ನವರಾತ್ರಿ ಹಬ್ಬದ ಸಮಯದಲ್ಲಿ ಈ ಕೆಲಸಗಳನ್ನು ಮಾಡ್ಲೇಬೇಡಿ… ದುರ್ಗಾ ದೇವಿ ಮುನಿಸಿಕೊಳ್ಳುತ್ತಾಳೆ!

Published : Sep 22, 2025, 08:52 PM IST

ನವರಾತ್ರಿ ಹಬ್ಬದ ಸಮಯದಲ್ಲಿ, ದುರ್ಗಾ ದೇವಿಯನ್ನು ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಆದ್ದರಿಂದ, ಈ ಪೂಜೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನವರಾತ್ರಿ ಸಮಯದಲ್ಲಿ ಯಾವ ಕೆಲಸಗಳನ್ನ ಮಾಡಬಹುದು? ಯಾವ ಕೆಲಸ ಮಾಡಬಾರದು ನೋಡೋಣ.

PREV
110
ನವರಾತ್ರಿ ಹಬ್ಬ

ಹಿಂದೂ ಧರ್ಮದಲ್ಲಿ, ಶರದಿಯಾ ನವರಾತ್ರಿ ಹಬ್ಬವನ್ನು (navaratri festival) ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಈ ಅವಧಿಯಲ್ಲಿ, ಭಕ್ತರು ಒಂಬತ್ತು ದಿನಗಳ ಕಾಲ ದುರ್ಗಾ ದೇವಿಯ ಒಂಬತ್ತು ವಿಭಿನ್ನ ರೂಪಗಳನ್ನು ಪೂಜಿಸುತ್ತಾರೆ. ನವರಾತ್ರಿ ಸೆಪ್ಟೆಂಬರ್ 22, 2025 ರಂದು ಪ್ರಾರಂಭವಾಗಿದೆ ಮತ್ತು ಅಕ್ಟೋಬರ್ 2, 2025 ರಂದು ದಸರಾದಲ್ಲಿ ಮುಕ್ತಾಯಗೊಳ್ಳುತ್ತದೆ.

210
ನವರಾತ್ರಿ ಸಮಯದ ನಿಯಮಗಳು

ನವರಾತ್ರಿಯ ಸಮಯದಲ್ಲಿ ದುರ್ಗಾ ದೇವಿಯು (Goddess Durga)  ಪ್ರಸನ್ನಳಾದರೆ, ಅವಳು ತನ್ನ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ ಎನ್ನುವ ನಂಬಿಕೆ ಇದೆ. ನೀವು ಸಹ ದುರ್ಗಾ ದೇವಿಯ ಆಶೀರ್ವಾದವನ್ನು ಪಡೆಯಲು ಬಯಸಿದರೆ, ನವರಾತ್ರಿಯ ಸಮಯದಲ್ಲಿ ನೀವು ಕೆಲವು ವಿಷಯಗಳಿಗೆ ವಿಶೇಷ ಗಮನ ನೀಡಬೇಕು. ನವರಾತ್ರಿಯ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳನ್ನು ತಿಳಿಯೋಣ.

310
ನವರಾತ್ರಿಯ ಸಮಯದಲ್ಲಿ ಏನು ಮಾಡಬೇಕು?

ನೀವು ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡುತ್ತಿದ್ದರೆ, ಬೆಳಿಗ್ಗೆ ಮತ್ತು ಸಂಜೆ ಎರಡೂ ಸಮಯಗಳಲ್ಲಿ ದುರ್ಗಾ ದೇವಿಯನ್ನು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಲು ಮರೆಯಬೇಡಿ. ಪೂಜೆಯ ನಂತರ, ದುರ್ಗಾ ದೇವಿಯ ಆರತಿಯನ್ನು ಸಹ ಮಾಡಿ.

410
ದುರ್ಗಾ ಚಾಲೀಸಾ ಪಠಿಸಿ

ಪೂಜೆಯ ಸಮಯದಲ್ಲಿ, ದುರ್ಗಾ ಚಾಲೀಸಾ ಮತ್ತು ದುರ್ಗಾ ಸಪ್ತಶತಿಯನ್ನು ಸಹ ಪಠಿಸೋದು ಉತ್ತಮ. ಆದರೆ ಇವೆರಡನ್ನು ನೀವು ಗುರುಗಳಿಂದ ದೀಕ್ಷೆ ಪಡೆದಿದ್ದರೆ ಉತ್ತಮ.. ಇದು ದುರ್ಗಾ ದೇವಿಯನ್ನು ಮೆಚ್ಚಿಸುತ್ತದೆ ಮತ್ತು ಅವಳು ತನ್ನ ಭಕ್ತರ ಆಸೆಗಳನ್ನು ಪೂರೈಸುತ್ತಾಳೆ.

510
ನೆಲದ ಮೇಲೆ ಮಲಗಿ

ಶರದಿಯಾ ನವರಾತ್ರಿಯ ಸಂಪೂರ್ಣ ಒಂಬತ್ತು ದಿನಗಳವರೆಗೆ ಉಪವಾಸ ಮಾಡುವವರು ಹಾಸಿಗೆಯ ಬದಲಿಗೆ ನೆಲದ ಮೇಲೆ ಮಲಗಲು ಮರೆಯಬಾರದು. ಎಷ್ಟು ಸಾಧ್ಯವೋ ಅಷ್ಟು ಸರಳವಾಗಿರೋದು ಉತ್ತಮ.

610
ಸಾತ್ವಿಕ ಆಹಾರ ಸೇವಿಸಿ

ನವರಾತ್ರಿಯ ಸಮಯದಲ್ಲಿ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ನೀವು ಉಪವಾಸ ಮಾಡಿದರೆ, ಶುದ್ಧ ಆಲೋಚನೆಗಳು ಮತ್ತು ಒಳ್ಳೆಯ ಕಾರ್ಯಗಳನ್ನು ಮಾತ್ರ ಮಾಡಬೇಕು. ದಾನ ಧರ್ಮಗಳನ್ನು ಮಾಡಲು ಮರೆಯಬೇಡಿ. ಇತರರಿಗೆ ಸಹಾಯ ಆಗುವಂತಹ ಕೆಲಸಗಳನ್ನು ಮಾಡಿ.

710
ನವರಾತ್ರಿ ಸಮಯದಲ್ಲಿ ಏನು ಮಾಡಬಾರದು?

ಶರದಿಯಾ ನವರಾತ್ರಿಯಲ್ಲಿ ಮಾಂಸಾಹಾರ ಮತ್ತು ತಾಮಸಿಕ ಆಹಾರಗಳನ್ನು ಸೇವಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಮೀನು, ಕೋಳಿ, ಮೊದಲಾದ ಮಾಂಸಾಹಾರ ಬೆಳ್ಳುಳ್ಳಿ ಮತ್ತು ಈರುಳ್ಳಿ ತಾಮಸಿಕ ಆಹಾರಗಳಲ್ಲಿ ಸೇರಿವೆ. ಇವುಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡೋದು ಉತ್ತಮ.

810
ಕೂದಲು, ಉಗುರು ಕತ್ತರಿಸಬಾರದು

ಶರದಿಯಾ ನವರಾತ್ರಿಯಲ್ಲಿ ಮದ್ಯ, ಪಾನ್ ಮತ್ತು ಗುಟ್ಕಾ ಸೇವನೆಯನ್ನು ಸಹ ನಿಷೇಧಿಸಲಾಗಿದೆ. ಅಷ್ಟೇ ಅಲ್ಲ ನವರಾತ್ರಿಯ ಸಮಯದಲ್ಲಿ ಒಬ್ಬರು ಕ್ಷೌರ ಮಾಡಬಾರದು (hair cutting), ಮೀಸೆ ತೆಗೆಯಬಾರದು ಅಥವಾ ಉಗುರುಗಳನ್ನು ಕತ್ತರಿಸಬಾರದು. ಇದು ಸಹ ನೆಗೆಟಿವ್ ಎನರ್ಜಿಯಾಗಿದೆ.

910
ಬ್ರಹ್ಮಚರ್ಯ ಪಾಲಿಸಬೇಕು

ಒಂದು ವೇಳೆ ನೀವು ನವರಾತ್ರಿ ಉಪವಾಸವನ್ನು ಆಚರಿಸಿದರೆ, ಈ ಸಮಯದಲ್ಲಿ ನೀವು ಮಿಸ್ ಮಾಡದೇ ಬ್ರಹ್ಮಚರ್ಯದ ನಿಯಮಗಳನ್ನು ಪಾಲಿಸಬೇಕು. ಹಾಗೆ ಮಾಡಲು ವಿಫಲವಾದರೆ ಉಪವಾಸವು ಮುರಿದುಹೋಗಬಹುದು. ಅದಕ್ಕೆ ಸರಿಯಾದ ಫಲ ಸಿಗೋದಿಲ್ಲ.

1010
ಕೆಟ್ಟ ಯೋಚನೆಗಳನ್ನು ಮಾಡಬಾರದು

ನವರಾತ್ರಿಯ ಸಮಯದಲ್ಲಿ ಒಬ್ಬರು ತಪ್ಪು ಅಥವಾ ಕೆಟ್ಟ ಆಲೋಚನೆಗಳು, ಯೋಚನೆಗಳನ್ನು ಹೊಂದಿರಬಾರದು. ಈ ಅವಧಿಯಲ್ಲಿ ಮಹಿಳೆಯನ್ನು ಅವಮಾನಿಸುವುದು ಸಹ ಪಾಪ ಎಂಬುದನ್ನು ನೆನಪಿನಲ್ಲಿಡಿ. ಮಹಿಳೆಯರಿಗೆ ಗೌರವ ನೀಡೋದನ್ನು ಮರಿಬೇಡಿ

Read more Photos on
click me!

Recommended Stories