ಸಂಪತ್ತು, ಸಂತೋಷ ದಿಢೀರ್ ಹೆಚ್ಚಳಕ್ಕೆ ನವರಾತ್ರಿ ಸಮಯದಲ್ಲಿ ಹೀಗೆ ಮಾಡಿ

Published : Oct 14, 2023, 05:08 PM IST

ಹಿಂದೂ ಧರ್ಮದಲ್ಲಿ ನವರಾತ್ರಿಗೆ ವಿಶೇಷ ಮಹತ್ವವಿದೆ ಮತ್ತು ಈ ಒಂಬತ್ತು ದಿನಗಳಲ್ಲಿ, ತಾಯಿಯ ವಿವಿಧ ರೂಪಗಳನ್ನು ಪೂಜಿಸುವ ನಿಯಮವಿದೆ. ಈ ಸಮಯದಲ್ಲಿ, ಭಕ್ತರು ಮಾತೆಯನ್ನು ಮೆಚ್ಚಿಸಲು ಪೂಜೆ ಮತ್ತು ಉಪವಾಸ ಮಾಡುತ್ತಾರೆ.   

PREV
18
ಸಂಪತ್ತು, ಸಂತೋಷ ದಿಢೀರ್ ಹೆಚ್ಚಳಕ್ಕೆ ನವರಾತ್ರಿ ಸಮಯದಲ್ಲಿ ಹೀಗೆ ಮಾಡಿ

ನವರಾತ್ರಿ ಹಬ್ಬಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ನವರಾತ್ರಿ ತಿಥಿ ವರ್ಷದಲ್ಲಿ ನಾಲ್ಕು ಬಾರಿ ಬಂದರೂ, ಈ ಎರಡು ಬಾರಿ ಅಂದರೆ ಚೈತ್ರ ಮತ್ತು ಅಶ್ವಿನಿ ತಿಂಗಳಲ್ಲಿ ಇದನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಅಶ್ವಿನಿ ಮಾಸದಲ್ಲಿ ಬರುವ ನವರಾತ್ರಿಯನ್ನು ಶರದ್ ನವರಾತ್ರಿ (Sharad Navratri) ಎಂದೂ ಕರೆಯಲಾಗುತ್ತದೆ.

28

ಇದು ಅಶ್ವಿನಿ ಮಾಸದ ಪ್ರತಿಪಾದದಂದು ಪ್ರಾರಂಭವಾಗುತ್ತದೆ ಮತ್ತು ಪೂರ್ಣ ಒಂಬತ್ತು ದಿನಗಳ ನಂತರ ದಸರಾ ಹಬ್ಬದೊಂದಿಗೆ ಕೊನೆಗೊಳ್ಳುತ್ತದೆ. ಈ ವರ್ಷ, ನವರಾತ್ರಿ ಅಶ್ವಿನಿ ತಿಂಗಳ ಶುಕ್ಲ ಪಕ್ಷದ ಪ್ರತಿಪಾದ ತಿಥಿಯಂದು ಅಂದರೆ ಅಕ್ಟೋಬರ್ 15, ಭಾನುವಾರ ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 24, ದಸರಾದಲ್ಲಿ ಕೊನೆಗೊಳ್ಳುತ್ತದೆ.
 

38

ನೀವು ಸಹ ಮಾತಾ ದುರ್ಗಾವನ್ನು ಮೆಚ್ಚಿಸಲು ಮತ್ತು ಮನೆಯ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಬಯಸಿದರೆ, ಕೆಲವು ಸುಲಭ ಜ್ಯೋತಿಷ್ಯ ಪರಿಹಾರಗಳನ್ನು ಪ್ರಯತ್ನಿಸಬಹುದು. ಇಲ್ಲಿ ತಿಳಿಸಿದ ಸಲಹೆಗಳನ್ನು ಪಾಲಿಸಿದರೆ ಸಂಪತ್ತು ಹೆಚ್ಚಾಗೋದು ಖಚಿತ. 

48

ನವರಾತ್ರಿಗೂ ಮುನ್ನ ಮನೆ ಸ್ವಚ್ಛಗೊಳಿಸಿ 
ದುರ್ಗಾ ದೇವಿಯ ಅನುಗ್ರಹವನ್ನು ಪಡೆಯಲು, ನವರಾತ್ರಿ ಪ್ರಾರಂಭವಾಗುವ ಮೊದಲು ಮತ್ತು ಕಲಶವನ್ನು ಸ್ಥಾಪಿಸುವ ಮೊದಲು ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಮುಖ್ಯವಾಗಿ ಮನೆಯ ಈಶಾನ್ಯ ಮೂಲೆಯನ್ನು ಸ್ವಚ್ಛಗೊಳಿಸಿದ (clean your house) ನಂತರ ಆ ಸ್ಥಳದಲ್ಲಿ ಪೂಜೆ ಮಾಡಬೇಕು. ಹೀಗೆ ಮಾಡೋದ್ರಿಂದ ಯಾವಾಗಲೂ ನಿಮ್ಮ ಮನೆಯಲ್ಲಿ ಸಂತೋಷ ಇರುವಂತೆ ನೋಡಿಕೊಳ್ಳುತ್ತದೆ.  

58

ಅಖಂಡ ದೀಪ ಬೆಳಗಿಸಿ
ಮನೆಯಲ್ಲಿ ದೀಪ ಬೆಳಗಿಸಲು ಕೆಲವು ವಿಶೇಷ ನಿಯಮಗಳಿದ್ದರೂ, ಈ ನಿಯಮಗಳನ್ನು ಅನುಸರಿಸುವ ಮೂಲಕ ನೀವು ಅಖಂಡ ದೀಪವನ್ನು ಬೆಳಗಿಸಿದರೆ, ಅದು ಮನೆಯ ಸಂತೋಷ ಮತ್ತು ಸಮೃದ್ಧಿಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಅಖಂಡ ಜ್ಯೋತಿ ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಮತ್ತು ಸಂತೋಷ ಇರುವಂತೆ ನೋಡಿಕೊಳ್ಳುತ್ತೆ. 

68

ದುರ್ಗಾ ದೇವಿಗೆ ಕೆಂಪು ಬಟ್ಟೆ ಮತ್ತು ಕುಂಕುಮ ಅರ್ಪಿಸಿ 
ನವರಾತ್ರಿಯಲ್ಲಿ ದುರ್ಗಾ ದೇವಿಗೆ ಕೆಂಪು ಬಟ್ಟೆ ಮತ್ತು ಕುಂಕುಮ ಅರ್ಪಿಸಿ, ಇದು ಯಾವಾಗಲೂ ಮನೆಯಲ್ಲಿ ಸಮೃದ್ಧಿಯನ್ನು ಕಾಪಾಡುತ್ತದೆ. ದುರ್ಗಾ ದೇವಿಗೆ ಕುಂಕುಮವನ್ನು ಅರ್ಪಿಸಿದ್ರೆ ತಾಯಿ ಆಶೀರ್ವಾದವನ್ನು ಪಡೆಯುತ್ತಾರೆ ಮತ್ತು ಸಂತೋಷ ಉಳಿಯುತ್ತದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಸಿಂಧೂರವನ್ನು ನಿಯಮಿತವಾಗಿ ಅರ್ಪಿಸಬೇಕು. ಈ ಪರಿಹಾರವು ನಿಮ್ಮ ಜೀವನದಲ್ಲಿ ಆರ್ಥಿಕ ಪ್ರಯೋಜನಗಳನ್ನು ತರುತ್ತದೆ ಮತ್ತು ಸಮೃದ್ಧಿಯ ಬಾಗಿಲುಗಳನ್ನು ತೆರೆಯುತ್ತದೆ. 

78

ತಾಯಿಯ ಮುಂದೆ ಕರ್ಪೂರ ಬೆಳಗಿಸಿ 
ನವರಾತ್ರಿಯ ಒಂಬತ್ತು ದಿನಗಳಲ್ಲಿ, ನೀವು ನಿಯಮಿತವಾಗಿ ಕರ್ಪೂರದ ಆರತಿಯನ್ನು ಬೆಳಗಿಸಬೇಕು ಮತ್ತು ಅದರ ಹೊಗೆಯನ್ನು ಮನೆಯಾದ್ಯಂತ ಹರಡಲು ಬಿಡಬೇಕು. ಇದು ನಿಮ್ಮ ಮನೆಯಲ್ಲಿ ಸಮೃದ್ಧಿಯನ್ನು ಹೆಚ್ಚಿಸುತ್ತೆ ಮತ್ತು ಮನೆಯ ನಕಾರಾತ್ಮಕ ಶಕ್ತಿಯನ್ನು (negative energy) ದೂರವಿರಿಸುತ್ತದೆ ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಈ ಸಮಯದಲ್ಲಿ, ನೀವು ಹವನ ಮಾಡಿದರೂ, ಮನೆಯಲ್ಲಿ ಸಂತೋಷವಿರುತ್ತದೆ.

88

ದೇವಿಗೆ ಕೆಂಪು ಹೂವುಗಳನ್ನು ಅರ್ಪಿಸಿ
ನವರಾತ್ರಿಯ ಒಂಬತ್ತು ದಿನಗಳಲ್ಲಿ, ಮಾತೆಯ ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ ಮತ್ತು ಈ ಸಮಯದಲ್ಲಿ ನೀವು ತಾಯಿಗೆ ಕೆಂಪು ಹೂವುಗಳನ್ನು (red flowers) ಅರ್ಪಿಸಿದರೆ, ಅದು ವಿಶೇಷವಾಗಿ ಫಲಪ್ರದವಾಗಿರುತ್ತದೆ. ಜೊತೆಗೆ, ನಿಮ್ಮ ಜೀವನದಲ್ಲಿ ಯಾವಾಗಲೂ ಸಂತೋಷವಿರುತ್ತದೆ ಮತ್ತು ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿರುತ್ತದೆ.

Read more Photos on
click me!

Recommended Stories