ನಟಿ ಶಿಲ್ಪಾ ಶೆಟ್ಟಿ ತಮ್ಮ ಇಬ್ಬರು ಮಕ್ಕಳೊಂದಿಗೆ ಗಣೇಶೋತ್ಸವವನ್ನು ಮರಾಠಿ ಶೈಲಿಯಲ್ಲಿ ಸಂಭ್ರಮದಿಂದ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ, ಅವರ ಮಗನ ಉದ್ಯಮಶೀಲತೆ ಮತ್ತು ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಪಡೆದ ಹಿಂದಿನ ವೈಯಕ್ತಿಕ ಹೋರಾಟದ ಬಗ್ಗೆಯೂ ಲೇಖನ ಬೆಳಕು ಚೆಲ್ಲುತ್ತದೆ.
ಈಗ ಎಲ್ಲೆಲ್ಲೂ ಗಣೇಶೋತ್ಸವ ಸಂಭ್ರಮ. ಅದರಲ್ಲಿಯೂ ಮುಂಬೈನಲ್ಲಿ ವಿಶೇಷವಾಗಿ ಗಣೇಶೋತ್ಸವ ಎಂದರೆ ವಿಶೇಷ ಕಳೆಯೇ ಇರುತ್ತದೆ. ಬಾಲಿವುಡ್ ತಾರೆಯರಿಂದಲೂ ವಿಶೇಷವಾಗಿ ಉತ್ಸವ ನಡೆಸಲಾಗುತ್ತದೆ..
26
ಶಿಲ್ಪಾ ಶೆಟ್ಟಿ ಹೆಸರು
ಗಣೇಶೋತ್ಸವ ಎಂದರೆ ಪ್ರತಿವರ್ಷವೂ, ಬಾಲಿವುಡ್ ನಟಿಯರ ಸಾಲಿನಲ್ಲಿ ಮೊದಲಿಗೆ ಕೇಳಿಬರುವುದು ನಟಿ ಶಿಲ್ಪಾ ಶೆಟ್ಟಿ ಅವರ ಹೆಸರು. ವಯಸ್ಸು 52 ಆದರೂ, 20ರ ಚೆಲುವೆಂತೆ ಕಂಗೊಳಿಸುವ ಶಿಲ್ಪಾ ಶೆಟ್ಟಿ, ತಮ್ಮ ಇಬ್ಬರು ಮಕ್ಕಳ ಜೊತೆ ಇದೀಗ ಅಪ್ಪಟ ಮರಾಠಿ ಸ್ಟೈಲ್ನಲ್ಲಿ ಕಾಣಿಸಿಕೊಂಡು ಹೆಜ್ಜೆ ಹಾಕಿದ್ದಾರೆ. ಅದರ ವಿಡಿಯೋಗಳು ವೈರಲ್ ಆಗಿವೆ. ಇದೇ ವೇಳೆ ಮಕ್ಕಳ ಜೊತೆ ಗಣೇಶನಿಗೆ ಪೂಜೆಯನ್ನೂ ಸಲ್ಲಿಸಿದ್ದಾರೆ.
36
ಇಬ್ಬರು ಮಕ್ಕಳ ಜೊತೆ ನಟಿ
2009ರಲ್ಲಿ ಮದುವೆಯಾಗಿದ್ದ ಜೋಡಿ 2012 ರಲ್ಲಿ ತಮ್ಮ ಮೊದಲ ಮಗು ವಿಯಾನ್‌ಗೆ ಅಪ್ಪ-ಅಮ್ಮ ಆದರು. ವಿಯಾನ್‌ಗೆ ಈಗ 14 ವರ್ಷ. ಬಳಿಕ 2020 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಸಮೀಶಾ ಎಂಬ ಮಗಳನ್ನು ದಂಪತಿ ಪಡೆದುಕೊಂಡಿದ್ದಾರೆ. ಈ ಪುಟಾಣಿಗೆ ಈಗ ಆರು ವರ್ಷ ವಯಸ್ಸು.
ಶಿಲ್ಪಾ ಶೆಟ್ಟಿ ಅವರು ಮಕ್ಕಳ ಜೊತೆ ಓಪನ್ ಆಗಿ ಕಾಣಿಸಿಕೊಳ್ಳುವುದು ಅಪರೂಪ. ಕೆಲ ದಿನಗಳ ಹಿಂದೆ ಅವರು ಮಗಳ ಜೊತೆ ಕಾಣಿಸಿಕೊಂಡಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದೀಗ ಅವರು ಇದೀಗ ಇಬ್ಬರೂ ಮಕ್ಕಳ ಜೊತೆ ಗಣೇಶನ ಹಬ್ಬಕ್ಕೆ ಸ್ಟೆಪ್ ಹಾಕಿದ್ದು ವಿಡಿಯೋಗಳು ವೈರಲ್ ಆಗುತ್ತಿವೆ.
56
10ನೇ ವಯಸ್ಸಲ್ಲೇ ಮಗ ಉದ್ಯಮಿ
ಅಂದಹಾಗೆ, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಮಗ ವಿಯಾನ್ ತನ್ನ 10ನೇ ವಯಸ್ಸಿನಲ್ಲಿಯೇ ಬಿಜಿನೆಸ್ ಪ್ರಾರಂಭಿಸಿದ್ದಾನೆ. ಶಿಲ್ಪಾ ಅವರು ಈ ಕುರಿತು ಅಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ತನ್ನ ಮಗನ ಸ್ಟಾರ್ಟ್ಅಪ್ ಕಲ್ಪನೆಯನ್ನು ಘೋಷಿಸುವ ಮತ್ತು ಅವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ನೀಕರ್ಸ್ ಜೋಡಿಯನ್ನು ಪ್ರದರ್ಶಿಸುವ ವಿಡಿಯೋ ಪೋಸ್ಟ್ ಮಾಡಿದ್ದರು.
66
ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗು
ಅಷ್ಟಕ್ಕೂ ನಟಿ ಬಾಡಿಗೆ ತಾಯ್ತನದ ಮೂಲಕ ಇನ್ನೊಂದು ಮಗುವನ್ನು ಪಡೆದಿರುವ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದರು. ಎರಡನೇ ಮಗು ಪಡೆಯಲು 5 ವರ್ಷದಿಂದ ಪ್ರಯತ್ನಿಸುತ್ತಿದ್ದೆ. ಆದರೆ ಅದು ಸಾಧ್ಯವಾಗದಿದ್ದ ಹಿನ್ನೆಲೆಯಲ್ಲಿ ಬಾಡಿಗೆ ತಾಯ್ತನತದ ಮೂಲಕ ಮಗುವನ್ನು ಪಡೆದುಕೊಂಡೆ ಎಂದಿದ್ದರು. 2012ರಲ್ಲಿ ವಿಹಾನ್ ಹುಟ್ಟಿದ ಬಳಿಕ ನಾವೆಲ್ಲರೂ ತುಂಬಾ ಖುಷಿಯಾಗಿದ್ದೆವು. ಆದಾದ ಬಳಿಕ ನಾವು ಪ್ಲಾನಿಂಗ್ ಮಾಡುತ್ತಿದ್ದೆವು. ಮತ್ತೊಂದು ಮಗು ಪಡೆಯಲು ನಾನು 5 ವರ್ಷ ಪ್ರಯತ್ನಿಸುತ್ತಿದ್ದೆ. ನಾನು ಆ ಸಮಯದಲ್ಲಿ ‘ನಿಕಮ್ಮಾ’ ಹಾಗೂ ‘ಹಂಗಾಮ’ ಚಿತ್ರದ ಚಿತ್ರೀಕರಣವನ್ನು ಸೈನ್ ಮಾಡಿ ಡೇಟ್ಸ್ ಮುಂದೂಡಿದ್ದೆ. ಆದರೆ ಮಗು ಹುಟ್ಟುವುದು ಸಾಧ್ಯವಾಗಲಿಲ್ಲ. ಅನಾರೋಗ್ಯದ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ನನ್ನ ದೇಹವು ಗರ್ಭಧಾರಣೆಗೆ ಸ್ಪಂದಿಸುತ್ತಿರಲಿಲ್ಲ. ಇನ್ನೊಂದು ಮಗುವನ್ನು ಪಡೆಯಲು ಆಟೋ ಇಮ್ಯೂನೋ ಡಿಸೀಸ್ (APLC) ಎನ್ನವ ಕಾಯಿಲೆ ಅಡ್ಡಿಯಾಯಿತು. ಈ ಸಮಸ್ಯೆಯಿಂದ ಹಲವಾರು ಬಾರಿ ಗರ್ಭಪಾತವಾಗಿತ್ತು ಎಂದು ಶಿಲ್ಪಾ ಶೆಟ್ಟಿ ತಿಳಿಸಿದ್ದರು.