ಮನೆಯ ಮೆಟ್ಟಿಲ ವಾಸ್ತು ಕಡೆಗಣಿಸಬೇಡಿ, ಇದರ ಹಿಂದೆದೆ ಯಶಸ್ಸಿನ ಗುಟ್ಟು

First Published Apr 21, 2021, 5:10 PM IST

ವೃತ್ತಿ ಜೀವನದಲ್ಲಾಗಲಿ ಅಥವಾ ಮನೆಯಲ್ಲಾಗಲೀ ಮೆಟ್ಟಿಲು ಜೀವನದಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿವೆ. ಈ ಮೆಟ್ಟಿಲುಗಳನ್ನೇರುವ ಮೂಲಕ, ಜೀವನವನ್ನು ಎತ್ತರಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ಮನೆಯಲ್ಲಿ ಮಾಡಿದ ಮೆಟ್ಟಿಲು ಆ ಮನೆಯಲ್ಲಿ ವಾಸಿಸುವ ಜನರ ಸಂತೋಷ, ಸಮೃದ್ಧಿ ಮತ್ತು ಪ್ರಗತಿಯೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿವೆ. ಇದಕ್ಕಾಗಿಯೇ ಮನೆಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸುವಾಗ ಕೆಲವು ವಿಷಯಗಳನ್ನು ವಿಶೇಷವಾಗಿ ನೋಡಿಕೊಳ್ಳಬೇಕು. ಮೆಟ್ಟಿಲುಗಳ ದಿಕ್ಕು ಮತ್ತು ಸಂಖ್ಯೆಗೆ ನಿರ್ದಿಷ್ಟ ಗಮನ ನೀಡಬೇಕು. ವಾಸ್ತು ಪ್ರಕಾರ, ಯಾವುದೇ ಮನೆ ಅಥವಾ ಕಟ್ಟಡದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲು ಸರಿಯಾದ ನಿಯಮ ಯಾವುದು ಎಂಬುದನ್ನು ತಿಳಿಯೋಣ ಬನ್ನಿ.