ಅಪ್ಪಿತಪ್ಪಿಯೂ ಈ ಜನರಿಗೆ ಸಲಹೆ ನೀಡೋದಕ್ಕೆ ಹೋಗ್ಬೇಡಿ… ನಿಮಗೆ ತೊಂದ್ರೆ ತಪ್ಪಿದ್ದಲ್ಲ

First Published | Jul 26, 2024, 3:56 PM IST

ಭಾರತದಲ್ಲಿ ಬಿಟ್ಟಿ ಸಲಹೆ ನೀಡುವ ಅನೇಕ ಜನರಿದ್ದಾರೆ. ಆದರೆ ಅಡ್ವೈಸ್ ಮಾಡೊವಾಗ ಯಾರಿಗೆ ಮಾಡಬೇಕು? ಯಾರಿಗೆ ಮಾಡಬಾರ್ದು ಅನ್ನೋದು ನಿಮಗೆ ಗೊತ್ತ?  ಚಾಣಕ್ಯ ಹೇಳ್ತಾರೆ ಇಂತ ಕೆಲವು ಜನರಿಗೆ ಸಲಹೆ ನೀಡಿದ್ರೆ ಅದ್ರಿಂದ ನಿಮಗೆ ತೊಂದರೆ ತಪ್ಪಿದ್ದಲ್ಲ ಅಂತ. 
 

ಜೀವನದಲ್ಲಿ ಇನ್ನೊಬ್ಬರಿಗೆ ಕೆಟ್ಟದನ್ನ ಮಾಡಿದ್ರೆ ಮಾತ್ರ ನಮಗೆ ಕೆಟ್ಟದಾಗುತ್ತೆ ಎಂದು ಹೇಳೊದಕ್ಕೆ ಸಾಧ್ಯ ಇಲ್ಲ. ಕೆಲವೊಮ್ಮೆ ಒಳ್ಳೆ ಕೆಲಸ ಮಾಡೊವಾಗ್ಲೂ ಯೋಚನೆ ಮಾಡಿ ಮಾಡಬೇಕಾಗುತ್ತೆ. ಜನರಿಗೆ ಇರೋ ಕೆಟ್ಟ ಅಭ್ಯಾಸ ಏನು ಗೊತ್ತಾ? ಕೇಳದೇನೆ ಸಲಹೆ ನೀಡೋದು, ಇದ್ರಿಂದ ಮತ್ತೆ ನಿಮಗೆ ತೊಂದರೆಯಾಗುತ್ತೆ ಅನ್ನೋದನ್ನ ಮರಿತೀರಿ. ಹೌದು ಚಾಣಕ್ಯ ನೀತಿಯ (Chanakya Niti) ಪ್ರಕಾರ ಕೆಲವು ವ್ಯಕ್ತಿಗಳಿಗೆ ತಪ್ಪಿಯೂ ಸಲಹೆ ನೀಡಬಾರದಂತೆ. 
 

ದೇಶದ ಪ್ರಖ್ಯಾತ ವಿದ್ವಾಂಸರಲ್ಲಿ ಒಬ್ಬರಾದ ಆಚಾರ್ಯ ಚಾಣಕ್ಯರು (Acharya Chanakya)ತನ್ನ ನೀತಿಶಾಸ್ತ್ರದಲ್ಲಿ ಜೀವನದ ಬಗ್ಗೆ ಅನೇಕ ಪಾಠಗಳನ್ನು ನೀಡಿದ್ದಾರೆ. ಜೀವನಕ್ಕೆ ಅಗತ್ಯವಾಗಿ ಬೇಕಾಗಿರುವ ಮಾನವ ನಡವಳಿಕೆಯ ಜೊತೆಗೆ ಸಣ್ಣ ಮತ್ತು ದೊಡ್ಡ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಲು ಚಾಣಕ್ಯ ನೀತಿಯಲ್ಲಿ ಈ ನಾಲ್ಕು ವ್ಯಕ್ತಿಗಳಿಗೆ ತಪ್ಪಿಯೂ ಸಲಹೆ ನೀಡಬಾರದು ಎಂದಿದ್ದಾರೆ. ಆ ವ್ಯಕ್ತಿಗಳು ಯಾರು ಅನ್ನೋದನ್ನ ನೋಡೋಣ. 
 

Latest Videos


ಮೂರ್ಖ ಜನರು
ಮೊದಲನೆಯದಾಗಿ, ಮೂರ್ಖ ಜನರಿಗೆ ಯಾವತ್ತೂ ಸಲಹೆ ನೀಡಬಾರದು, ಏಕೆಂದರೆ ಅವರು ನಿಮ್ಮ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳೋದೆ ಇಲ್ಲ,ಹಾಗಾಗಿ ನೀವು ಕೊಟ್ಟ ಸಲಹೆಯನ್ನ ತಮ್ಮ ಜೀವನದಲ್ಲಿ ಅಳವಡಿಸೋದು ಇಲ್ಲ. ಅಂತವ್ರಿಗೆ ಸಲಹೆ ನೀಡಿದ್ರೆ, ನೀವು ನಿಮ್ಮ ಸಮಯ ಮತ್ತು ಶಕ್ತಿಯನ್ನು ಮಾತ್ರ ವ್ಯರ್ಥ ಮಾಡುತ್ತೀರಿ, ಹಾಗಾಗಿ ಅಂತಹ ಜನರಿಂದ ದೂರವಿರೋದು ಒಳ್ಳೆಯದು.

ದುರಾಸೆಯ ವ್ಯಕ್ತಿ
ಆಚಾರ್ಯ ಚಾಣಕ್ಯನ ಪ್ರಕಾರ, ದುರಾಸೆಯ ಜನರಿಗೆ ಸಲಹೆ ನೀಡೋದು ವ್ಯರ್ಥ. ಅಂತಹ ಜನರು ತಮಗೆ ಏನಾದ್ರೂ ಪ್ರಯೋಜನ ಇದ್ರೆ ಮಾತ್ರ ಕೆಲಸ ಮಾಡ್ತಾರೆ, ಇಲ್ಲಾಂದ್ರೆ ಇಲ್ಲ. ದುರಾಸೆಯ ಜನರು ನೀಚರು ಕೂಡ ಆಗಿರ್ತಾರೆ, ಆದ್ದರಿಂದ ಅವರಿಗೆ ಸಲಹೆ ನೀಡುವುದು ನಿಷ್ಪ್ರಯೋಜಕವಾಗಿದೆ, ಅವರು ನಿಮ್ಮಿಂದ ಸಲಹೆ ತೆಗೆದುಕೊಂಡು, ಕೊನೆಗೆ ನಿಮಗೆ ಹಾನಿಯನ್ನುಂಟು ಮಾಡಬಹುದು. 
 

ಅಹಂಕಾರಿ ಜನರು
ಚಾಣಕ್ಯ ನೀತಿಯ ಪ್ರಕಾರ, ಅಹಂಕಾರಿ ಜನರಿಗೆ  (people with ego) ಸಲಹೆ ನೀಡಬಾರದು. ಅವರು ತಮ್ಮನ್ನೆ ತಾವು ಉತ್ತಮರು ಜಾಣರು ಎಂದು ಅಂದುಕೊಂಡಿರ್ತಾರೆ. ಇತರರು ಹೇಳಿದ ಮಾತುಗಳನ್ನು ಇವರು ವೇಸ್ಟ್ ಅಂತ ಅಂದ್ಕೊಳ್ತಾರೆ. ಈ ಜನ ಎಷ್ಟೊಂದು ಅಹಂಕಾರಿಗಳಾಗಿದ್ದಾರೆ ಅಂದ್ರೆ, ಇವರಿಗೆ ಸಲಹೆ ನೀಡಿದವರಿಗೆ ಈ ಜನ ಅವಮಾನ ಮಾಡ್ತಾರೆ. 

ಕೆಟ್ಟ ಜನರು
ಒಬ್ಬ ವ್ಯಕ್ತಿಗೆ ಕೆಟ್ಟದ್ದನ್ನು ಮಾಡುವ ಸ್ವಭಾವವನ್ನು ಹೊಂದಿರುವ ಜನರಿಗೆ ಸಲಹೆ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ ಯಾರಾದರೂ ಅವರಿಗೆ ಉತ್ತಮ ಸಲಹೆ ನೀಡಿದರೂ, ಅವರು ಅದನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸುತ್ತಾರೆ ಮತ್ತು ಆ ವ್ಯಕ್ತಿಯನ್ನು ಕೆಟ್ಟವರನ್ನಾಗಿ ಮಾಡುತ್ತಾರೆ. ಆದ್ದರಿಂದ, ಅಂತಹ ಜನರಿಂದ ದೂರವಿರುವುದು ಒಳ್ಳೆಯದು.

click me!