ಸನಾತನ ಧರ್ಮದಲ್ಲಿ, ಎಲ್ಲವನ್ನೂ ಸರಿಯಾದ ರೀತಿಯಲ್ಲಿ ಮಾಡುವ ನಿಯಮ ಇದೆ. ಅಂತೆಯೇ, ಆಹಾರಕ್ಕೆ(Food) ಸಂಬಂಧಿಸಿದ ಕೆಲವು ನಿಯಮಗಳನ್ನು ಶಾಸ್ತ್ರ ವಚನಗಳಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಅನುಸರಿಸುವ ಮೂಲಕ ಮನೆಯಲ್ಲಿ ಎಂದಿಗೂ ಆಹಾರದ ಕೊರತೆ ಉಂಟಾಗೋದಿಲ್ಲ. ಅಶುಭವೆಂದು ಪರಿಗಣಿಸಲಾದ ಆಹಾರಕ್ಕೆ ಸಂಬಂಧಿಸಿದ ಕೆಲವು ಕಾರ್ಯ ತಿಳಿದುಕೊಳ್ಳೋಣ.
ತಟ್ಟೆಯಲ್ಲಿ ಕೈತೊಳೆಯೋದು(Washing hand)
ಆಹಾರದ ಪ್ರತಿಯೊಂದೂ ಧಾನ್ಯವೂ ಗೌರವಾನ್ವಿತ, ಆದರೆ ಕೆಲವು ಜನರು ಊಟದ ನಂತರ ತಟ್ಟೆಯಲ್ಲಿ ತಮ್ಮ ಕೈ ತೊಳೆಯುವ ಅಭ್ಯಾಸ ಹೊಂದಿರುತ್ತಾರೆ. ವಾಸ್ತುವಿನ ಪ್ರಕಾರ, ಇದು ಅಶುಭ. ತಟ್ಟೆಯಲ್ಲಿ ಎಂಜಲು ಕೈ ತೊಳೆಯೋದರಿಂದ ತಟ್ಟೆಯಲ್ಲಿ ಉಳಿದ ಅನ್ನದ ಅಗಳಿಗೆ ಅವಮಾನಿಸಿದ ಹಾಗಾಗುತ್ತೆ ಎಂದು ನಂಬಲಾಗಿದೆ. ಹೀಗೆ ಮಾಡೋದರಿಂದ ಬಡತನ ಬರುತ್ತೆ.
ಅನ್ನವನ್ನು ತಟ್ಟೆಯಲ್ಲೇ ಬಿಡೋದು
ಆಹಾರದ(Food) ಮಹತ್ವ ಅರ್ಥಮಾಡಿಕೊಳ್ಳದವನು ಪಾಪದ ಭಾಗವಾಗುತ್ತಾನೆ. ತಟ್ಟೆಯಲ್ಲಿ ಆಹಾರ ನೀವು ಎಷ್ಟು ತಿನ್ನಬಹುದೋ ಅಷ್ಟೇ ತೆಗೆದುಕೊಳ್ಳಬೇಕು. ಅದಕ್ಕಿಂತ ಜಾಸ್ತಿ ತೆಗೆದುಕೊಂಡು, ಅರ್ಧ ಬಿಟ್ಟು ಅದಕ್ಕೆ ಅವಮಾನಿಸಬೇಡಿ.
ಆಹಾರವನ್ನು ತಪ್ಪಾಗಿ ಬಿಡೋದರಿಂದ ಮನೆಯ ಮೇಲೆ ದೇವರ ಆಶೀರ್ವಾದ ಇರೋದಿಲ್ಲ ಎಂದು ನಂಬಲಾಗಿದೆ, ಏಕೆಂದರೆ ಆಹಾರ ಬಿಡೋದು ಆಹಾರವನ್ನು ವ್ಯರ್ಥ (Food waste)ಮಾಡಲು ಕಾರಣವಾಗುತ್ತೆ, ಇದು ತಾಯಿ ಅನ್ನಪೂರ್ಣ ಕೋಪಗೊಳ್ಳುವಂತೆ ಮಾಡುತ್ತೆ .
ಪ್ಲೇಟ್ ನಲ್ಲಿ 3 ರೊಟ್ಟಿ(Roti)
ಧರ್ಮಗ್ರಂಥಗಳ ಪ್ರಕಾರ, ಆಹಾರ ಬಡಿಸುವಾಗ ತಟ್ಟೆಯಲ್ಲಿ ಮೂರು ರೊಟ್ಟಿಗಳನ್ನು ಒಟ್ಟಿಗೆ ಇಡೋದು ಒಂದು ಕೆಟ್ಟ ಶಕುನವಾಗಿದೆ, ಇದರ ಹಿಂದಿನ ಮೊದಲ ನಂಬಿಕೆಯೆಂದರೆ, ಹಿಂದೂಗಳಲ್ಲಿ ಮೂರು ಸಂಖ್ಯೆಯನ್ನು ಮಂಗಳಕರವೆಂದು ಪರಿಗಣಿಸಲಾಗೋದಿಲ್ಲ.
ಎರಡನೇ ನಂಬಿಕೆಯೆಂದರೆ, 3 ರೊಟ್ಟಿಗಳನ್ನು ಹೊಂದಿರುವ ತಟ್ಟೆಯನ್ನು ಸತ್ತವರಿಗೆ ಸಮರ್ಪಿಸಲಾಗುತ್ತೆ. ಸತ್ತ ವ್ಯಕ್ತಿಯ ಹೆಸರಿನ ತಟ್ಟೆಯಲ್ಲಿ 3 ರೊಟ್ಟಿ ಇರಿಸಲಾಗುತ್ತೆ . ಅವರ ತ್ರಯೋದಶಿ ವಿಧಿವಿಧಾನಗಳಿಗೆ ಮೊದಲು, ಸತ್ತವರಿಗೆ ಭೋಗ್ ಅರ್ಪಿಸಲು 3 ರೊಟ್ಟಿ ಇಡಲಾಗುತ್ತೆ.