Holi 2023 Wishes: ಸರ್ವರಿಗೂ ಹೋಳಿ ಹಬ್ಬದ ಶುಭಾಶಯಗಳು..

First Published | Mar 8, 2023, 6:00 AM IST

ಬಣ್ಣಗಳ ಹಬ್ಬವಾದ ಹೋಳಿಯನ್ನು ಭಾರತದಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಆಚರಣೆಯು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತದೆ. ಈ ಹೋಳಿಯ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಫೇಸ್ಬುಕ್, ವಾಟ್ಸಾಪ್, ಮತ್ತಿತರೆ ಸಾಮಾಜಿಕ ಮಾಧ್ಯಮಗಳ ಮೂಲಕ ಶುಭಾಶಯ ಹೇಳಲು ಇಲ್ಲಿವೆ ವಿಶಸ್, ಮೆಸೇಜಸ್.

ಸಂತೋಷದ ಬಣ್ಣಗಳು ಜೀವನದ ಅತ್ಯಂತ ಸುಂದರವಾದ ಬಣ್ಣಗಳಾಗಿವೆ. ಅವು ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯಲಿ! ಹೋಳಿ ಹಬ್ಬದ ಶುಭಾಶಯಗಳು!

ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಈ ಹೋಳಿ ಹಬ್ಬದ ಶುಭಾಶಯಗಳು. ಸಂತೋಷ ಮತ್ತು ನಗುವಿನ ಬಣ್ಣಗಳಿಂದ ತುಂಬಿದ ಸಮಯ ನಿಮ್ಮದಾಗಲಿ.

Tap to resize

ಧಾರ್ಮಿಕ ದೀಪೋತ್ಸವದ ಆಶೀರ್ವಾದವು ನಿಮ್ಮ ಹೃದಯದ ಬಯಕೆಯನ್ನು ಪೂರೈಸಲಿ. ಬಣ್ಣಗಳ ಓಕುಳಿಯು ಬದುಕಿಗೆ ರಂಗು ತರಲಿ, ಹೋಳಿ ಹಬ್ಬದ ಶುಭಾಶಯಗಳು!

ಈ ಹೋಳಿಯು ನಿಮ್ಮ ಜೀವನದಲ್ಲಿ ಸಂತೋಷದ ಸುಂದರ ಬಣ್ಣಗಳನ್ನು ತರಲಿ ಮತ್ತು ನಿಮ್ಮ ಜೀವನದ ಮುಂದಿನ ಸಾಹಸಕ್ಕೆ ನಿಮ್ಮನ್ನು ಪ್ರೇರೇಪಿಸಲಿ. 

ದೇವರು ನಿಮಗೆ ಜೀವನದಲ್ಲಿ ಸಂತೋಷದ ಬಣ್ಣಗಳನ್ನು, ಸ್ನೇಹದ ಬಣ್ಣಗಳನ್ನು, ಸಮೃದ್ಧಿಯ ಬಣ್ಣಗಳನ್ನು ನೀಡಲಿ. ಹೋಳಿ ಹಬ್ಬದ ಶುಭಾಶಯಗಳು!

ಹೋಳಿ ಸಂದರ್ಭದಲ್ಲಿ ಪ್ರೀತಿ ಮತ್ತು ಸಂತೋಷದ ಬಣ್ಣಗಳನ್ನು ಹರಡಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೋಳಿ ಹಬ್ಬದ ಶುಭಾಶಯಗಳು.

ಜೀವನವು ಅತ್ಯಂತ ವರ್ಣರಂಜಿತ ಹಬ್ಬವಾಗಿದೆ. ನಿಮ್ಮ ಆತ್ಮೀಯರೊಂದಿಗೆ ಅದನ್ನು ಪೂರ್ಣವಾಗಿ ಆನಂದಿಸಿ. ಹೋಳಿ ಹಬ್ಬದಂತೆ ಬದುಕು ಕಲರ್‌ಫುಲ್ ಆಗಿರಲಿ.. ಹ್ಯಾಪಿ ಹೋಳಿ

ನಿಮ್ಮ ಎಲ್ಲಾ 365 ದಿನಗಳು ಹೋಳಿ ದಿನದಂತೆಯೇ ಪ್ರಕಾಶಮಾನವಾಗಿ ಮತ್ತು ವರ್ಣಮಯವಾಗಿರಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಈ ಹಬ್ಬವು ಎಲ್ಲಾ ನಕಾರಾತ್ಮಕತೆಯನ್ನು ಸುಟ್ಟುಹಾಕಲಿ ಮತ್ತು ನಿಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನು ತರಲಿ. ರೋಮಾಂಚಕ ಬಣ್ಣಗಳೊಂದಿಗೆ ಹಬ್ಬವನ್ನು ಆಚರಿಸಿ.

ಹೋಳಿಯ ಬಣ್ಣಗಳು ಶಾಂತಿ ಮತ್ತು ಸಂತೋಷದ ಸಂದೇಶವನ್ನು ಹರಡಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೋಳಿ ಹಬ್ಬದ ಶುಭಾಶಯಗಳು.

Latest Videos

click me!