ಕಳ್ಳ ಕಾಕರನ್ನು ಶಿಕ್ಷಿಸುವ ಸಿಗಂದೂರೇಶ್ವರಿ ದೇವಿ

First Published | Feb 27, 2020, 1:16 PM IST

ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಸಿಂಗದೂರು. ಇಲ್ಲಿನ ಚೌಡಮ್ಮ ದೇವಿಯು ಕಳ್ಳರ ಭಯವನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದ್ದಾಳೆ ಎಂಬುದು ಈ ಕ್ಷೇತ್ರದ ಮಹಾತ್ಮೆ. ಕಳ್ಳ ಕಾಕರಿಗೆ ದೇವಿ ಶಿಕ್ಷೆ ನೀಡುತ್ತಾಳೆ ಎಂಬ ನಂಬಿಕೆ ಇದ್ದು, ಇಲ್ಲಿನ ದೇವಿಗೆ ಹರಕೆ ಹೊತ್ತ ಫಲಕಗಳು ಈ ಭಾಗದ ತೋಟ, ಮನೆಗಳಲ್ಲಿ  ಕಾಣಬಹುದು. ಸಿಗಂದೂರೇಶ್ವರಿ ಭಯದಿಂದಲೇ ಮಲೆನಾಡಿನಲ್ಲಿ ಕಳ್ಳತನ ಕಡಿಮೆ. ಈ ದೇವಸ್ಥಾನ ತಲುಪಲು ಹೊಳೆಬಾಗಲಿನಲ್ಲಿ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರನ್ನು ಲಾಂಚ್ ಮೂಲಕ ದಾಟುವುದು ಮತ್ತೊಂದು ವಿಶೇಷ. ಪ್ರಕೃತಿ ಮಡಿಲಿನಲ್ಲಿರುವ ಈ ದೇವಸ್ಥಾನದ ಮಹಾತ್ಮೆ ಇಲ್ಲಿದೆ.

ಸಾಗರದಿಂದ 40 ಕಿ.ಮೀ ದೂರವಿರುವ ಶ್ರೀ ಕ್ಷೇತ್ರ ಸಿಗಂದೂರು.
ಸಾಗರ ತಾಲೂಕಿನ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನ.
Tap to resize

ಸಿಗಂದೂರು ದೇವಸ್ಥಾನದ ಒಳ ಭಾಗ.
ದೇವಸ್ಥಾನದ ಗರ್ಭಗುಡಿಯ ಮುಂಭಾಗ.
ಮನೆ ಮತ್ತು ಆಸ್ತಿ ರಕ್ಷಕಿ ಸಿಗಂದೂರೇಶ್ವರಿ ದೇವಿ.
ಹೂವುಗಳಿಂದ ಅಲಂಕೃತ ದೇವಿ.
ಕಳ್ಳ ಕಾಕರನ್ನು ಶಿಕ್ಷಿಸುವ ಶಕ್ತಿ ಸ್ವರೂಪಿಣಿ ಸಿಗಂದೂರು ಚೌಡೇಶ್ವರಿ.
ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರು.
ಇಲ್ಲಿನ ಪ್ರಮುಖ ಆಕರ್ಷಣೆ ಲಾಂಚ್ ಪ್ರಯಾಣ.
ಭಕ್ತರು ಮತ್ತು ವಾಹನಗಳನ್ನು ದೇವಸ್ಥಾನಕ್ಕೆ ಸಾಗಿಸಲು ಸಿದ್ಧವಾಗಿರುವ ಲಾಂಚ್‌ಗಳು.

Latest Videos

click me!