ಜ್ಯೋತಿಷ್ಯದ ಪ್ರಕಾರ, ಜೀವನದಲ್ಲಿ ಅದೃಷ್ಟ(Luck) ಬದಲಾಗಲು ಹಲವಾರು ವಿಧಾನಗಳನ್ನು ತಿಳಿಸಿದೆ. ಆದರೆ ಪ್ರಾಣಿಗಳಿಗೆ ಹಸಿರು ತರಕಾರಿಗಳನ್ನು ತಿನ್ನಿಸೋದ್ರಿಂದ ಅದೃಷ್ಟ ನಿಮ್ಮದಾಗುತ್ತೆ ಅನ್ನೋದು ಗೊತ್ತಾ?. ಬನ್ನಿ ಯಾವ ಪ್ರಾಣಿಗಳಿಗೆ ಹಸಿ ಹಸಿರು ತರಕಾರಿಗಳನ್ನು ತಿನ್ನಿಸೋದ್ರಿಂದ ಅದೃಷ್ಟ ಬದಲಾಗುತ್ತೆ ಎಂದು ತಿಳಿಯೋಣ.
ಹಸು (Cow)
ಹಿಂದೂ ಧರ್ಮದಲ್ಲಿ ಗೋವಿಗೆ ತಾಯಿಯ ಸ್ಥಾನ ನೀಡಲಾಗಿದೆ. ಹಸುವನ್ನು ಎಲ್ಲಾ ದೇವರು ಮತ್ತು ದೇವತೆಗಳ ವಾಸಸ್ಥಾನವೆಂದು ನಂಬಲಾಗಿದೆ. ಹಾಗಾಗಿ, ಹಸಿ ಹಸಿರು ತರಕಾರಿಗಳನ್ನು ಹಸುವಿಗೆ ತಿನ್ನಿಸೋದ್ರಿಂದ, ಹಸುವಿನ ಮತ್ತು ಎಲ್ಲಾ ದೈವಿಕ ಶಕ್ತಿಗಳ ಆಶೀರ್ವಾದ ಪಡೆಯಬಹುದು.
ಮೇಕೆ (Goat)
ಮೇಕೆಯನ್ನು ಸಸ್ಯಾಹಾರಿ ಮತ್ತು ಶಾಂತ ಜೀವಿ . ಧರ್ಮಗ್ರಂಥಗಳ ಪ್ರಕಾರ, ಹಸಿ ಹಸಿರು ತರಕಾರಿಗಳನ್ನು ಪ್ರತಿದಿನ ಅಥವಾ ವಾರದಲ್ಲಿ ಎರಡು ದಿನ ಮೇಕೆಗೆ ನೀಡಿದರೆ, ಅದು ಮನೆ, ಕೆಲಸ ಮತ್ತು ವ್ಯವಹಾರದಲ್ಲಿ ಒತ್ತಡ (Stress) ಕಡಿಮೆ ಮಾಡುತ್ತೆ.
ಆನೆ(Elephant)
ಆನೆ ಶಕ್ತಿಯ ಸಂಕೇತ. ಇದಲ್ಲದೆ, ಆನೆಯನ್ನು ಶ್ರೀ ಗಣೇಶನ ರೂಪವೆಂದು ಸಹ ಪರಿಗಣಿಸಲಾಗುತ್ತೆ. ಆನೆಗೆ ಹಸಿ ಹಸಿರು ತರಕಾರಿ ತಿನ್ನಿಸೋದು ವ್ಯಕ್ತಿಗೆ ಅಪಾರ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಆಶೀರ್ವದಿಸುತ್ತೆ.
ಮೊಲ (Rabbit)
ಮೊಲವು ಸ್ವಭಾವದಿಂದ ಚಂಚಲ ಆದರೆ ಬುದ್ಧಿವಂತಿಕೆಯಲ್ಲಿ ತೀಕ್ಷ್ಣವಾಗಿರುತ್ತೆ. ಮೊಲವನ್ನು ಧನಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತೆ. ಪ್ರತಿದಿನ ಮೊಲಕ್ಕೆ ಹಸಿ ತರಕಾರಿಗಳನ್ನು ತಿನ್ನಿಸೋದು ಜೀವನದಲ್ಲಿ ಸಕಾರಾತ್ಮಕತೆಯನ್ನು ಹರಡುತ್ತೆ ಎಂದು ಜನರಲ್ಲಿ ನಂಬಿಕೆ ಇದೆ.
ಕುದುರೆ (Horse)
ಕುದುರೆಯನ್ನು ತನ್ನ ವೇಗ, ಎಂದಿಗೂ ದಣಿಯದ ಮನೋಭಾವ, ಮತ್ತು ಎಂದಿಗೂ ಗೆಲುವನ್ನು ಬಿಟ್ಟು ಕೊಡದ ಪ್ರಾಣಿ ಎಂದು ಹೇಳಲಾಗುತ್ತೆ. ಕುದುರೆ ಪ್ರಗತಿಯನ್ನು ಸೂಚಿಸುತ್ತೆ. ಕುದುರೆಗೆ ಹಸಿ ತರಕಾರಿಗಳನ್ನು ತಿನ್ನಿಸುವ ಮೂಲಕ, ವ್ಯಕ್ತಿ ಜೀವನದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತಾನೆ.
ಎಮ್ಮೆ (Buffalo)
ಎಮ್ಮೆ ಯಮರಾಜನ ವಾಹನ. ಯಮರಾಜನ ಕಣ್ಣಿನಿಂದ ತಪ್ಪಿಸಿಕೊಳ್ಳಲು ದಕ್ಷಿಣದ ಅನೇಕ ಸ್ಥಳಗಳಲ್ಲಿ ಎಮ್ಮೆಗಳನ್ನು ಪೂಜಿಸಲಾಗುತ್ತೆ. ಕಚ್ಚಾ ಹಸಿರು ತರಕಾರಿಗಳನ್ನು ಎಮ್ಮೆಗೆ ತಿನ್ನಿಸುವ ಮೂಲಕ, ಅಕಾಲಿಕ ಸಾವನ್ನು ತಪ್ಪಿಸಬಹುದು ಎಂದು ನಂಬಲಾಗಿದೆ.