ಬೇಸಿಗೆ ಕಾಲ ಹಾಗೂ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಹಾವುಗಳು ಆಶ್ರಯ ಹುಡುಕಿ ಮನೆಯೊಳಗೆ ಪ್ರವೇಶ ಮಾಡುವುದು ಹೆಚ್ಚು. ಇದರಿಂದ ಅಪಾಯವೂ ಹೆಚ್ಚು. ಹೀಗಾಗಿ ಭಾರತದ ಹಲೆವೆಡೆ ಹಾವು ಬರದಂತೆ ತಡೆಯಲು ತೆಂಗಿನಕಾಯಿ ಟ್ರಿಕ್ ಬಳಕೆ ಮಾಡುತ್ತಿದ್ದಾರೆ.
ಬೇಸಿಗೆ ಕಾಲದಲ್ಲಿ ಆಹಾರ ಹುಡುಕಿ ಬಿಲದಿಂದ ಹೊರಬರುವ ಹಾವು ವಿಪರೀತ ಉರಿ ಬಿಸಿಲಿನ ಕಾರಣ ಮನೆಯೊಳಗೆ ಎಂಟ್ರಿಕೊಡುತ್ತದೆ. ಇತ್ತ ಮಳೆಗಾಲ ಆರಂಭವಾಗುತ್ತಿದ್ದಂತೆ ಬಿಲದೊಳಗೆ ನೀರು ತುಂಬಿಕೊಳ್ಳುವ ಕಾರಣ ಹಾವುಗಳು ಮನೆ, ಶೆಡ್ ಸೇರಿದಂತೆ ಈ ರೀತಿಯ ಆಶ್ರಯ ಹುಡುಕಿ ಬರುತ್ತಿದೆ. ಇದರಿಂದ ಅಪಾಯದ ಸಾಧ್ಯತೆ ಹೆಚ್ಚು. ಕೇರಳ ಸೇರಿದಂತೆ ಹಲೆವೆಡೆ ದುರಂತ ಘಟನೆಗಳು ನಡೆದಿದೆ. ಹೀಗಾಗಿ ಹಾವು ಬರದಂತೆ ತಡೆಯಲು ಹಲವರು ಕೆಲ ವೈರಲ್ ಟ್ರಿಕ್ ಬಳಸುತ್ತಿದ್ದಾರೆ.
26
ಏನಿದು ತೆಂಗಿನಕಾಯಿ ಟ್ರಿಕ್?
ಸೋಶಿಯಲ್ ಮೀಡಿಯಾ ಸೇರಿದಂತೆ ಹಲವು ತಾಣಗಳಲ್ಲಿ ಹಾವು ಬರದಂತೆ ತಡೆಯಲು, ಹಾವು ಓಡಿಸಲು ತೆಂಗಿನಕಾಯಿ ಟ್ರಿಕ್ ಬಳಸುತ್ತಿದ್ದಾರೆ. ಭಾರತದ ಕೆಲ ಹಳ್ಳಿಗಳಲ್ಲಿ ಹಾವು ಬಂದಾಗ, ಹಾವು ಕಂಡಾಗ ಅದರ ಮುಂದೆ ತೆಂಗಿನ ಕಾಯಿ ಇಡುತ್ತಾರೆ. ಇದರಿಂದ ಹಾವು ವಾಪಸ್ ಮರಳುತ್ತದೆ, ಅಥವಾ ಮನೆಗೆ ಪ್ರವೇಶ ಮಾಡುವುದಿಲ್ಲ ಎಂಬುದು ಹಳ್ಳಿ ಜನರ ನಂಬಿಕೆ
36
ಎರಡು ತೆಂಗಿನ ಕಾಯಿ ಬಳಕೆ
ಹಾವು ಬರದಂತೆ ತಡೆಯಲು ಅಥವಾ ಹಾವು ಬಂದಾಗ ಎರಡು ತೆಂಗಿನ ಕಾಯಿಗಳನ್ನು ಹಾವಿನ ಬರುತ್ತಿರುವ ದಾರಿ ಅಥವಾ ಅದರ ಮುಂದೆ ಇಡುತ್ತಾರೆ. ಇದರಿಂದ ಹಾವಿಗೆ ದಿಗ್ಬಂಧನ ಮಾಡಿದಂತೆ ಆಗುತ್ತದೆ ಅನ್ನೋದು ಹಳ್ಳಿ ಜನರ ನಂಬಿಕೆ. ತೆಂಗಿನಕಾಯಿ ಮೇಲಿನರುವ ನಾರಿ ಅಂಶ ಹಾಗೂ ಆಕಾರದಿಂದ ಹಾವು ಅಲ್ಲೆ ನಿಲ್ಲುವಂತೆ ಮಾಡುತ್ತದೆ. ಬಳಿಕ ಉರಗ ತಜ್ಞರು ಹಾವನ್ನು ಹಿಡಿದು ಕಾಡಿಗೆ ಬಿಡಲು ಸಹಾಯವಾಗುತ್ತದೆ ಎಂಬುದು ನಂಬಿಕೆ.
ಹಾವು ಹಿಡಿಯುವ ಕೆಲ ಉರಗ ತಜ್ಞರು ಹಾವಿನ ತಲೆ ಬಳಿ ತೆಂಗಿನ ಕಾಯಿ ತಂದಾಗ ಶಾಂತವಾಗಿ ವರ್ತಿಸುವ ಹಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿದೆ. ಇದೀಗ ಈ ಸೋಶಿಯಲ್ ಮೀಡಿಯಾದ ವಿಡಿಯೋಗಳೇ ಭಾರಿ ಸಂಚಲನ ಸೃಷ್ಟಿಸಿದೆ.ಹೀಗಾಗಿ ಹಲವರು ಇದೀಗ ಹಾವು ಬರದಂತೆ ತೆಂಗಿನಕಾಯಿ ಟ್ರಿಕ್ ಬಳಸುತ್ತಿದ್ದಾರೆ.
56
ಇದು ಕೆಲಸ ಮಾಡುತ್ತದೆಯಾ?
ತೆಂಗಿನ ಕಾಯಿಯಲ್ಲಿ ಹಾವನ್ನು ಓಡಿಸುವ ಶಕ್ತಿ ಅಥವಾ ಮಂತ್ರ ಇಲ್ಲ ಎಂಬುದು ಉರಗ ತಜ್ಞರು, ವಿಜ್ಞಾನಿಗಳ ಮಾತು. ಹಾವು ಕಂಪನಗಳಿಗೆ ಪ್ರತಿಕ್ರಿಯಿಸುವ ಜೀವಿ. ಅದರ ಮುಂದೆ ತೆಂಗಿನಕಾಯಿ ಇಟ್ಟಾಗ ಪಥ ಬದಲಿಸಬಹುದು. ಅಥವ ಭಯಗೊಳ್ಳಬಹುದು. ತೆಂಗಿನಕಾಯಿಯಿಂದ ಹಾವು ಬರುವುದಿಲ್ಲ ಅನ್ನೋದಕ್ಕೆ ಯಾವುದೇ ವೈಜ್ಞಾನಿಕವಾಗಿ, ವೈದ್ಯಕೀಯವಾಗಿ ಯಾವುದೇ ಕಾರಣಗಳಿಲ್ಲ.
66
ತೆಂಗಿನಕಾಯಿ ಹಿಡಿದು ಸರ್ಕಸ್ ಮಾಡಬೇಡಿ
ಸೋಶಿಯಲ್ ಮೀಡಿಯಾದಲ್ಲಿ ತೆಂಗಿನಕಾಯಿ ಟ್ರಿಕ್ ಭಾರಿ ವೈರಲ್ ಆಗುತ್ತಿದೆ. ಹಾಗಂತ ನೀವು ತೆಂಗಿನಕಾಯಿ ಹಿಡಿದು ಹಾವು ಓಡಿಸುವ ಪ್ರಯತ್ನ ಮಾಡಬೇಡಿ. ಅಪಾಯದ ಸಾಧ್ಯತೆಯೂ ಹೆಚ್ಚಿದೆ. ಹಾವು ಕಂಡಾಗ ಅದರ ಹತ್ತಿರ ಹೋಗುವ, ಅದನ್ನು ಭಯಪಡಿಸುವ, ವಿಚಲಿತಗೊಳಿಸುವ ಪ್ರಯತ್ನ ಮಾಡಬೇಡಿ. ತಕ್ಷಣವೇ ಅರಣ್ಯ ಇಲಾಖೆ, ಉರಗ ತಜ್ಞರಿಗೆ ಮಾಹಿತಿ ನೀಡಿ ಹಾವನ್ನು ಹಿಡಿದು ಅರಣ್ಯದಲ್ಲಿ ಬಿಡುವ ಪ್ರಯತ್ನಕ್ಕೆ ಕೈಜೋಡಿಸಿ.