾಡಬೇಕು ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ. 
 

ಕಲರ್ಸ್ ಕನ್ನಡದಲ್ಲಿ ಪ್ರತಿದಿನ ಬೆಳಗ್ಗೆ ಮಹರ್ಷಿ ದರ್ಶನ (Maharshi Darshana) ಪ್ರಸಾರವಾಗುತ್ತೆ. ಈ ಕಾರ್ಯಕ್ರಮವನ್ನು ಅನುಪಮಾ ಭಟ್ ನಿರೂಪಣೆ ಮಾಡಿದ್ರೆ, ಮಹರ್ಷಿ ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರುಜಿ ಕಾರ್ಯಕ್ರಮ ನಡೆಸಿ ಕೊಡುತ್ತಾರೆ. ಈ ಕಾರ್ಯಕ್ರಮದ ಮೂಲಕ ಹಲವು ಮಾಹಿತಿಗಳನ್ನ ಹಂಚಿಕೊಳ್ಳುತ್ತಾರೆ. 
 

ಕಾರ್ಯಕ್ರಮದಲ್ಲಿ ಗುರುಗಳು ಮಹಿಳೆಯರ ತಿಂಗಳ ಋತುಸ್ರಾವದ(periods) ಬಗ್ಗೆ ಮಾಹಿತಿಯನ್ನು ಹಾಗೂ ವೈಜ್ಞಾನಿಕ ಚಿಂತನೆಗಳ ಬಗ್ಗೆ ಸಹ ಮಾತನಾಡಿದ್ದು, ಇದು ಪ್ರತಿಯೊಬ್ಬ ಮಹಿಳೆಯರಿಗೂ ಖಂಡಿತವಾಗಿಯೂ ತಿಳಿದುಕೊಳ್ಳಬೇಕಾಗಿರುವಂತಹ ಮಾಹಿತಿಯಾಗಿದೆ. ಈ ಕಾರ್ಯಕ್ರಮದಲ್ಲಿ ಮಹರ್ಷಿಗಳು ಪೂಜೆಯ ನಡುವೆ ಮುಟ್ಟಾಗುವುದು ಅಪಶಕುನವೇ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ. 
 

Tap to resize

ದೀಪ ಹಚ್ಚಿ ಇನ್ನೇನು ಪೂಜೆ ಮಾಡಬೇಕು, ಇನ್ನೇನು ಮಂತ್ರ ಪಠಣ ಮಾಡಬೇಕು ಎನ್ನುವಷ್ಟರಲ್ಲಿ ಪಿರಿಯಡ್ಸ್ ಆಯಿತು, ಬ್ಲೀಡಿಂಗ್ ಆಯಿತು, ಇಂತಹ ಸಂದರ್ಭದಲ್ಲಿ ಪೂಜೆಯನ್ನು ಅರ್ಧದಲ್ಲೇ ಬಿಟ್ಟು ಬರೆಬೇಕೆ? ಅಥವಾ ಪೂಜೆ ಮಾಡಬೇಕೆ? ಇದರ ಬಗ್ಗೆ ಅನೇಕ ಮಹಿಳೆಯರಿಗೆ ಪ್ರಶ್ನೆಗಳಿರುತ್ತೆ, ಈ ಬಗ್ಗೆ ಗುರುಗಳು ಉತ್ತರಿಸುವ ಮೂಲಕ ಹಲವರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. 

ಹೆಣ್ಣು ಮಕ್ಕಳಿಗೆ ಪಿರಿಯಡ್ಸ್ ಆಗುವುದು ಯಾವುದೇ ಕಾರಣಕ್ಕೂ ಮೈಲಿಗೆ ಅಲ್ಲ. ಇದು ಮೈಲಿಗೆ, ಮುಟ್ಟಬಾರದು (untouchable) ಅನ್ನೋದನ್ನ ಮನಸಿನಿಂದ ತೆಗೆಯಬೇಕು. ಪಿರಿಯಡ್ಸ್ ಅನ್ನೋದು ಸಂಪೂರ್ಣವಾಗಿ ವಿಜ್ಞಾನಕ್ಕೆ ಸಂಬಂಧ ಪಟ್ಟದ್ದು ಎಂದು ಹೇಳಿರುವ ಗುರುಗಳು ಹಿಂದೆ ಮಹಿಳೆಯರ ಮುಟ್ಟಿನ ಸಮಯದಲ್ಲಿ ಆಕೆಯ ದೈಹಿಕ ಮತ್ತು ಮಾನಸಿಕ ಸ್ಥಿತಿಗಳು ಸರಿಯಾಗಿರದ ಕಾರಣ ವಿಶ್ರಾಂತಿ ತೆಗೆದುಕೊಳ್ಳಲು ಅವರನ್ನ ಕೆಲಸದಿಂದ ದೂರ ಇಡುತ್ತಿದ್ದರೇ ಹೊರತು, ಮೈಲಿಗೆ ಎಂದು ದೂರ ಇಟ್ಟಿದ್ದಲ್ಲ ಎಂದು ಗುರುಗಳು ಹೇಳಿದ್ದಾರೆ. 
 

ಮೊದಲೆಲ್ಲಾ ಕಾಟನ್ ಬಟ್ಟೆಗಳನ್ನು ಉಪಯೋಗಿಸುತ್ತಿದ್ದರು, ಈಗಿನ ಹಾಗೆ ಸ್ಯಾನಿಟರಿ ಪ್ಯಾಡ್ ಗಳು ಅಂದು ಇರಲಿಲ್ಲ. ಹಾಗಾಗಿ ಮಹಿಳೆಯರು ಮನೆ ಪೂರ್ತಿ ಓಡಾಡುತ್ತಿದ್ದರೆ, ಅದರಿಂದ ಮನೆಯಲ್ಲಿದ್ದವರಿಗೆ, ಮಕ್ಕಳಿಗೆ ಇನ್ ಫೆಕ್ಷನ್ ಆಗಬಹುದು ಎನ್ನುವ ದೃಷ್ಟಿಯಿಂದ ಅವರನ್ನ ದೂರ ಇಡುತ್ತಿದ್ದರು ಅಷ್ಟೇ ಎಂದಿದ್ದಾರೆ. ಜೊತೆಗೆ ಸ್ಯಾನಿಟರಿ ಪ್ಯಾಡ್ ಅತಿಯಾದ ಬಳಕೆಯಿಂದಾಗುವ ತೊಂದರೆ ಬಗ್ಗೆ ಸಹ ಒತ್ತಿ ಹೇಳಿದ್ದಾರೆ. 
 

ಪಿರಿಯಡ್ಸ್ ಅನ್ನೋದು ಮುಖ ಮುಚ್ಚಿಕೊಂಡು, ನಾಚಿಕೆಯಿಂದ ಹೇಳುವಂತಹ ಸ್ಥಿತಿ ಅಲ್ಲ. ಇದು ಸಾಮಾನ್ಯ ಪ್ರಕ್ರಿಯೆ ಎಂದಿರುವ ಗುರುಗಳು, ಒಂದು ವೇಳೆ ಪೂಜೆ ಮಾಡುವ ಹೊತ್ತಿಗೆ ಬ್ಲೀಡಿಂಗ್ ಆದ್ರೆ ಸ್ನಾನ ಮಾಡ್ಕೊಂಡು ಬನ್ನಿ. ನಿಮ್ಮ ದೈಹಿಕ ಮಾನಸಿಕ (physical and mental health) ಸ್ಥಿತಿ ಚೆನ್ನಾಗಿದೆ ಅಂದ್ರೆ ಪೂಜೆ ಮುಂದುವರೆಸಿ, ಆದ್ರೆ ಆರೋಗ್ಯ ಸರಿ ಇಲ್ಲ ಅಂದ್ರೆ ಪೂಜೆಯನ್ನ ಅಲ್ಲಿಗೆ ಬಿಟ್ಟು ಬಿಡಿ, ದೇವರಲ್ಲಿ ಕ್ಷಮೆ ಕೇಳಿ. ನನ್ನ ಆರೋಗ್ಯ ಸರಿ ಹೋದ ಮೇಲೆ ಪೂಜೆ ಮಾಡ್ತೇನೆ ಎಂದು ಹೇಳಿ ನಮಸ್ಕರಿಸಿ ಎಂದಿದ್ದಾರೆ ಮಹರ್ಷಿಗಳು. 
 

ಮತ್ತೊಂದಿಷ್ಟು ಮಾಹಿತಿ ನೀಡಿದ ಮಹರ್ಷಿಗಳು ಪಿರಿಯಡ್ಸ್ ಆದ್ರೆ ಮಹಿಳೆಯರು ದೇವಸ್ಥಾನಕ್ಕೆ ಹೋಗೋದು ಬೇಡ, ನದಿ ನೀರು, ಕೊಳದಲ್ಲಿ ಸ್ನಾನ ಮಾಡೋದು ಬೇಡ ಮನೆಯಲ್ಲಿಯೇ ಸ್ನಾನ ಮಾಡಿ ಎಂದಿದ್ದಾರೆ. ನದಿ, ಕೊಳಗಳಲ್ಲಿ ಬೇರೆಯವರು ಸಹ ಸ್ನಾನ ಮಾಡೋದರಿಂದ ಪಿರಿಯಡ್ಸ್ ಸಮಯದಲ್ಲಿ ನಿಮ್ಮಿಂದಾಗಿ ಇತರರಿಗೆ ಇನ್ ಫೆಕ್ಷನ್ ಆಗುವ ಸಾಧ್ಯತೆ ಇರುತ್ತೆ. ಇನ್ನು ದೇವಸ್ಥಾನದಲ್ಲಿನ ಸ್ಟ್ರಾಂಗ್ ಆಗಿರುವ ವೈಬ್ರೇಶನ್, ಎನರ್ಜಿಯನ್ನು ತಡೆದುಕೊಳ್ಳುವ ಶಕ್ತಿ ಪಿರಿಯಡ್ಸ್ ಆಗಿರೋ ಸೂಕ್ಷ್ಮ ದೇಹದ ಮಹಿಳೆಗೆ ಇರೋದಿಲ್ಲ, ಇದರಿಂದ ಆಕೆಗೂ ತೊಂದರೆ, ಅಲ್ಲಿನ ಶಕ್ತಿಗಳಿಗೂ ತೊಂದರೆಯಾಗುತ್ತೆ, ಹಾಗಾಗಿ ದೇವಸ್ಥಾನಗಳಿಗೆ ಹೋಗಬಾರದು ಎಂದಿದ್ದಾರೆ. 
 

ಒಟ್ಟಲ್ಲಿ ಪೂಜೆ ಮಾಡುವಾಗ ಪಿರಿಯಡ್ಸ್ ಆದರೆ, ಅಥವಾ ಪಿರಿಯಡ್ಸ್ ಆದ ಸಮಯದಲ್ಲಿ ದೇವರನ್ನ ಮನಸಾರೆ ಪೂಜೆಸೋದು ತಪ್ಪಲ್ಲ. ಇದರಿಂದ ಯಾವುದೇ ರೀತಿಯ ಅಪಶಕುನ ಉಂಟಾಗೋದಿಲ್ಲ. ನಿಮ್ಮ ಮನಸ್ಥಿತಿ ಸರಿಯಾಗಿದೆ ಅಂದ್ರೆ ಖಂಡಿತವಾಗಿಯೂ ಭಕ್ತಿಯಿಂದ ಪೂಜಿಸಬಹುದು ಎಂದಿದ್ದಾರೆ. 
 

Latest Videos

click me!