ಈ ರಾಶಿಯವರು ನಿಮಗೆ ಸುಲಭವಾಗಿ ಮೋಸ ಮಾಡಬಹುದು!!

First Published | Mar 10, 2023, 5:01 PM IST

ಹುಟ್ಟಿದ ರಾಶಿ-ನಕ್ಷತ್ರಗಳಿಗೆ ಅನುಗುಣವಾಗಿ ಮನುಷ್ಯನ ವ್ಯಕ್ತಿತ್ವವೂ ವಿಭಿನ್ನವಾಗಿರುತ್ತದೆ. ರಾಶಿಯಿಂದಲೇ ಮನುಷ್ಯ ಗುಣ ಸ್ವಭಾವ ಹೇಗೆ ಎಂಬುದನ್ನು ಸುಲಭವಾಗಿ ಕಂಡು ಹಿಡಿಯಬಹುದು. ಅದರಲ್ಲಿ ಕೆಲವು ರಾಶಿಗಳಂತೂ ಇನ್ನೊಬ್ಬರಿಗೆ ವಂಚಿಸಲೆಂದೇ ಸಂಚು ರೂಪಿಸುತ್ತಿದ್ದಾರೆ. ಆ ರಾಶಿಗಳ ಬಗ್ಗೆ ಇಲ್ಲಿದೆ ಮಾಹಿತಿ. 

ನಿಮ್ಮ ಸಂಗಾತಿ ಇವರಲ್ಲಿ ಒಬ್ಬರೇ?
ಕೆಲವರು ನಿಮಗೆ ತುಂಬಾ ನಿಷ್ಠರಾಗಿರುತ್ತಾರೆ. ಇವರು ನಿಮ್ಮನ್ನು ಅವರ ಜೀವನದ "ಒನ್ ಅಂಡ್ ಓನ್ಲಿ" ಪ್ರೀತಿಯಾಗಿ ನೋಡುತ್ತಾರೆ. ಆದರೆ, ಕೆಲವು ನಿರ್ದಿಷ್ಟ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಹೊಂದಿರುವ ರಾಶಿಯವರು ನಿಮಗೆ ಮೋಸ(Cheat) ಮಾಡುತ್ತಾರೆ. ನಿಮ್ಮ ಸ್ನೇಹಿತ ಅಥವಾ ನಿಮ್ಮವರು ಸಹ ಅವರಲ್ಲಿ ಒಬ್ಬರು ಎಂದು ನೀವು ಭಾವಿಸಿದರೆ, ಈ ಸ್ಟೋರಿ ಓದಿ.  
 

ಮಿಥುನ ರಾಶಿ
ಈ ರಾಶಿಯವರು ತಮ್ಮ ಸಂಗಾತಿಗೆ ಮೋಸ ಮಾಡುವ ಬಲವಾದ ಗುಣ ಹೊಂದಿದ್ದಾರೆ  ಯಾಕೆಂದರೆ ಈ ರಾಶಿಯವರು ಮೋಜಿನ ಸ್ವಭಾವದವರು. ಡೇಟಿಂಗ್ (Dating) ಮಾಡುವಾಗ, ನೀವು ಇವರಿಂದ ತುಂಬಾ ಸಂತೋಷ ಮತ್ತು ಪ್ರೀತಿಸಲ್ಪಡುತ್ತೀರಿ, ಆದರೆ ನೀವು ಅವರ ಎನೆರ್ಜಿಗೆ ಮ್ಯಾಚ್ ಮಾಡಲು ಸಾಧ್ಯವಾಗದಿದ್ದರೆ, ಅವರು ಬೇಸರಗೊಳ್ಳುತ್ತಾರೆ ಮತ್ತು ಇದೇ ಕಾರಣದಿಂದ ಅವರು ನಿಮಗೆ ಮೋಸ ಮಾಡುತ್ತಾರೆ.

Tap to resize

ತುಲಾ ರಾಶಿ (Libra)
ತುಲಾ ರಾಶಿಯವರು ತುಂಬಾ ಸೌಮ್ಯ, ಸ್ವೀಟ್ ಮತ್ತು ಬ್ಯೂಟಿಫುಲ್ ಜನರು. ಇವರು ವಾದವನ್ನು ಬ್ರೇಕ್  ಮಾಡುವವರಲ್ಲಿ ಮೊದಲಿಗರಾಗಿರುತ್ತಾರೆ. ಆದರೆ ಸಂಬಂಧದಲ್ಲಿ ಸಂಗಾತಿಯಾಗಿ ಇವರು ಹೆಚ್ಚಾಗಿ ಅತ್ಯಂತ ವಿಶ್ವಾಸಘಾತುಕರು ಎಂದು ಕಂಡುಬಂದಿದೆ. 

ನಿರ್ಧಾರ ತೆಗೆದುಕೊಳ್ಳಲು ಮತ್ತು ಅದಕ್ಕೆ ಅಂಟಿಕೊಳ್ಳಲು ತುಲಾ ರಾಶಿಯವರ ಅಸಮರ್ಥತೆ ಇವರ ಪ್ರಮುಖ ಗುಣಲಕ್ಷಣ. ಇವರು ಸುಂದರವಾದ ಎಲ್ಲವನ್ನೂ ಪ್ರೀತಿಸುತ್ತಾರೆ (Love) ಆದ್ದರಿಂದ ಇವರು ಬೇರೊಬ್ಬ ಸುಂದರ ಜೀವಿಯನ್ನು ಭೇಟಿಯಾದಾಗ ಸುಲಭವಾಗಿ ಜಾರಬಹುದು ಮತ್ತು ಅಲ್ಲಿಯೇ ಅವರ ಸಮಸ್ಯೆಗಳು ಪ್ರಾರಂಭವಾಗುತ್ತವೆ.
 

ಮೇಷ ರಾಶಿ(Aries)
ಮೇಷ ರಾಶಿಯವರು ತಮ್ಮ ಹಠಾತ್ ಮತ್ತು ಸ್ಪರ್ಧಾತ್ಮಕ ನಡವಳಿಕೆಯಿಂದಾಗಿ ಮೋಸ ಮಾಡುತ್ತಾರೆ. ಇವರು ನಿಮ್ಮನ್ನು ನೋಡಿದ ತಕ್ಷಣ ಪ್ರೀತಿ ಮಾಡಬಹುದು ಆದರೆ ವಿಷಯಗಳು ಒಂದು ಹಂತದ ನಂತರ ಕುಸಿಯುತ್ತವೆ. ಇವರು ರೆಸ್ಟ್ಲೆಸ್ ಮತ್ತು ನಿರಂತರ ಬದಲಾವಣೆಯ ಅಗತ್ಯವಿರುವವರು ಮತ್ತು ಇವರ ಪ್ರತಿಯೊಂದು ನಡೆಯನ್ನು ಪ್ರಶಂಸಿಸಬೇಕೆಂದು ಅವರು ಬಯಸುತ್ತಾರೆ. ನೀವು ಸ್ವಲ್ಪ ಟೈಮ್ ಬಿಟ್ಟುಕೊಟ್ಟರೆ ಅವರು ಸುಲಭವಾಗಿ ಬೇರೊಬ್ಬರಿಗೆ ಬೀಳುತ್ತಾರೆ.

ಮೀನ ರಾಶಿ(Pisces)
ಈ ಸೌಮ್ಯ ರಾಶಿಯನ್ನು ಹೆಚ್ಚಾಗಿ ತುಂಬಾ ನಿಷ್ಠಾವಂತ ಎಂದು ತಪ್ಪಾಗಿ ಭಾವಿಸಲಾಗುತ್ತೆ ಆದರೆ ಸತ್ಯವೆಂದರೆ ಇವರು ಮೋಸ ಮಾಡುವ ಸಾಧ್ಯತೆ ಹೆಚ್ಚು. ಇವರು ಪಲಾಯನವಾದಿಗಳು ಮತ್ತು ಈ ರಾಶಿಯನ್ನು ದ್ವಂದ್ವದ ಸಂಕೇತವಾಗಿ ಹೇಳಲಾಗುತ್ತೆ . 

ಯಾವಾಗಲೂ ಇವರು ತಮ್ಮ ಸಂಬಂಧದಲ್ಲಿ(Relationship) ಹೊಂದಿರುವ ವಿಷಯಗಳಿಗೆ ಸಂಪೂರ್ಣವಾಗಿ ವಿರುದ್ಧವಾದ ವಿಷಯಗಳನ್ನು ಹುಡುಕಲು ಒಲವು ತೋರುತ್ತಾರೆ. ಇವರು, ಹುಲ್ಲು ಯಾವಾಗಲೂ ಇನ್ನೊಂದು ಬದಿಯಲ್ಲಿ ಹಸಿರಾಗಿದೆ ಎಂಬ ಭ್ರಮೆಯಲ್ಲಿರುತ್ತಾರೆ ಮತ್ತು ಈ ಆಲೋಚನಾ ಪ್ರಕ್ರಿಯೆಯೇ ಅವರನ್ನು ದಾರಿತಪ್ಪುವಂತೆ ಮಾಡುತ್ತೆ.

ಈ ರಾಶಿಯವರು ನಿಮಗೆ ನಿಷ್ಠರಾಗಿರುತ್ತಾರೆ
ಇನ್ನು ನಿಷ್ಠಾವಂತ ರಾಶಿಯ ಬಗ್ಗೆ ಹೇಳುವುದಾದರೆ ಕರ್ಕಾಟಕ, ವೃಷಭ, ವೃಶ್ಚಿಕ, ಕನ್ಯಾ ಮತ್ತು ಸಿಂಹ ರಾಶಿಯವರು ನಿಷ್ಠಾವಂತ ಸಂಗಾತಿಗಳಾಗಿರುತ್ತಾರೆ(Partner) ಮತ್ತು ಇವರು ಮೋಸ ಮಾಡೋದನ್ನು ಸಹಿಸೋದಿಲ್ಲ.

Latest Videos

click me!