ಚಾಣಕ್ಯ ನೀತಿ: ಸಾಕಷ್ಟು ಸಂಪಾದಿಸಿದ್ರೂ ಈ ಐವರ ಜೇಬು ಯಾವಾಗ್ಲೂ ಖಾಲಿ ಖಾಲಿ!

First Published | Jun 28, 2024, 3:24 PM IST

ಆಚಾರ್ಯ ಚಾಣಕ್ಯನು ಚಾಣಕ್ಯ ನೀತಿಯಲ್ಲಿ ಕೆಲವು ಜನರ ಬಗ್ಗೆ ಮಾಹಿತಿ ನೀಡಿದ್ದಾರೆ ಆ ಜನ ತುಂಬಾ ಹಣ ಗಳಿಸ್ತಾರೆ, ಆದರೆ ಅವರ ಕೈಯಲ್ಲಿ ಹಣವೇ ಉಳಿಯೋದಿಲ್ಲ. ಯಾಕಂದ್ರೆ ಅವರ ಈ ಅಭ್ಯಾಸಗಳೇ ಅವರನ್ನು ಬಡವರನ್ನಾಗಿಸುತ್ತೆ. ಅಂತಹ ಜನರು ಯಾರು ಅನ್ನೋದನ್ನು ತಿಳಿಯೋಣ.
 

ಚಾಣಕ್ಯ ನೀತಿಯಲ್ಲಿ (Chanakya Niti), ಆಚಾರ್ಯ ಚಾಣಕ್ಯ ಕೆಲವು ಜನರು ಸಂಪತ್ತನ್ನು ಗಳಿಸುವ ವಿಷಯದಲ್ಲಿ ಬಹಳ ಮುಂದಿದ್ದರೂ ಬಡತನದಲ್ಲಿ ಜೀವನ ಸಾಗಿಸ್ತಾರೆ. ಇದರರ್ಥ ಅವರ ಕೈಯಲ್ಲಿ ಹಣವೇ ಇಲ್ಲ ಅಂತಲ್ಲ. ಹಣ ನಿಲ್ಲೋದಿಲ್ಲ ಅಷ್ಟೇ.  ಗಳಿಕೆಯ ವಿಷಯದಲ್ಲಿ, ಈ ಜನ ತುಂಬಾ ಬುದ್ಧಿವಂತರಾಗಿರ್ತಾರೆ, ಆದರೆ, ಉಳಿತಾಯದ ವಿಷಯಕ್ಕೆ ಬಂದಾಗ, ಈ ಜನರು ಖಾಲಿ ಕೈಯಲ್ಲಿ ಉಳಿಯುತ್ತಾರೆ. ಬನ್ನಿ, ಅಂತಹ ಜನರು ಯಾರು ಅನ್ನೊದನ್ನು ತಿಳಿಯೋಣ. 
 

ಶೋ ಆಫ್ ಮಾಡುವ ಜನರು
ಈ ಜನರು ತಾವು ಉನ್ನತ ಸ್ಥಾನದಲ್ಲಿದ್ದೇವೆ ಅನ್ನೋದನ್ನು ತೋರಿಸಲು ಕೆಟ್ಟ ದಾರಿಯಲ್ಲಿ ಹಣ ಗಳಿಸ್ತಾರೆ, ಆದರೆ ಆಚಾರ್ಯ ಚಾಣಕ್ಯನ (Acharya Chanakya) ಪ್ರಕಾರ, ಅಂತಹ ಜನರು ಒಳಗಿನಿಂದ ಸಂಪೂರ್ಣವಾಗಿ ಟೊಳ್ಳಾಗಿರುತ್ತಾರೆ. ಅವರು ಹೊರಗಿನವರ ಮೇಲೆ ಪ್ರಭಾವ ಬೀರಲು ಎಷ್ಟು ಒಗ್ಗಿಕೊಳ್ಳುತ್ತಾರೆ ಎಂದರೆ ಶೋ ಆಫ್ ಮಾಡೋದಕ್ಕಾಗಿ ಎಷ್ಟು ಬೇಕಾದ್ರೂ ಹಣ ಖರ್ಚು ಮಾಡಲು ಪ್ರಾರಂಭಿಸುತ್ತಾರೆ. ಇತರ ಜನರು ಸಹ ಈ ಅಭ್ಯಾಸದ ಹೆಚ್ಚಿನ ಲಾಭ ಪಡೆಯುತ್ತಾರೆ. ಲೆಕ್ಕವಿಲ್ಲದಷ್ಟು ಹಣ ಖರ್ಚು ಮಾಡೋದ್ರಿಂದ, ಈ ಜನರ ಜೇಬು ಖಾಲಿಯಾಗಿರುತ್ತೆ. 

Latest Videos


ಎಲ್ಲರನ್ನೂ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಜನ
ತಮ್ಮನ್ನು ತಾವು ಪವರ್ ಫುಲ್ ಎಂದು ತೋರಿಸಲು ಜನರ ಗ್ರೂಪ್ ಮಾಡಿ, ತಾನೇ ಲೀಡರ್ ನಂತೆ ವರ್ತಿಸುವ ಜನರ ಕೈಯಲ್ಲೂ ಹಣ ನಿಲ್ಲೋದಿಲ್ಲ.ಆಡುಮಾತಿನಲ್ಲಿ ಹೇಳುವುದಾದರೆ, ಅಂತಹ ಜನರು ಇತರ ಜನರಿಗೆ ಆಹಾರ ನೀಡುವ ಮೂಲಕ ಅಥವಾ ಅವರನ್ನು ತಮ್ಮ ಕಡೆ ಸೆಳೆಯಲು ಹಣ ಖರ್ಚು ಮಾಡುತ್ತಾರೆ.
 

ಎಲ್ಲರನ್ನೂ ತಮ್ಮ ಹಿಡಿತದಲ್ಲಿಡಲು ಸರಳ ಕಾರಣವೆಂದರೆ ಅಂತಹ ಜನರಿಗೆ ಆತ್ಮವಿಶ್ವಾಸದ ಕೊರತೆಯಿದೆ ಮತ್ತು ಏಕಾಂಗಿಯಾಗಿ ನಿಲ್ಲಲು ಧೈರ್ಯ ಇರೋದಿಲ್ಲ. ಈ ಕೀಳರಿಮೆಯಿಂದಾಗಿ, ಅಂತಹ ಜನರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವ್ಯರ್ಥ (more expenses) ವೆಚ್ಚ ಮಾಡ್ತಾರೆ.

ಪ್ರತಿಯೊಂದನ್ನು ಲೆಕ್ಕ ಹಾಕೋ ಜನರು 
ಈ ಜನರು ತಮ್ಮ ಜೀವನದಲ್ಲಿ ಎಲ್ಲವನ್ನೂ ಹಣದಿಂದಲೇ ತೂಗುತ್ತಾರೆ.  ತಮ್ಮನ್ನು ತಾವು ಸಂತೋಷವಾಗಿರಿಸಲು, ಈ ಜನರು ಆರಾಮವನ್ನು ನೀಡುವ ಎಲ್ಲವನ್ನೂ ಖರೀದಿಸುತ್ತಾರೆ. ಜೊತೆಗೆ ಹಣದಿಂದ ಏನು ಬೇಕಾದರೂ ಖರೀದಿಸಬಹುದು, ಜನರನ್ನೂ ಖರೀದಿಸಬಹುದು ಎನ್ನುವ ಯೋಚನೆ ಇವರಿಗಿರುತ್ತೆ. ಅವರ ಆಲೋಚನೆ ಅವರ ಮೇಲೆ ಪ್ರಾಬಲ್ಯ ಸಾಧಿಸುತ್ತದೆ ಮತ್ತು ಅವರು ಎಲ್ಲವನ್ನೂ ಕಳೆದುಕೊಳ್ಳುತ್ತಾರೆ.

ವ್ಯಸನ ಅಥವಾ ಕೆಟ್ಟ ಅಭ್ಯಾಸಗಳಿಗೆ ದಾಸರಾಗಿರೋರು
ಮಾದಕ ವ್ಯಸನಿಗಳು ತಪ್ಪು ವಿಧಾನಗಳಿಂದ ಸಾಕಷ್ಟು ಹಣವನ್ನು ಗಳಿಸುತ್ತಾರೆ, ಆದರೆ ಚಾಣಕ್ಯನ ಪ್ರಕಾರ, ಮಾದಕ ವ್ಯಸನ ವ್ಯಕ್ತಿಯ ಆತ್ಮಸಾಕ್ಷಿಯನ್ನು ನಾಶಪಡಿಸುತ್ತದೆ, ಆದ್ದರಿಂದ ಮಾದಕ ವ್ಯಸನದಲ್ಲಿ ಮುಳುಗಿರುವ ವ್ಯಕ್ತಿಯು ಎಂದಿಗೂ ಯೋಚನೆ ಮಾಡಿ ಹಣ ಖರ್ಚು ಮಾಡೋದಿಲ್ಲ. ಮಾದಕವಸ್ತುಗಳಿಗೆ ವ್ಯಸನಿಯಾಗಿರುವ ವ್ಯಕ್ತಿ ಮಾದಕವಸ್ತುಗಳು ಮತ್ತು ಇತರ ಕೆಟ್ಟ ಅಭ್ಯಾಸಗಳ ನೆರವೇರಿಕೆಯ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾನೆ. ತಮ್ಮ ಸ್ವಾರ್ಥದಲ್ಲಿ ಮುಳುಗಿ, ಅಂತಹ ಜನರು ಕೊನೆಗೆ ಸಾಲ ಮತ್ತು ಬಡತನದಲ್ಲಿ ಬದುಕಲು ಪ್ರಾರಂಭಿಸುತ್ತಾರೆ. ಇವರ ಕೆಟ್ಟ ವ್ಯಸನದಿಂದಾಗಿ ಮನೆ ಮಾರುವ ಪರಿಸ್ಥಿತಿಯೂ ಬರುತ್ತೆ. 

ದುರಾಸೆಯ ಸ್ವಭಾಸ ಹೊಂದಿರುವ ಜನರು
ದುರಾಸೆಯ ಸ್ವಭಾವ (greedy people) ಹೊಂದಿರೋ ಜನರು ಇನ್ನೂ ಸ್ವಲ್ಪ ಜಾಸ್ತಿ ಇದ್ರೆ ಚೆನ್ನಾಗಿರುತ್ತೆ ಎನ್ನುವ ಸ್ವಭಾಸ ಹೊಂದಿರ್ತಾರೆ. ಅವರ ಮನಸ್ಸು ಎಂದಿಗೂ ಸಂಪತ್ತಿನಿಂದ ತೃಪ್ತವಾಗೋದಿಲ್ಲ. ದುರಾಸೆಯ ಜನರು ತಮ್ಮ ಬೊಕ್ಕಸವನ್ನು ತುಂಬಲು ಯಾವುದೇ ಮಟ್ಟಕ್ಕೆ ಹೋಗಬಹುದು, ಆದರೆ ಅವರ ಈ ಅಭ್ಯಾಸವು ಕೆಲವೊಮ್ಮೆ ಅವರನ್ನು ಮುಳುಗಿಸುತ್ತದೆ. ದುರಾಸೆಯಿಂದಾಗಿ, ಅವರ ತಂತ್ರಗಳು ಅವರಿಗೆ ತಿರುಗಿ ಬೀಳುತ್ತೆ, ಇದರಿಂದ ಈ ಜನರು ಎಲ್ಲವನ್ನೂ ಕಳೆದುಕೊಳ್ಳುತ್ತಾರೆ.

click me!