ಪೂಜೆಗೆ ಬಳಸುವ ಗಂಟೆಯಲ್ಲಿದೆ ಮಹಾನ್ ಶಕ್ತಿ, ತಪ್ಪಾಗಿ ಬಳಸಿದ್ರೆ ಕಷ್ಟ ಗ್ಯಾರಂಟಿ

Published : Dec 04, 2025, 09:30 PM IST

ಸನಾತನ ಧರ್ಮದಲ್ಲಿ, ದೇವರ ಮನೆ, ಪೂಜೆ, ಪೂಜಾ ಸಾಮಗ್ರಿಗೆ ವಿಶೇಷ ಮಹತ್ವವಿದೆ.  ಪೂಜಾ ಸಾಮಗ್ರಿಗಳನ್ನು ಖರೀದಿ ಮಾಡಿ ಮನೆಗೆ ತರುವ ನಮಗೆ ಅದನ್ನು ಹೇಗೆ ಬಳಕೆ ಮಾಡ್ಬೇಕು ಎನ್ನುವ ಜ್ಞಾನ ಇರಬೇಕು. ಗಂಟೆಯ ಬಳಕೆ ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

PREV
17
ದೇವರ ಪೂಜೆಯಲ್ಲಿ ಗಂಟೆ ಬಳಕೆ

ನಾವು ಪೂಜಾ ವಸ್ತುಗಳನ್ನು ತಪ್ಪಾಗಿ ಬಳಸಿದ್ರೆ ಪೂಜೆ ಫಲ ನಮಗೆ ಸಂಪೂರ್ಣವಾಗಿ ಲಭಿಸುವುದಿಲ್ಲ. ಪೂಜೆಯಲ್ಲಿ ಬಳಸುವ ಅತ್ಯಂತ ಅಗತ್ಯ ವಸ್ತುಗಳಲ್ಲಿ ಗಂಟೆ ಕೂಡ ಒಂದು. ಗಂಟೆ ಶಬ್ದ ದೇವತೆಗಳನ್ನು ಆಹ್ವಾನಿಸುತ್ತದೆ ಮತ್ತು ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂಬ ನಂಬಿಕೆ ಇದೆ. ಗಂಟೆ ಬಾರಿಸುವಾಗ ಮತ್ತು ಇಡುವಾಗ ಕೆಲ ಪದ್ಧತಿ ತಿಳಿದಿರಬೇಕು.

27
ಎಡಗೈನಿಂದ ಗಂಟೆ ಮುಟ್ಟಬೇಡಿ

ಶಾಸ್ತ್ರಗಳ ಪ್ರಕಾರ, ಗಂಟೆ ಬಾರಿಸುವಾಗ ಅಥವಾ ಅಲುಗಾಡಿಸುವಾಗ ಎಡಗೈಯನ್ನು ಬಳಸಬಾರದು. ಪೂಜೆಯ ಸಮಯದಲ್ಲಿ, ಗಂಟೆಯನ್ನು ಯಾವಾಗಲೂ ಮೇಲಕ್ಕೆತ್ತಿ ಬಲಗೈಯಿಂದ ಬಾರಿಸಬೇಕು. ಎಡಗೈಯಿಂದ ಗಂಟೆಯನ್ನು ಮುಟ್ಟುವುದು ದೇವರಿಗೆ ಅಗೌರವ ಎಂದು ಪರಿಗಣಿಸಲಾಗುತ್ತದೆ. ಪೂಜೆಯ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಈ ನಿಯಮ ಅಗತ್ಯ.

37
ಗಂಟೆಯನ್ನು ಹೀಗಿಡಿ

ಪೂಜೆ ಮುಗಿದ ಮೇಲೆ ಗಂಟೆಯನ್ನು ಎಂದಿಗೂ ತಲೆಕೆಳಗಾಗಿ ಇಡಬಾರದು. ಗಂಟೆಯನ್ನು ಸಂದೇಶವಾಹಕ ಎಂದು ನಂಬಲಾಗುತ್ತದೆ. ಪೂಜಾಯಲ್ಲಿ ಬಳಸುವ ಗಂಟೆಯ ಮೇಲೆ ಗರುಡನ ಚಿತ್ರವಿರುತ್ತದೆ. ಗರುಡ ವಿಷ್ಣುವಿನ ವಾಹಕ ಮತ್ತು ಸಂದೇಶವಾಹಕ. ಗಂಟೆಯನ್ನು ತಲೆಕೆಳಗಾಗಿ ಇಡುವುದರಿಂದ ವಿಷ್ಣು ಕೋಪಗೊಳ್ಳುತ್ತಾನೆ. ಗಂಟೆಯನ್ನು ಸದಾ ನೇರವಾಗಿ, ಮೇಲ್ಮುಖವಾಗಿ ಇಡಿ.

47
ಗಂಟೆಯನ್ನು ಈ ದಿಕ್ಕಿನಲ್ಲಿ ಇಡಬೇಡಿ

ದೇವರ ಕೋಣೆಯಲ್ಲಿ ಗಂಟೆಯನ್ನು ಇಡುವಾಗ ದಿಕ್ಕು ಮುಖ್ಯವಾಗುತ್ತದೆ. ಪೂಜೆಗೆ ಬಳಸುವ ಗಂಟೆಯನ್ನು ಯಾವಾಗಲೂ ದೇವರ ಕೋಣೆಯ ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಈ ದಿಕ್ಕಿನಲ್ಲಿ ಗಂಟೆಯನ್ನು ಇಡುವುದು ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ. ಮನೆಯ ವಾತಾವರಣ ಹಾಳು ಮಾಡುತ್ತದೆ.

57
ಗಂಟೆ ಬಾರಿಸಲು ಸೂಕ್ತ ಸಮಯ

ನಿಮಗೆ ಇಷ್ಟ ಬಂದಂತೆ ಗಂಟೆ ಬಾರಿಸುವುದು ಸೂಕ್ತವಲ್ಲ. ಗಂಟೆ ಬಾರಿಸಲು ನಿರ್ದಿಷ್ಟ ಸಮಯ ಮತ್ತು ಅವಧಿ ಇದೆ. ಪೂಜೆಯ ಆರಂಭದಲ್ಲಿ, ಆರತಿ ಸಮಯದಲ್ಲಿ ಮತ್ತು ಪೂಜೆಯ ಕೊನೆಯಲ್ಲಿ ಮಾತ್ರ ಗಂಟೆ ಬಾರಿಸಬೇಕು. ಗಂಟೆ ಓಂ ನಂತೆ ಧ್ವನಿಸಬೇಕು. ಗಂಟೆಯನ್ನು ಹೆಚ್ಚು ಹೊತ್ತು ಜೋರಾಗಿ ಬಾರಿಸಬಾರದು. ಪೂಜೆಗೆ ಹಳೆಯ ಅಥವಾ ಹಾಳಾದ ಗಂಟೆಯನ್ನು ಬಳಸಬೇಡಿ.

67
ಗಂಟೆಯನ್ನು ನೆಲದ ಮೇಲೆ ಇಡಬೇಡಿ

ಯಾವುದೇ ಪೂಜಾ ಸಾಮಗ್ರಿಯನ್ನು ನೆಲದ ಮೇಲೆ ಇಡುವುದು ಸೂಕ್ತವಲ್ಲ. ಅದ್ರಲ್ಲೂ ಗಂಟೆಯನ್ನು ಎಂದಿಗೂ ನೆಲದ ಮೇಲೆ ಇಡಬಾರದು. ಯಾವುದಾದ್ರೂ ವಸ್ತುವಿನ ಮೇಲೆ ಅಥವಾ ಸ್ವಚ್ಛವಾದ ಸ್ಥಳದಲ್ಲಿ ಗಂಟೆಯನ್ನು ಇಡಬೇಕು.

77
ಗರುಡನ ಚಿತ್ರವಿರುವ ಗಂಟೆ

ನೀವು ಗರುಡನ ಚಿತ್ರವಿರುವ ಗಂಟೆಯನ್ನೇ ಪೂಜೆಗೆ ಬಳಸುವುದು ಸೂಕ್ತ. ಇದು ಸಾಮಾನ್ಯ ಗಂಟೆಗಳಿಗಿಂತ ಹೆಚ್ಚು ಶಕ್ತಿಶಾಲಿ ಮತ್ತು ಶುಭ. ದೇವರ ಕೋಣೆಯಲ್ಲಿ ವಿಗ್ರಹದ ಎಡ ಭಾಗದಲ್ಲಿ ಗಂಟೆಯನ್ನು ಇಡುವುದ್ರಿಂದ ನಿಮ್ಮೆಲ್ಲ ಆಸೆ ಈಡೇರುತ್ತದೆ.

Read more Photos on
click me!

Recommended Stories