ಮಹಾ ಕುಂಭಮೇಳಕ್ಕೆ ಭೇಟಿ ನೀಡಿ ತೀರ್ಥಸ್ನಾನ ಮಾಡಿದ ಸ್ಪೀಕರ್‌ ಯುಟಿ ಖಾದರ್‌!

Published : Jan 24, 2025, 09:05 PM IST

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ಅವರು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಭೇಟಿ ನೀಡಿ, ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ನಾಗಾ ಸಾಧುಗಳು ಮತ್ತು ಅಘೋರಿಗಳನ್ನು ಭೇಟಿ ಮಾಡಿ, ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಕಣ್ತುಂಬಿಕೊಂಡರು.

PREV
15
ಮಹಾ ಕುಂಭಮೇಳಕ್ಕೆ ಭೇಟಿ ನೀಡಿ ತೀರ್ಥಸ್ನಾನ ಮಾಡಿದ ಸ್ಪೀಕರ್‌ ಯುಟಿ ಖಾದರ್‌!

ಕರ್ನಾಟಕ ವಿಧಾನಸಭೆಯ ಸ್ಪೀಕರ್‌ ಯುಟಿ ಖಾದರ್‌ ಶುಕ್ರವಾರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯತ್ತಿರಯವ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ.

25

ತಮ್ಮ ಸ್ನೇಹಿತರೊಂದಿಗೆ ಪ್ರಯಾಗ್‌ರಾಜ್‌ ಕುಂಭಮೇಳಕ್ಕೆ ಹೋಗಿರುವ ಯುಟಿ ಖಾದರ್‌ ಸಂಗಮಕ್ಷೇತ್ರದಲ್ಲಿ ತೀರ್ಥ ಸ್ನಾನ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

35

ಅದರೊಂದಿಗೆ ಪ್ರಯಾಗ್‌ರಾಜ್‌ನಲ್ಲಿ ವಿವಿಧ ನಾಗಾಸಾಧುಗಳು ಹಾಗೂ ಅಘೋರಿಗಳನ್ನು ಭೇಟಿ ಮಾಡಿದ ಚಿತ್ರಗಳನ್ನು ಕೂಡ ಹಂಚಿಕೊಂಡಿದ್ದಾರೆ.

45

ಮಹಾ ಕುಂಭಮೇಳಕ್ಕೆ ಭೇಟಿ ನೀಡಿರುವ ಬಗ್ಗೆ ಮಾತನಾಡಿರುವ ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ, 'ಕುಂಭಮೇಳದಲ್ಲಿ ನೀವು ಭಾರತದ ಸಂಸ್ಕೃತಿಯನ್ನು ಕಾಣಬಹುದು' ಎಂದು ಹೇಳಿದ್ದಾರೆ.

ಎಲ್ಲಾ ಮುಗಿದ್‌ ಮೇಲೆ ಸನ್ಯಾಸತ್ವದತ್ತ ಮನಸ್ಸು ಮಾಡಿದ್ರ ನಟಿ ಮಮತಾ ಕುಲಕರ್ಣಿ:ಕುಂಭಮೇಳದ ವೀಡಿಯೋ ವೈರಲ್

55

ಒಬ್ಬ ಮನುಷ್ಯನಾಗಿ ನಾನು ದೇಶದ ಎಲ್ಲಾ ಸ್ಥಳಗಳಿಗೆ ಹೋಗಲು ಸಾಧ್ಯವಿಲ್ಲ. ಆದರೆ, ಅವರೆಲ್ಲರ ಸಂಸ್ಕೃತಿಯನ್ನು ನಾನು ಕುಂಭಮೇಳದಂಥ ಕಾರ್ಯಕ್ರಮದಲ್ಲಿ ಒಂದೇ ಸ್ಥಳದಲ್ಲಿ ನೋಡಲು ಸಾಧ್ಯವಾಗುತ್ತಿದೆ. ಸಾಧುಗಳು, ನಾಗಾ ಸಾಧುಗಳು, ಅಘೋರಿ ಹೀಗೆ ನನಗೆ ಎಲ್ಲಾ ರೀತಿಯ ಜನರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು ಎಂದು ಹೇಳಿದ್ದಾರೆ.

ಪ್ರಯಾಗ್‌ರಾಜ್ ಮಹಾಕುಂಭ: ಉತ್ಸವನಗರಿಯಲ್ಲಿ ಗಮನಸೆಳೆದ 200 ವಾಟರ್‌ ಎಟಿಎಂ, ಇದರಿಂದ ಸಿಗಲಿದೆ ಶುದ್ದ ನೀರು!

 

Read more Photos on
click me!

Recommended Stories