ಕೂದಲು ಮಾರಿ ಹಣ, ಪಾತ್ರೆ ಖರೀದಿ ಮಾಡ್ತಿದ್ರೆ ಇಂದೇ ಈ ಕೆಲ್ಸ ಬಿಡಿ, ಮುಂದೆ ಬರೋ ಅಪಾಯದಿಂದ ಬಚಾವ್ ಆಗಿ

Published : May 01, 2026, 12:42 PM IST

hair selling astrology : ಕೂದಲು ಸಿಕ್ಕಾಪಟ್ಟೆ ಉದುರ್ತಿದೆ ಅಂದಾಗ ಮಹಿಳೆಯರು ಅದನ್ನು ಸಂಗ್ರಹಿಸೋಕೆ ಶುರು ಮಾಡ್ತಾರೆ. ಈ ಉದುರೋ ಕೂದಲನ್ನು ಮಾರಾಟ ಮಾಡಿ ಹಣ ಇಲ್ಲ ಪಾತ್ರೆ ಖರೀದಿ ಮಾಡೋ ಆಸೆ ಅವರದ್ದು. ನೀವೂ ಕೂದಲು ಮಾರಾಟ ಮಾಡ್ತಿದ್ದರೆ ಸ್ವಲ್ಪ ಎಚ್ಚೆತ್ತುಕೊಳ್ಳಿ. 

PREV
16
ಕೂದಲಿಗೆ ಭರ್ಜರಿ ಹಣ

ಕೂದಲು ಖರೀದಿ ಮತ್ತು ಮಾರಾಟ ದೊಡ್ಡ ಬ್ಯುಸಿನೆಸ್. ಪ್ರತಿ ದಿನ ನಿಮ್ಮ ಬೀದಿಯಲ್ಲೂ ಕೂದಲು ಖರೀದಿ ಮಾಡುವ ವ್ಯಕ್ತಿಗಳು ಬರ್ತಿರುತ್ತಾರೆ. ಗ್ರಾಂ ಲೆಕ್ಕದಲ್ಲಿ ಅವರು ಕೂದಲು ಖರೀದಿ ಮಾಡ್ತಾರೆ. ಕೂದಲು ಗುಣಮಟ್ಟ ಹಾಗೂ ಕೆಜಿ ಆಧಾರದ ಮೇಲೆ ಬೆಲೆ ನಿರ್ಧಾರವಾಗುತ್ತದೆ. ಒಂದು ಕೆಜಿ ಕೂದಲಿಗೆ 30 ಸಾವಿರದವರೆಗೆ ಬೆಲೆ ಇದೆ. ಸೈಕಲ್ ಇಲ್ಲ ಮೋಟರ್ ಸೈಕಲ್ ನಲ್ಲಿ ಬರುವ ಇವರಿಗೆ ನೀವು ಕೂದಲು ಕೊಡ್ತಿದ್ದೀರಾ? ಇಲ್ಲ ನಿಮ್ಮ ಮನೆಯವರು ಕೂದಲು ನೀಡಿ ಹಣ ಇಲ್ಲ ಪಾತ್ರೆ ಖರೀದಿ ಮಾಡ್ತಿದ್ದಾರಾ? ಕಸಕ್ಕೆ ಹಾಕುವ ಕೂದಲಿಂದ ಹಣ ಬರ್ಬಹುದು, ಆದ್ರೆ ದುರಾದೃಷ್ಟ ಕೂಡ ಬೆನ್ನು ಹತ್ತುತ್ತೆ.

26
ಕೂದಲು ಮಾರಾಟ ಅಶುಭ

ಜ್ಯೋತಿಷ್ಯದ ಪ್ರಕಾರ, ಕೂದಲು ಮಾರಾಟ ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ ಶಕ್ತಿ ಕೂದಲಿನಲ್ಲಿರುತ್ತದೆ. ಕೂದಲು ಉದುರಿರಲಿ ಇಲ್ಲ ತಲೆ ಮೇಲಿರಲಿ, ಕೂದಲು ಮಹಿಳೆಯ ಶಕ್ತಿಯನ್ನು ಹೊಂದಿರುತ್ತದೆ. ಈ ಕೂದಲನ್ನು ಹೆಚ್ಚಾಗಿ ತಾಂತ್ರಿಕ ವಿದ್ಯೆಯಲ್ಲಿ ಬಳಕೆ ಮಾಡಲಾಗುತ್ತದೆ. ನಿಮ್ಮ ಶಕ್ತಿಯನ್ನು ಬಳಸಿಕೊಂಡು ಕೆಟ್ಟ ಕೆಲಸಕ್ಕೆ ಕೂದಲು ಬಳಸುವವರಿದ್ದಾರೆ. ನಿಮ್ಮನ್ನು ವಶೀಕರಣ ಮಾಡಲು ನಿಮ್ಮ ಕೂದಲು ಬಳಸುವ ಸಾಧ್ಯತೆ ಇರುತ್ತದೆ.

36
ಜ್ಯೋತಿಷ್ಯ ಹೇಳೋದೇನು?

ಜ್ಯೋತಿಷ್ಯದ ಪ್ರಕಾರ ಕೂದಲು ಚಂದ್ರ ಮತ್ತು ಶುಕ್ರನೊಂದಿಗೆ ಸಂಬಂಧಿಸಿದೆ. ಜಾತಕದಲ್ಲಿ ಚಂದ್ರ ಮತ್ತು ಶುಕ್ರನ ಬಲವಾದ ಸ್ಥಾನಗಳು ಅದೃಷ್ಟವನ್ನು ತರುತ್ತವೆ. ಇದಲ್ಲದೆ, ವ್ಯಕ್ತಿಯು ಸಂತೋಷ ಮತ್ತು ಸೌಂದರ್ಯವನ್ನು ಪಡೆಯುತ್ತಾನೆ. ನೀವು ಈ ಕೂದಲನ್ನು ಮಾರಾಟ ಮಾಡುವುದರಿಂದ ಈ ಎರಡು ಗ್ರಹಗಳ ಸ್ಥಾನ ದುರ್ಬಲಗೊಳ್ಳುತ್ತದೆ. ಒಬ್ಬರು ಜೀವನದಲ್ಲಿ ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೂದಲು ಸ್ತ್ರೀ ಶಕ್ತಿಯನ್ನು ಸಂಕೇತಿಸುತ್ತದೆ ಮತ್ತು ಅದನ್ನು ಮಾರಾಟ ಮಾಡುವುದು ಶಕ್ತಿ ವಿನಿಮಯದ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಮಹಿಳೆಯರ ಕೂದಲನ್ನು ಮಾರಾಟ ಮಾಡುವುದು ಶುಕ್ರ, ಚಂದ್ರ ಮತ್ತು ಕೇತು ಮೂರು ಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ.

46
ಅನಾರೋಗ್ಯ ಕಾಡ್ಬಹುದು

ನಿಮ್ಮಿಂದ ಕೂದಲು ಪಡೆದ ವ್ಯಕ್ತಿ ಅದನ್ನು ತಾಂತ್ರಿಕ ಕ್ರಿಯೆಗೆ ಬಳಸಬಹುದು. ಇದ್ರಿಂದ ನಿಮಗೆ ಅನಾರೋಗ್ಯ ಕಾಡುವ ಸಾಧ್ಯತೆ ಇದೆ. ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಎದುರಿಸಬಹುದು. ಹಾಗಾಗಿಯೇ ಹಿಂದೂ ವೈದಿಕ ಸಂಪ್ರದಾಯಗಳಲ್ಲಿ ಕೂದಲು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.

56
ಇಸ್ಲಾಂನಲ್ಲೂ ಇದು ನಿಷಿದ್ಧ

ಬರೀ ಹಿಂದೂ ಧರ್ಮದಲ್ಲಿ ಮಾತ್ರವಲ್ಲ ಇಸ್ಲಾಂ ಧರ್ಮದಲ್ಲೂ ಕೂದಲು ಮಾರಾಟ ನಿಷೇಧಿಸಲಾಗಿದೆ. ಇಸ್ಲಾಂನಲ್ಲಿ ಕೂದಲು ಮಾರಾಟ ಮಾಡುವುದನ್ನು ಹರಾಮ್ ಎಂದು ಪರಿಗಣಿಸಲಾಗುತ್ತದೆ.

66
ಈಗಾಗಲೇ ಮಾರಾಟ ಮಾಡಿದವರು ಏನು ಮಾಡ್ಬೇಕು?

ಇಷ್ಟು ದಿನ ಕೂದಲು ಮಾರಾಟ ಮಾಡ್ಬಾರದು ಎಂಬುದು ಗೊತ್ತಿರಲಿಲ್ಲ. ಈಗಾಗಲೇ ಮಾರಾಟ ಮಾಡಿಯಾಗಿದೆ ಎನ್ನುವವರು ಚಿಂತಿಸುವ ಅಗತ್ಯವಿಲ್ಲ. ನೀವು ಕೂದಲು ಮಾರಾಟ ಮಾಡಿ ಗಳಿಸಿದ ಹಣವನ್ನು ಬಡವರಿಗೆ ದಾನ ಮಾಡಿ. ಪದೇ ಪದೇ ಅನಾರೋಗ್ಯಕ್ಕೆ ಒಳಗಾಗ್ತಿದ್ದರೆ, ನಾನಾ ಸಮಸ್ಯೆ ನಿಮ್ಮನ್ನು ಕಾಡ್ತಿದ್ದರೆ ವಾಮಾಚಾರಕ್ಕೆ ಒಳಗಾಗಿರುವ ಸಾಧ್ಯತೆ ಕೂಡ ಇರುತ್ತದೆ. ಅದನ್ನು ಪತ್ತೆ ಹಚ್ಚಿ, ಅದಕ್ಕೆ ಪರಿಹಾರ ಕಂಡುಕೊಳ್ಳಿ.

Read more Photos on
click me!

Recommended Stories