ಶಕ್ತಿ ಪೀಠಗಳು ಹಿಂದೂ ಧರ್ಮದ ಮಹಿಳಾ ಪ್ರಧಾನ ಮತ್ತು ಶಕ್ತಿ ಪಂಥದ ಮುಖ್ಯ ದೇವತೆ ಶಕ್ತಿ ಅಥವಾ ಸತಿ ದೇವತೆಯ ಪವಿತ್ರ ಪೂಜಾ ಸ್ಥಳಗಳಾಗಿವೆ. 51 ಶಕ್ತಿ ಪೀಠಗಳು ಭಾರತ ಉಪಖಂಡದಾದ್ಯಂತ ವ್ಯಾಪಿಸಿದೆ. ಶಕ್ತಿಯ ದೇವತೆ, ಶಕ್ತಿ ದೇವಿಯು ಆದಿಶಕ್ತಿಯ ಅವತಾರ. ಆದಿಶಕ್ತಿಯು ಮೂರು ಮುಖ್ಯ ಅಭಿವ್ಯಕ್ತಿಗಳನ್ನು ಹೊಂದಿದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಶಕ್ತಿ ಮತ್ತು ಶೌರ್ಯದ ದೇವತೆಯಾಗಿ ದುರ್ಗಾ, ದುಷ್ಟ ವಿನಾಶದ ದೇವತೆಯಾಗಿ ಮಹಾಕಾಳಿ ಮತ್ತು ಗೌರಿ ಉಪಕಾರದ ದೇವತೆಯಾಗಿ ಅವತಾರಗಳನ್ನು ಹೊಂದಿದ್ದಾಳೆ. ಶಕ್ತಿ ಪೀಠಗಳು ಹಿಂದೂಗಳಿಗೆ ಪವಿತ್ರ ಯಾತ್ರಾ ಸ್ಥಳಗಳಾಗಿವೆ. ಅವುಗಳಲ್ಲಿ ಕೆಲವು ಇಲ್ಲಿವೆ ನೋಡಿ.