ಪತಿ-ಪತ್ನಿ ಈ ದಿನ ದೈಹಿಕ ಸಂಬಂಧ ಬೆಳೆಸಿದ್ರೆ ಪ್ರಾಣಿಗಳಾಗಿ ಹುಟ್ತಾರಂತೆ!

First Published Jun 15, 2024, 5:13 PM IST

ಕೌಟುಂಬಿಕ ಜೀವನದಲ್ಲಿ, ಒಬ್ಬ ವ್ಯಕ್ತಿಯು ಕೆಲವು ನಿಯಮಗಳನ್ನು ಅನುಸರಿಸಬೇಕು.  ಬ್ರಹ್ಮವೈವರ್ತ ಪುರಾಣದಲ್ಲಿ, ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಕೆಲವು ನಿಯಮಗಳನ್ನು ವಿವರಿಸಲಾಗಿದೆ, ಅವುಗಳನ್ನ ಪಾಲಿಸಿದ್ರೆ ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಉಳಿಯುತ್ತದೆ.
 

ಜೀವನ ಅಂದ ಮೇಲೆ ಸಮಸ್ಯೆಗಳು ಬರೋದು ಸಾಮಾನ್ಯ. ಆದರೆ ಪದೇ ಪದೇ ಸಮಸ್ಯೆ ಬರುತ್ತಲಿದ್ದರೆ, ಅದರಿಂದ ಜೀವನವೇ ಹಾಳಾಗುತ್ತೆ.  ಎಲ್ಲವನ್ನೂ ಸರಿಯಾಗಿ ಮಾಡಿದ ನಂತರವೂ, ವಿಷಯಗಳು ನಾವು ಅಂದುಕೊಂಡಂತೆ ನಡೆಯೋದೆ ಇಲ್ಲ. ಏಕೆಂದರೆ, ಧರ್ಮಗ್ರಂಥಗಳ ಪ್ರಕಾರ, ನಾವು ಉಲ್ಲೇಖಿಸಿದ ನಿಯಮಗಳನ್ನು ಸರಿಯಾಗಿ ಅನುಸರಿಸುವುದಿಲ್ಲ . ಅವುಗಳನ್ನು ಅನುಸರಿಸದೇ ಹೋದರೆ ಜೀವನದಲ್ಲಿ ಹಲವು ಸಮಸ್ಯೆಗಳು (problems) ಕಾಣಿಸಿಕೊಳ್ಳುತ್ತೆ.
 

ಬ್ರಹ್ಮವೈವರ್ತ ಪುರಾಣದಲ್ಲಿ (Bramha Vaivarta Purana), ಪ್ರತಿಯೊಬ್ಬ ಪುರುಷ ಮತ್ತು ಮಹಿಳೆ ಅನುಸರಿಸಬೇಕಾದ ಕೆಲವು ನಿಯಮಗಳನ್ನು ಸೂಚಿಸಲಾಗಿದೆ. ಇದನ್ನು ಮಾಡುವುದರಿಂದ, ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ (Happiness and Prosperity) ಉಳಿಯುತ್ತದೆ. ಅಲ್ಲದೆ, ವ್ಯಕ್ತಿಯು ಎಂದಿಗೂ ಹಣದ ಕೊರತೆ ಅನುಭವಿಸೋದಿಲ್ಲ. ಹಾಗಿದ್ರೆ ಯಾವ ದಿನ ಯಾವ ಕೆಲಸಗಳನ್ನು ಮಾಡಬಾರದು ಅನ್ನೋದನ್ನು ನೋಡೋಣ. 
 

ಈ ದಿನಗಳನ್ನು ಕೆಲವೊಂದು ತಪ್ಪು ಮಾಡಬೇಡಿ
ಅಮಾವಾಸ್ಯೆ, ಪೂರ್ಣಿಮಾ, ಚತುರ್ದಶಿ ಮತ್ತು ಅಷ್ಟಮಿಯನ್ನು ಹಿಂದಿ ಪಂಚಾಂಗದಲ್ಲಿ ಬಹಳ ಮುಖ್ಯ ದಿನವೆಂದು ಪರಿಗಣಿಸಲಾಗಿದೆ. ಈ ಎಲ್ಲ ದಿನಾಂಕಗಳು ಪ್ರತಿ ತಿಂಗಳು ಬರುತ್ತವೆ. ಈ ದಿನ ಪುರುಷರು ಮತ್ತು ಮಹಿಳೆಯರು ಬ್ರಹ್ಮಚರ್ಯವನ್ನು ಆಚರಿಸಬೇಕು. ಅಲ್ಲದೆ, ಎಣ್ಣೆ ಮಸಾಜ್ (oil massage) ಮಾಡಬಾರದು. ಇದಲ್ಲದೆ, ಶುದ್ಧ ಸಸ್ಯಾಹಾರಿ ಆಹಾರವನ್ನು ಸೇವಿಸಬೇಕು.
 

ಈ ದಿನ ಸಂಬಂಧಗಳನ್ನು ಬೆಳೆಸಬೇಡಿ
ಬ್ರಹ್ಮವೈವರ್ತ ಪುರಾಣದ ಪ್ರಕಾರ, ಪುರುಷ ಮತ್ತು ಮಹಿಳೆ ಹಗಲು ಮತ್ತು ಸಂಜೆ ಲೈಂಗಿಕ ಕ್ರಿಯೆ (physical intimacy) ನಡೆಸಬಾರದು. ಹೀಗೆ ಮಾಡುವುದರಿಂದ ನೀವು ಮಹಾಲಕ್ಷ್ಮಿ ಮಾತೆಯ ಅನುಗ್ರಹ ಪಡೆಯೋದಿಲ್ಲ. ಒಂದು ವೇಳೆ ಇದನ್ನ ನೀವು ಅಪ್ಪಿ ತಪ್ಪಿ ಮಾಡಿದ್ದೀರಿ ಅಂದ್ರೆ, ಮಹಿಳೆಯರು ಮತ್ತು ಪುರುಷರು ಕಣ್ಣು ಮತ್ತು ಕಿವಿಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲಬಹುದು.
 

ಮಹಿಳೆಯರು ಈ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು
ಬ್ರಹ್ಮವೈವರ್ತ ಪುರಾಣದ ಪ್ರಕಾರ, ಮಹಿಳೆಯರು ತಮ್ಮ ಗಂಡಂದಿರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಬೇಕು. ಅದೇ ಸಮಯದಲ್ಲಿ, ಅವರನ್ನು ಸಹ ಗೌರವಿಸಬೇಕು. ಮಹಿಳೆಯರು ತಮ್ಮ ಪತಿಯನ್ನು ಗೌರವಿಸದಿದ್ದರೆ, ಅವರಿಗೆ ಮಾನಸಿಕ ಹಿಂಸೆ ನೀಡಿದ್ರೆ , ಅವರು ಪ್ರಾಣಿಗಳು ಮತ್ತು ಪಕ್ಷಿಗಳ ಯೋನಿಯಲ್ಲಿ ಜನಿಸುತ್ತಾರೆ ಎನ್ನುವ ಮಾತು ಇದೆ.
 

ಪುರುಷರು ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು
ಪುರುಷರು ಯಾವತ್ತೂ ಇತರ ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ನೋಡಲೇಬಾರದು. ಅಲ್ಲದೆ, ಅವನು ತನ್ನ ಹೆಂಡತಿಯನ್ನು ಅವಮಾನಿಸಿದರೆ, ವ್ಯಕ್ತಿಯ ಜೀವನದಲ್ಲಿ ಬಡತನ ಹೆಚ್ಚಾಗುತ್ತದೆ. ಜೊತೆಗೆ, ಹಣಕಾಸಿನ ಸಮಸ್ಯೆಗಳನ್ನು (Financial Crisis) ಎದುರಿಸಬೇಕಾಗುತ್ತದೆ.

ಪುರಾಣದ ಪ್ರಕಾರ, ನೀವು ಪೂಜೆ ಮಾಡಿದ ನಂತರ ಯಾವತ್ತೂ, ದೇವರು ಮತ್ತು ದೇವತೆಗಳ ವಿಗ್ರಹ, ಶಂಖ, ಚಿನ್ನವನ್ನು ಎಂದಿಗೂ ನೆಲದ ಮೇಲೆ ಇಡಬಾರದು. ಇದಲ್ಲದೆ, ದೀಪ, ಶಾಲಿಗ್ರಾಮ, ಶಿವಲಿಂಗವನ್ನು ಎಂದಿಗೂ ಕೆಳಗೆ ಇಡಬೇಡಿ. ಅದನ್ನು ಕೆಳಗೆ ಇರಿಸೋ ಮೊದಲು ಒಂದು ಬಟ್ಟೆಯನ್ನಾದರೂ ಹಾಕೋದನ್ನು ಮರೆಯಬೇಡಿ. 
 

Latest Videos

click me!