ಜೀವನದಲ್ಲಿ ಯಾವುದೇ ಗುರಿ ಸಾಧಿಸುವುದು ಕಷ್ಟದ ಕೆಲಸವಲ್ಲ. ಸ್ವಲ್ಪ ತೊಂದರೆ ಇದ್ದರೂ, ಬಿಟ್ಟು ಕೊಡದೇ ಗುರಿಯೆಡೆಗೆ ಶ್ರಮಿಸಿದ್ರೆ, ತಲುಪೋ ಮಾರ್ಗ ಸುಲಭಗೊಳಿಸುತ್ತದೆ. ಈ ಸಮಯದಲ್ಲಿ, ಒಬ್ಬ ವ್ಯಕ್ತಿ ತನ್ನ ಕುಟುಂಬದಿಂದ ಹೆಚ್ಚು ಧೈರ್ಯವನ್ನು ಪಡೆಯುತ್ತಾನೆ. ಸಮಯ ಯಾವುದೇ ಇರಲಿ, ಕಷ್ಟವೋ, ಸುಖವೋ, ಮನೆಯ ಜನ, ಅದರಲ್ಲೂ ಯಜಮಾನ ಜೊತೆಗಿದ್ದರೆ ಎಲ್ಲಾ ಸಮಸ್ಯೆಗಳನ್ನು ಸುಲಭವಾಗಿ ಎದುರಿಸಬಹುದು.
ಆಚಾರ್ಯ ಚಾಣಕ್ಯ (Acharya Chanakya) ತನ್ನ ನೀತಿಶಾಸ್ತ್ರದಲ್ಲಿ ಉತ್ತಮ ಕುಟುಂಬ ಹೇಗಿರುತ್ತೆ ಅನ್ನೋದನ್ನು ಉಲ್ಲೇಖಿಸಿದ್ದಾನೆ. ಮನೆಯ ಪ್ರಗತಿಯು ಮನೆಯ ಮುಖ್ಯಸ್ಥನ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳಿದ್ದಾರೆ. ಮನೆ ಅಡಿಪಾಯದಿಂದ ಹೇಗೆ ಸ್ಟ್ರಾಂಗ್ ಆಗಿ ನಿಲ್ಲುತ್ತದೆಯೋ?, ಅದೇ ರೀತಿ ಮನೆ ಜನ ನೆಮ್ಮದಿಯಾಗಿರಬೇಕು ಅಂದ್ರೆ, ಮನೆಯ ಯಜಮಾನ ಸರಿಯಾಗಿರಬೇಕು. ಆದ್ದರಿಂದ, ಮನೆಯ ಮುಖ್ಯಸ್ಥ ಕೆಲವು ಗುಣಗಳನ್ನು ಹೊಂದಿರಬೇಕು. ಚಾಣಕ್ಯನ ಪ್ರಕಾರ, ಮುಖ್ಯಸ್ಥನಿಗೆ ಈ ಗುಣಗಳು ಇಲ್ಲದಿದ್ದರೆ, ಮನೆಯಲ್ಲಿ ಸಂತೋಷ, ನೆಮ್ಮದಿ ಇರೋದೆ ಇಲ್ಲ.
ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ
ಮನೆಯ ಮುಖ್ಯಸ್ಥರು ಕುಟುಂಬಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹೀಗಿರುವಾಗ, ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುವುದು ಮುಖ್ಯ. ಮನೆಯ ಒಳಿತಿಗಾಗಿ ನಿರ್ಧಾರ ತೆಗೆದುಕೊಳ್ಳುವಾಗ, ಆ ನಿರ್ಧಾರದಿಂದ ಕುಟುಂಬದ ಯಾವುದೇ ಸದಸ್ಯರಿಗೆ ಹಾನಿಯಾಗಬಾರದು ಎಂಬುದನ್ನು ನೆನಪಿನಲ್ಲಿಡಬೇಕು. ಏಕೆಂದರೆ ಎಲ್ಲರನ್ನೂ ಸಂತೋಷವಾಗಿಡುವುದು ಅವರ ಜವಾಬ್ದಾರಿ.
ಹಿತ್ತಾಳೆ ಕಿವಿ
ಚಾಣಕ್ಯ ನೀತಿಯ ಪ್ರಕಾರ, ಮನೆಯ ಮುಖ್ಯಸ್ಥರು ಯಾವಾಗಲೂ ಜಾಗರೂಕರಾಗಿರಬೇಕು. ಮತ್ತು, ಎಲ್ಲರ ಮಾತನ್ನು ನಂಬಬಾರದು. ನಿಮ್ಮ ಕಣ್ಣುಗಳು ನೋಡುವ ವಿಷಯಗಳನ್ನು ನಂಬುವ ಜೊತೆಗೆ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ, ಎಲ್ಲಾ ಸಂಬಂಧಗಳನ್ನು ಬಲಪಡಿಸಬೇಕು. ಇದಲ್ಲದೆ, ಯಾವುದೇ ಜಗಳವನ್ನು ಪರಿಹರಿಸುವಾಗ, ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳಬೇಕು.
ಯಾವುದೇ ತಾರತಮ್ಯ ಮಾಡಬೇಡಿ
ಯಾವುದೇ ಮನೆಯ ಮುಖ್ಯಸ್ಥನು ಎಲ್ಲರ ಸಮಸ್ಯೆಗಳನ್ನು ಪರಿಹರಿಸುವ ಸದಸ್ಯನಾಗಿದ್ದಾನೆ. ಆದ್ದರಿಂದ, ತಾರತಮ್ಯಕ್ಕೆ ಯಾವುದೇ ಅವಕಾಶ ಇರಬಾರದು. ಮನೆಯಲ್ಲಿ ಪ್ರತಿಯೊಬ್ಬರಿಗೂ ಒಂದೇ ರೀತಿಯ ನಿಯಮಗಳನ್ನು ಮಾಡಬೇಕು, ಹಾಗೆಯೇ ಅದರ ಅನುಸರಣೆ. ಇದರಿಂದ ಯಾರಿಗೂ ತಾರತಮ್ಯವಾಗುವುದಿಲ್ಲ.
ಶಿಸ್ತಿನ ಬಗ್ಗೆ ಕಾಳಜಿ ವಹಿಸಿ
ಜೀವನದಲ್ಲಿ ಯಾವುದೇ ಕೆಲಸವನ್ನು ಶಿಸ್ತಿನಿಂದ ಮಾಡಿದರೆ, ಯಶಸ್ಸಿನ ಸಾಧ್ಯತೆ ಹೆಚ್ಚಾಗುತ್ತವೆ. ಆದ್ದರಿಂದ, ಮನೆಯ ಮುಖ್ಯಸ್ಥರು ಯಾವಾಗಲೂ ಶಿಸ್ತು ಮತ್ತು ಬದ್ಧತೆಗೆ ಪ್ರಾಮುಖ್ಯತೆ ಕೊಡೋದನ್ನು ರೂಢಿ ಮಾಡಬೇಕು. ಇದರೊಂದಿಗೆ, ಕುಟುಂಬ ಸದಸ್ಯರು ಪ್ರಗತಿ ಹೊಂದುತ್ತಾರೆ, ಅವರು ನಿರ್ಧಾರಕ್ಕೆ ಅಂಟಿಕೊಳ್ಳುವುದನ್ನು ಸಹ ಕಲಿಯುತ್ತಾರೆ.
ಉಳಿತಾಯ, ವ್ಯರ್ಥ ವೆಚ್ಚ ನಿಲ್ಲಿಸುವುದು
ಮನೆಯ ಮುಖ್ಯಸ್ಥ ತೀಕ್ಷ್ಣ ಸ್ವಭಾವದವರಾಗಿರಬೇಕು. ಕುಟುಂಬದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹಣವನ್ನು ಹೇಗೆ ಖರ್ಚು ಮಾಡಬೇಕು ಅನ್ನೋದು ತಿಳಿದಿರಬೇಕು. ಇದು ಮಾತ್ರವಲ್ಲ, ಕುಟುಂಬ ಸದಸ್ಯರ ವ್ಯರ್ಥ ವೆಚ್ಚವನ್ನು ಸಹ ನಿಲ್ಲಿಸಬೇಕು. ಮನೆಯನ್ನು ಚೆನ್ನಾಗಿ ನಿರ್ವಹಿಸುವುದು ಮತ್ತು ಗಳಿಸಿದ ಮೊತ್ತಕ್ಕೆ ಅನುಗುಣವಾಗಿ ಖರ್ಚು ಮಾಡುವುದು ಮುಖ್ಯಸ್ಥರ ಜವಾಬ್ದಾರಿಯಾಗಿದೆ. ಸಮೃದ್ಧಿ ಮತ್ತು ಆಶೀರ್ವಾದಕ್ಕಾಗಿ ಹಣ ಉಳಿಸಿ. ಇದರಿಂದ ಕೆಟ್ಟ ಸಮಯಗಳು ಸಹ ಸುಲಭವಾಗಿ ಹಾದುಹೋಗುತ್ತವೆ.