ಮದುವೆಯ ನಂತರ ವಧು ತನ್ನ ತವರು ಮನೆಯಿಂದ ಗಂಡನ ಮನೆಗೆ ಹೋಗುವಾಗ ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ಈ ವಸ್ತುಗಳನ್ನು ಕೊಂಡೊಯ್ಯುವುದರಿಂದ ಎರಡೂ ಕುಟುಂಬಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ನಂಬಿಕೆ ಇದೆ.
ಮದುವೆ ಅನ್ನೋದು ಎರಡು ಕುಟುಂಬಗಳನ್ನು ಒಂದುಗೂಡಿಸುವ ಒಂದು ಪ್ರಮುಖ ಸಂಪ್ರದಾಯ. ವಧು ತನ್ನ ತವರು ಮನೆಯ ಬಂಧನವನ್ನು ಮೀರಿ, ಗಂಡನ ಮನೆಯಲ್ಲಿ ಜೀವನವನ್ನು ಪ್ರಾರಂಭಿಸುವಾಗ ಕೆಲವು ಸಂಪ್ರದಾಯ ಮತ್ತು ನಂಬಿಕೆಗಳನ್ನು ಪಾಲಿಸಬೇಕು. ಈ ನಂಬಿಕೆಗಳು ಹೆಚ್ಚಾಗಿ ಎರಡೂ ಕುಟುಂಬಗಳ ನಡುವೆ ಯಾವುದೇ ರೀತಿಯ ಮನಸ್ತಾಪ ಅಥವಾ ದುರದೃಷ್ಟ ಬಾರದಿರಲಿ ಎಂಬ ಸದುದ್ದೇಶದಿಂದ ಪಾಲಿಸಲಾಗುತ್ತವೆ.
ಆಧ್ಯಾತ್ಮಿಕ ಶಾಸ್ತ್ರಗಳ ಪ್ರಕಾರ, ಮದುವೆಯಾದ ಮಹಿಳೆಯರು ತವರು ಮನೆಯಿಂದ ಗಂಡನ ಮನೆಗೆ ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು ಎಂದು ಹೇಳಲಾಗುತ್ತದೆ.
28
1.ಉಪ್ಪು ಮತ್ತು ಹುಣಸೆಹಣ್ಣು
ಉಪ್ಪು ಮತ್ತು ಹುಣಸೆಹಣ್ಣನ್ನು ತವರಿನಿಂದ ತೆಗೆದುಕೊಂಡು ಹೋಗುವುದು ತವರು ಮನೆಯ ಲಕ್ಷ್ಮಿ ಕಟಾಕ್ಷವನ್ನು ಕಡಿಮೆ ಮಾಡುತ್ತದೆ. ಇದು ಎರಡೂ ಕುಟುಂಬಗಳಿಗೆ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ಆದ್ದರಿಂದ ಈ ಎರಡು ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು.
38
2.ಚೂಪಾದ ವಸ್ತುಗಳು
ಕತ್ತರಿ, ಚಾಕು, ಸೂಜಿಯಂತಹ ಚೂಪಾದ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಎರಡು ಕುಟುಂಬಗಳ ನಡುವಿನ ಸಂಬಂಧವನ್ನು ಹಾಳುಮಾಡುತ್ತದೆ. ಇದು ಜಗಳ, ಮನಸ್ತಾಪಕ್ಕೆ ಕಾರಣವಾಗಬಹುದು.
ತವರು ಮನೆಯಲ್ಲಿ ಪೂಜಿಸಿದ ಕುಲದೇವರ ಫೋಟೋ, ವಿಗ್ರಹ, ದೀಪಗಳನ್ನು ತೆಗೆದುಕೊಂಡು ಹೋಗಬಾರದು. ಇದು ತವರು ಮನೆಯ ಲಕ್ಷ್ಮಿ ಕಟಾಕ್ಷವನ್ನು ಕಡಿಮೆ ಮಾಡುತ್ತದೆ. ಬಳಸದ ಹೊಸ ಪೂಜಾ ಸಾಮಗ್ರಿಗಳನ್ನು ಕೊಂಡೊಯ್ಯಬಹುದು.
58
4. ಅಕ್ಕಿ ಅಳೆಯುವ ಪಡಿ, ಪೊರಕೆ, ಮೊರ
ಪೊರಕೆ, ಮೊರ, ಧಾನ್ಯ ಅಳೆಯುವ ಪಡಿ ಇವುಗಳನ್ನು ತವರಿನಿಂದ ತೆಗೆದುಕೊಂಡು ಹೋಗಬಾರದು. ಇವು ಮಹಾಲಕ್ಷ್ಮಿಗೆ ಸಂಬಂಧಿಸಿದ್ದು, ತೆಗೆದುಕೊಂಡು ಹೋದರೆ ತವರು ಮನೆಗೆ ಆರ್ಥಿಕ ಸಂಕಷ್ಟ ಉಂಟಾಗಬಹುದು.
68
5. ಕಹಿ ರುಚಿಯ ತರಕಾರಿಗಳು
ಹಾಗಲಕಾಯಿಯಂತಹ ಕಹಿ ತರಕಾರಿಗಳನ್ನು ತವರಿನಿಂದ ಗಂಡನ ಮನೆಗೆ ತೆಗೆದುಕೊಂಡು ಹೋಗಬಾರದು. ಇದು ಎರಡು ಕುಟುಂಬಗಳ ನಡುವೆ ಮನಸ್ತಾಪ, ಕಹಿ ಅನುಭವಗಳನ್ನು ಉಂಟುಮಾಡುತ್ತದೆ ಎಂದು ಶಾಸ್ತ್ರ ಹೇಳುತ್ತದೆ.
78
6.ಎಳ್ಳೆಣ್ಣೆ
ಎಳ್ಳೆಣ್ಣೆಯನ್ನು ಹೆಚ್ಚಾಗಿ ಅಂತ್ಯಕ್ರಿಯೆಗಳಿಗೆ ಬಳಸುತ್ತಾರೆ. ಇದನ್ನು ತವರಿನಿಂದ ಗಂಡನ ಮನೆಗೆ ತೆಗೆದುಕೊಂಡು ಹೋಗುವುದು ಸಣ್ಣ ಮನಸ್ತಾಪಗಳನ್ನು ದೊಡ್ಡದಾಗಿಸಿ, ವಿಭಜನೆಗೆ ಕಾರಣವಾಗಬಹುದು ಎಂದು ನಂಬಲಾಗಿದೆ.
ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.