ನಾಳೆ ದ್ವಿಪುಷ್ಕರ ಯೋಗದ ಶುಭ ಸಂಯೋಗ; 5 ರಾಶಿಗಳಿಗೆ ಅದೃಷ್ಟದ ಮಳೆ, ಸಿಗಲಿದೆ 2 ಪಟ್ಟು ಪ್ರಯೋಜನ

Published : Sep 22, 2025, 07:45 PM IST

ಅಶ್ವಿನ್ ಮಾಸದ ಶುಕ್ಲ ಪಕ್ಷದ ಎರಡನೇ ದಿನದಂದು ಬ್ರಹ್ಮ, ದ್ವಿಪುಷ್ಕರ ಸೇರಿದಂತೆ ಹಲವು ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಈ ಯೋಗಗಳ ಸಂಯೋಗದಿಂದಾಗಿ ಮೇಷ, ಮಿಥುನ, ಕನ್ಯಾ, ಧನು ಮತ್ತು ಕುಂಭ ರಾಶಿಯವರಿಗೆ ವೃತ್ತಿ ಹಾಗೂ ವ್ಯವಹಾರದಲ್ಲಿ ದ್ವಿಗುಣ ಲಾಭ ಮತ್ತು ಅದೃಷ್ಟ ಲಭಿಸಲಿದೆ.

PREV
17
ಶುಕ್ಲ ಪಕ್ಷದ ಎರಡನೇ ದಿನ

ನಾಳೆ ಅಶ್ವಿನ್ ಮಾಸದ ಶುಕ್ಲ ಪಕ್ಷದ ಎರಡನೇ ದಿನವಾಗಿದೆ. ಸೂರ್ಯನು 2ನೇ ಮತ್ತು 12ನೇ ಮನೆಗಳಲ್ಲಿನ ಉಪಸ್ಥಿತಿಯಿಂದ ಉಭಯಚಾರಿ ಯೋಗ ರಚನೆಯಾದ್ರೆ, ಚಂದ್ರನು ಕನ್ಯಾರಾಶಿಯಲ್ಲಿ ಸಾಗುತ್ತಿರೋದರಿಂದ ತ್ರಿಗ್ರಹ ಯೋಗ ರೂಪಿಸುತ್ತಾನೆ.

27
ಬ್ರಹ್ಮ ಮತ್ತು ದ್ವಿಪುಷ್ಕರ ಯೋಗ

ಇದೆಲ್ಲದರ ಜೊತೆ ಮಂಗಳ ಮತ್ತು ಗುರು ಜೊತೆಯಾಗಿ ಗುರು ನವಮ ಪಂಚಮ ಯೋಗ ರೂಪಿಸುತ್ತಾರೆ. ನಾಳೆ ಹಸ್ತದ ನಂತರ ಚಿತ್ರ ನಕ್ಷತ್ರದ ಸಂಯೋಜನೆಯಲ್ಲಿ ಬ್ರಹ್ಮ ಮತ್ತು ದ್ವಿಪುಷ್ಕರ ಯೋಗವು ರೂಪುಗೊಳ್ಳುತ್ತದೆ. ಈ ಯೋಗದಿಂದ 5 ರಾಶಿಚಕ್ರದವರು ಶುಭಕರ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ. ವ್ಯವಹಾರದಲ್ಲಿ ಎರಡು ಪಟ್ಟು ಲಾಭ ಪಡೆಯುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

37
ಮೇಷ ರಾಶಿ

ನಾಳೆ ಮೇಷ ರಾಶಿಯವರಿಗೆ ಶುಭ ದಿನವಾಗಿದ್ದು, ವೃತ್ತಿ ಮತ್ತು ವ್ಯವಹಾರ ಎರಡರಲ್ಲೂ ಅದೃಷ್ಟದ ಬೆಂಬಲ ಸಿಗುತ್ತದೆ. ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ಇದರಿಂದ ನಿಮ್ಮ ಕೆಲಸದ ಒತ್ತಡ ಸಂಪೂರ್ಣ ಕಡಿಮೆಯಾಗುತ್ತದೆ. ಇದರಿಂದ ಕುಟುಂಬದೊಂದಿಗೆ ಕ್ವಾಲಿಟಿ ಸಮಯ ಕಳೆಯಲಿದ್ದೀರಿ.

47
ಮಿಥುನ ರಾಶಿ

ಮಿಥುನ ರಾಶಿಯವರ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಂಡು ಬರಲಿವೆ. ಕುಟುಂಬ ವ್ಯವಹಾರ ಹೊಂದಿರುವ ಜನತೆಗೆ ಹೆಚ್ಚಿನ ಲಾಭ ದೊರಕಲಿದೆ. . ವ್ಯವಹಾರದಲ್ಲಿ ಎರಡು ಪಟ್ಟು ಲಾಭ ಪಡೆಯುತ್ತಾರೆ. ವ್ಯವಹಾರದಲ್ಲಿ ಹೆಚ್ಚಿನ ಹಣಕಾಸಿನ ಮಾರ್ಗಗಳು ತೆರೆದುಕೊಳ್ಳುತ್ತವೆ.

57
ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ನಾಳೆ ದಿನ ಪ್ರೋತ್ಸಾಹದಾಯಕವಾಗಿರುತ್ತದೆ. ನಕ್ಷತ್ರಗಳ ಸಕಾರಾತ್ಮಕ ಚಲನೆಗಳಿಂದಾಗಿ ಯಾವುದೇ ಕೆಲಸ ಮಾಡಿದರೂ ಯಶಸ್ಸು ನಿಮ್ಮದಾಗುತ್ತದೆ. ತಂದೆ ಕಡೆಯಿಂದ ವಿಶೇಷ ಲಾಭ ಸಿಗುತ್ತದೆ. ಈ ಸಮಯದಲ್ಲಿ ಹಿಂದೆ ಮಾಡಿದ ಕೆಲಸಗಳ ಲಾಭ ಪಡೆಯುತ್ತಾರೆ. ಈ ವಿಶೇಷ ಯೋಗ ರಚನೆಯಿಂದಾಗಿ ಐಷಾರಾಮಿ/ಗ್ಯಾಜೆಟ್ ಪಡೆದುಕೊಳ್ಳುವ ಅವಕಾಶಗಳು ಬರಲಿವೆ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಹೆಚ್ಚಾಳಗೋದರ ಜೊತೆಗೆ ಅನಿರೀಕಕ್ಷಿತ ಲಾಭ ನಿಮ್ಮದಾಗುತ್ತದೆ.

ಇದನ್ನೂ ಓದಿ: ನವರಾತ್ರಿ ಸಮಯದಲ್ಲಿ ಈ ಚಿಕ್ಕ ಕೆಲಸ ಮಾಡಿದ್ರೆ ನಿಮ್ಮ ಜೀವನ ಮಾಲಾಮಾಲ್! ಇಲ್ಲಿದೆ ನೋಡಿ ಸಿಂಪಲ್​ ಟಿಪ್ಸ್​…

67
ಧನು ರಾಶಿ

ಧನು ರಾಶಿಯವರಿಗೆ ವೃತ್ತಿ ಜೀವನದಲ್ಲಿ ವಿಶೇಷ ಜವಾಬ್ದಾರಿಯನ್ನು ಪಡೆಯುವ ಮೂಲಕ ಉನ್ನತ ಸ್ಥಾನಕ್ಕೇರುತ್ತಾರೆ. ಹಣಕಾಸಿನ ವಿಷಯದಲ್ಲಿ ಸ್ವಾವಲಂಬಿಯಾಗಿ, ವ್ಯವಹಾರ ವಿಸ್ತರಣೆಗೆ ಒಳ್ಳೆಯ ಸಮಯವಾಗಿದೆ. ಕುಟುಂಬದೊಂದಿಗೆ ಮನರಂಜನೆ ಮತ್ತು ಆಹ್ಲಾದಕರ ಸಮಯ ಕಳೆಯುವ ಅವಕಾಶ ಸಿಗುತ್ತದೆ.

ಇದನ್ನೂ ಓದಿ: ತುಲಾದಲ್ಲಿ ಮಂಗಳನ ಮಹಾ ಸಂಚಾರ, ಈ ರಾಶಿಗೆ 36 ದಿನದಲ್ಲಿ ಖಜಾನೆ ಫುಲ್, ದೊಡ್ಡ ರಾಜಯೋಗ

77
ಕುಂಭ ರಾಶಿ

ಕುಂಭ ರಾಶಿಯವರಿಗೆ ಆರ್ಥಿಕ ವಿಷಯಗಳಲ್ಲಿ ಅದೃಷ್ಟ ಖುಲಾಯಿಸಲಿದೆ. ಬಹುದಿನಗಳಿಂದ ತಡೆಹಿಡಿಯಲಾಗಿದ್ದ ಹಣಕಾಸಿನ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಮನೆಗೆ ಐಷಾರಾಮಿ ವಸ್ತುಗಳು ಬರಲಿದ್ದು, ಮದುವೆಗೆ ಅರ್ಹರಾಗಿರುವ ಜನರಿಗೆ ಕಂಕಣಭಾಗ್ಯ ಒಲಿದು ಬರಲಿದೆ. ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡೋರಿಗೆ ವಿದೇಶ ಪ್ರಯಾಣದ ಅವಕಾಶ ಬರಲಿದೆ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

Read more Photos on
click me!

Recommended Stories