ಗಂಡನ ಮೇಲೆ ಸೇಡಿಗಾಗಿ ಮಾರಿಯಾದಳಾ ಈ ಮಾರಿಕಾಂಬೆ!!
First Published | Feb 28, 2020, 3:42 PM ISTಶಿವಮೊಗ್ಗದ ಕೋಟೆ ಶ್ರೀಮಾರಿಕಾಂಬಾ ದೇವಿ ಜಾತ್ರೆಗೆ ಶತಮಾನದ ಇತಿಹಾಸವಿದೆ. ಕೆಳದಿ ರಾಜ ಶಿವಪ್ಪನಾಯಕ ಯುದ್ಧ, ಬೇಟೆ ಹಾಗೂ ರಾಜಕಾರ್ಯಗಳನ್ನು ಕೈಗೊಳ್ಳುವ ಮುಂಚೆ ಮಾರಿ ಗದ್ದುಗೆಗೆ ಪೂಜೆ ಸಲ್ಲಿಸಿ, ಮುನ್ನಡಿ ಇಡುತ್ತಿದ್ದನಂತೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆ ಆ ಕಾಲದಲ್ಲಿ ಜನರನ್ನು ಕಾಡುತ್ತಿದ್ದ ಸಿಡುಬು, ಅಮ್ಮ, ದಡಾರ, ಬರದಂತಹ ನೈಸರ್ಗಿಕ ವಿಪತ್ತು, ಕಾಯಿಲೆಗಳ ನಿವಾರಣೆಗಾಗಿ ಪೂಜೆ, ಹರಕೆ ಸಲ್ಲಿಸುವ ವಾಡಿಕೆಯನ್ನು ಜನರನ್ನು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈ ಮಾರಿಕಾಂಬೆ ಕಥೆ ನಿಮಗೆ ಗೊತ್ತಾ?