ನೀವು ಶಿವನ ಪರಮಭಕ್ತರೇ ಆಗಿರಬಹುದು…. ಆದ್ರೆ ಶಿವಲಿಂಗ ಹುಟ್ಟಿಕೊಂಡದ್ದು ಹೇಗೆ ಅನ್ನೋದು ಗೊತ್ತಾ?

First Published Jun 29, 2024, 3:00 PM IST

ಶಿವಲಿಂಗವನ್ನು ಮಹಾದೇವನ ರೂಪವೆಂದು ಪರಿಗಣಿಸಲಾಗಿದೆ. ಈ ಜಗತ್ತಿನಲ್ಲಿ ಮೊತ್ತ ಮೊದಲು ಹುಟ್ಟಿಕೊಂಡಿದ್ದೇ ಶಿವಲಿಂಗ ಎಂದು ಹೇಳಲಾಗುತ್ತದೆ. ಶಿವಲಿಂಗವು ಆತ್ಮ ಮತ್ತು ಜ್ಯೋತಿಯನ್ನು ಪ್ರತಿನಿಧಿಸುತ್ತೆ. ಬನ್ನಿ, ಭಾಗವತ ಪುರಾಣದ ಪ್ರಕಾರ ಶಿವಲಿಂಗವು ಹೇಗೆ ಹುಟ್ಟಿಕೊಂಡಿತು ಅನ್ನೋದನ್ನು ತಿಳಿಯೋಣ.

ಈ ಭೂಮಿಯಲ್ಲಿ ಅದೆಷ್ಟು ಜನ ಶಿವಭಕ್ತರಿದ್ದಾರೋ ಲೆಕ್ಕವಿಲ್ಲ. ನೀವು ಶಿವಭಕ್ತರೇ (Devotee of Lord Shiva) ಆಗಿರಬಹುದು. ಶಿವನನ್ನು ಲಿಂಗ ರೂಪದಲ್ಲಿ ಪೂಜಿಸೋದು ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತಹ ಪದ್ಧತಿ. ಶಿವಲಿಂಗ ಎಂದರೆ ಆದಿ -ಅಂತ್ಯ ಇಲ್ಲದವರು. ಆತ್ಮ ಮತ್ತು ಜ್ಯೋತಿಯನ್ನು ಈ ಶಿವಲಿಂಗ ಪ್ರತಿನಿಧಿಸುತ್ತೆ. ನೀವು ಶಿವನ ಪರಮ ಭಕ್ತರಾಗಿದ್ರೆ ಶಿವಲಿಂಗ ಹುಟ್ಟಿಕೊಂದಿದ್ದು, ಹೇಗೆ ಅನ್ನೋ ವಿಷ್ಯ ಗೊತ್ತಾ? ಇಲ್ಲಾ ಅಂದಾದ್ರೆ ಇವತ್ತೆ ಶಿವನ ಕುರಿತಾತ ಅತ್ಯಂತ ಮಹತ್ವದ ಮಾಹಿತಿಯನ್ನು ತಿಳಿಯಿರಿ. 
 

ಶಿವನನ್ನು ಅನೇಕ ಹೆಸರುಗಳಿಂದ ಕರೆಯಲಾಗುತ್ತೆ. ಶಿವ, ಶಂಕರ, ಭೋಲೇನಾಥ್, ಮಹೇಶ್ವರ, ಮಂಜುನಾಥ, ಅರ್ಧನಾರೀಶ್ವರ ಇತ್ಯಾದಿ ಇತ್ಯಾದಿ.  ಈ ಜಗತ್ತಿನಲ್ಲಿ ಏನೂ ಇಲ್ಲದಿದ್ದ ಆ ಸಮಯದಲ್ಲಿ ಮಹಾದೇವನು ಶಿವಲಿಂಗದ (Shivlinga) ರೂಪದಲ್ಲಿ ಅಸ್ತಿತ್ವದಲ್ಲಿದ್ದನು ಎನ್ನುವ ನಂಬಿಕೆಯೂ ಇದೆ. ಹಾಗಿದ್ರೆ ಶಿವಲಿಂಗವು ಶಿವನ ರೂಪದಲ್ಲಿ ಹೇಗೆ ಹುಟ್ಟಿಕೊಂಡಿತು ಎಂಬ ಪ್ರಶ್ನೆ ಮನಸ್ಸಿನಲ್ಲಿ ಬರುತ್ತದೆ ಅಲ್ವಾ? ಬನ್ನಿ ಈ ಬಗ್ಗೆ ನಮ್ಮ ಪುರಾಣದಲ್ಲಿ ಏನು ಹೇಳಿದೆ ತಿಳಿಯೋಣ. 
 

ಶಿವಲಿಂಗದ ಮೂಲದ ಬಗ್ಗೆ ಅನೇಕ ಪುರಾಣಗಳಲ್ಲಿ ವಿಭಿನ್ನ ಕಥೆಗಳು ಕಂಡುಬರುತ್ತವೆ.  ಜನರು ಒಂದೊಂದು ಕಥೆಯನ್ನು ನಂಬುತ್ತಾರೆ. ಕೆಲವರು ಅದನ್ನ ಸುಳ್ಳು ಅಂತಾನೂ ಹೇಳ್ತಾರೆ. ಇದೆಲ್ಲದರ ನಡುವೆ ಇವತ್ತು ನಾವು ಭಗವತ್ ಪುರಾಣದಲ್ಲಿ ಶಿವಲಿಂಗದ ಉಗಮಕ್ಕೆ ಸಂಬಂಧಿಸಿದ ಕಥೆಯ ಬಗ್ಗೆ ಏನು ಹೇಳಿದೆ ಅನ್ನೋದನ್ನ ತಿಳಿಸ್ತೀವಿ. 
 

ಶಿವಲಿಂಗದ ಉಗಮದ ದಂತಕಥೆ (Origin of Shivling)
ಭಾಗವತ ಪುರಾಣದ (Bhagavat purana) ಪ್ರಕಾರ, ಸೃಷ್ಟಿಯನ್ನು ರಚಿಸಿದಾಗ, ವಿಷ್ಣು ಮತ್ತು ಬ್ರಹ್ಮನ ನಡುವೆ ಇಬ್ಬರಲ್ಲಿ ಯಾರು ಉತ್ತಮರು ಎನ್ನುವ ಚರ್ಚೆ ಹುಟ್ಟಿಕೊಂಡಿತಂತೆ. ತಮ್ಮನ್ನು ತಾವು ಅತ್ಯಂತ ಶಕ್ತಿಶಾಲಿ ಎಂದು ಸಾಬೀತುಪಡಿಸುವ ಸ್ಪರ್ಧೆಯಲ್ಲಿ, ಇಬ್ಬರೂ ವಾದಿಸಲು ಪ್ರಾರಂಭಿಸಿದರು. ಆಗ ಆಕಾಶದಿಂದ ಮಹಾದೇವನನ್ನು ಪ್ರತಿನಿಧಿಸುವ ಬೃಹತ್ ಶಿವಲಿಂಗ ಕಾಣಿಸಿಕೊಂಡಿತು. ಈ ದೈವಿಕ ಹೊಳೆಯುವ ಕಲ್ಲಿನ ಅಂತ್ಯವನ್ನು ಕಂಡುಕೊಳ್ಳುವವರನ್ನು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ ಎಂಬ ಅಶರೀರವಾಣಿ ಆಕಾಶದಿಂದ ಕೇಳಿ ಬಂತು. 

ಭಗವಾನ್ ವಿಷ್ಣು ಮತ್ತು ಬ್ರಹ್ಮ (Vishnu and Bramha) ಇಬ್ಬರೂ ಕಲ್ಲಿನ ಅಂತ್ಯವನ್ನು ಕಂಡುಹಿಡಿಯಲು ಭೂಮಿಯ ಪ್ರತಿಯೊಂದು ಬದಿಗೆ ಹೋದರಂತೆ, ಆದರೆ ಈ ದೈವಿಕ ಕಲ್ಲಿನ ಅಂತ್ಯವನ್ನು ಕಂಡುಹಿಡಿಯಲು ಅವರಿಗೆ ಸಾಧ್ಯವಾಗಲಿಲ್ಲ. ಸಾಕಷ್ಟು ಕಠಿಣ ಪರಿಶ್ರಮದ ನಂತರ, ಅವರಿಬ್ಬರಿಗೂ ಅಂತ್ಯ ಸಿಗದಿದ್ದಾಗ, ವಿಷ್ಣು ಸೋಲನ್ನು ಒಪ್ಪಿಕೊಂಡರು ಆದರೆ ಬ್ರಹ್ಮ ದೇವ ಸುಳ್ಳು ಹೇಳೋ ಮೂಲಕ ತಾನೇ ಶ್ರೇಷ್ಠ ಎಂದು ವಾದಿಸಿದರು. 

ಬ್ರಹ್ಮ ದೇವನು ಸ್ಪರ್ಧೆಯಲ್ಲಿ ಸೋತ ವಿಷ್ಣುವಿಗೆ ತಾನು ಕಲ್ಲಿನ ಅಂತ್ಯವನ್ನು ಕಂಡು ಹಿಡಿದಿದ್ದೇನೆ ಎನ್ನೋದಾಗಿ ಸುಳ್ಳು ಹೇಳಿದರು. ಆದರೆ ಕೊನೆಗೆ ಬ್ರಹ್ಮ ದೇವ ಹೇಳಿದ್ದು ಸುಳ್ಳು ಅನ್ನೋದು ಬಹಿರಂಗವಾಯ್ತು. ಇದರ ನಂತರ, ಮಹಾದೇವನು ಪ್ರತ್ಯಕ್ಷನಾಗಿ ಈ ದೈವಿಕ ಕಲ್ಲಿನ ಶಿವಲಿಂಗವು ನನ್ನ ಒಂದು ರೂಪವಾಗಿದೆ. ನಾನು ಶಿವಲಿಂಗ ಮತ್ತು ನನಗೆ ಅಂತ್ಯವೂ ಇಲ್ಲ, ಆರಂಭವೂ ಇಲ್ಲ ಎಂದು ಹೇಳಿದನಂತೆ.
 

ಶಿವಲಿಂಗದ ಅರ್ಥವೇನು?
ಶಿವಲಿಂಗವನ್ನು ದೈವಿಕ ಬೆಳಕು ಎಂದು ಪರಿಗಣಿಸಲಾಗುತ್ತದೆ. ಶಿವಲಿಂಗವು ಮನಸ್ಸು, ಜೀವಿ, ಬುದ್ಧಿ, ಆಕಾಶ, ಗಾಳಿ, ಬೆಂಕಿ, ನೀರು ಮತ್ತು ಭೂಮಿಯಿಂದ ಮಾಡಲ್ಪಟ್ಟಿದೆ ಎನ್ನಲಾಗುವುದು. ಶಿವಲಿಂಗವನ್ನು ಇಡೀ ಬ್ರಹ್ಮಾಂಡದ (universe) ಸಂಕೇತವೆಂದು ಪರಿಗಣಿಸಲಾಗಿದೆ.  ಹಾಗಾಗಿ ಈ ಭೂಮಿ ಮೇಲೆ ಅಥವಾ ಜಗತ್ತಿನಲ್ಲಿ ಮೊದಲಿಗೆ ಹುಟ್ಟಿಕೊಂಡಿದ್ದೇ ಶಿವಲಿಂಗ ಎನ್ನುವ ನಂಬಿಕೆಯೂ ಇದೆ. ಶಿವಲಿಂಗವನ್ನು ಭಕ್ತಿಯಿಂದ ಪೂಜಿಸಿದ್ರೆ ಇಷ್ಟಾರ್ಥಗಳು ಬೇಗನೆ ಈಡೇರುತ್ತವೆ.

Latest Videos

click me!