ಎಲ್ರಿಗೂ ಒಂದೇ ರೀತಿ ದೃಷ್ಟಿ ತೆಗೆದ್ರೆ ಪ್ರಯೋಜನ ಇಲ್ಲ, ಮೂಲಾಂಕಕ್ಕೆ ತಕ್ಕಂತೆ ಉಪಾಯ ಮಾಡಿ

Published : Apr 30, 2026, 03:49 PM IST

ದೃಷ್ಟಿ ಬಿದ್ದಾಗ ಸಾಮಾನ್ಯವಾಗಿ ಎಲ್ಲರೂ ಒಂದೇ ರೀತಿಯಲ್ಲಿ ದೃಷ್ಟಿ ತೆಗೆಸಿಕೊಳ್ತಾರೆ. ಕಪ್ಪು ದಾರ ಕಟ್ಟಿಕೊಳ್ಳೋದು ಇಲ್ಲ ಪೊರಕೆ ಕಡ್ಡಿ ಸುಡೋದು, ಉಪ್ಪು – ಮೆಣಸಿನಿಂದ ದೃಷ್ಟಿ ತೆಗೆಯೋದು ಸಾಮಾನ್ಯ.  ಇದು ಎಲ್ಲರಿಗೂ ಪ್ರಯೋಜಕಾರಿಯಲ್ಲ. ಮೂಲಾಂಕಕ್ಕೆ ತಕ್ಕಂತೆ ನೀವು ದೃಷ್ಟಿ ತೆಗೆಸಿಕೊಂಡ್ರೆ ಒಳ್ಳೆಯದು.

PREV
19
ಮೂಲಾಂಕ 1

ನೀವು 1, 10, 19 ಇಲ್ಲ 28ನೇ ದಿನಾಂಕದಲ್ಲಿ ಹುಟ್ಟಿದ್ದರೆ ಹತ್ತಿ ಬತ್ತಿಗೆ ತುಪ್ಪವನ್ನು ಹಾಕಿ ದೀಪ ಬೆಳಗಬೇಕು. ನಂತ್ರ ಈ ದೀಪವನ್ನು ದೃಷ್ಟಿಬಿದ್ದ ವ್ಯಕ್ತಿಗೆ ಏಳು ಸುತ್ತು ಉಲ್ಟಾ ಸುತ್ತಿ. ಇದ್ರಿಂದ ಕೆಟ್ಟ ದೃಷ್ಟಿ ದೂರವಾಗುತ್ತದೆ. ಸಕಾರಾತ್ಮಕ ಶಕ್ತಿಯ ವೃದ್ಧಿಯಾಗುತ್ತದೆ.

29
ಮೂಲಾಂಕ 2

ನಿಮ್ಮ ಹುಟ್ಟಿದ ದಿನಾಂಕ 2, 11, 20 ಅಥವಾ 29 ಆಗಿದ್ದರೆ ನೀವು ತುಪ್ಪ ಹಚ್ಚಿ ದೃಷ್ಟಿ ತೆಗೆದ್ರೆ ಪ್ರಯೋಜನವಿಲ್ಲ. ಕೈಗೆ ಉಪ್ಪನ್ನು ಹಾಕಿಕೊಂಡು ಕಾಲಿನಿಂದ ತಲೆಯವರೆಗೆ ಏಳು ಸುತ್ತು ಉಲ್ಟಾ ಸುತ್ತಿ. ನಂತ್ರ ಆ ಉಪ್ಪನ್ನು ಸಿಂಕ್ ಅಥವಾ ಟಾಯ್ಲೆಟ್ ಗೆ ಹಾಕಿ. ಇದ್ರಿಂದ ಕೆಟ್ಟ ದೃಷ್ಟಿ ದೂರವಾಗುತ್ತದೆ. ಅದ್ರಿಂದ ಕಾಡ್ತಿದ್ದ ಎಲ್ಲ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

39
ಮೂಲಾಂಕ 3

ನೀವು 3, 12, 21 ಅಥವಾ 30ನೇ ತಾರೀಕು ಹುಟ್ಟಿದ್ದರೆ ಕೆಟ್ಟ ದೃಷ್ಟಿಯಿಂದ ಮುಕ್ತಿಪಡೆಯೋದು ಸುಲಭ. ನೀವು ಹತ್ತಿರದ ಯಾವುದೇ ದೇವಸ್ಥಾನಕ್ಕೆ ಹೋಗಿ. ಅಲ್ಲಿ 10 ನಿಮಿಷ ಕಣ್ಮುಚ್ಚಿ ಕುಳಿತುಕೊಳ್ಳಿ. ಪಾಸಿಟಿವ್ ಶಕ್ತಿಯನ್ನು ಪಡೆಯಿರಿ. ನಿಮ್ಮಿಷ್ಟದ ಮಂತ್ರವನ್ನು ಹೇಳಿ. ಇದ್ರಿಂದ ನಿಮಗೆ ಅಂಟಿದ್ದ ಕೆಟ್ಟ ದೃಷ್ಟಿ ದೂರವಾಗುತ್ತದೆ.

49
ಮೂಲಾಂಕ 4

ನಿಮ್ಮ ಬರ್ತ್ ಡೇಟ್ 4, 13, 22 ಅಥವಾ 31 ಆಗಿದ್ದರೆ ನೀವು ಮೂರು ಲವಂಗವನ್ನು ತೆಗೆದುಕೊಳ್ಳಿ. ಅದನ್ನು ಕೈನಲ್ಲಿಟ್ಟುಕೊಂಡು ತಲೆಗೆ ಉಲ್ಟಾ 9 ಸುತ್ತು ಸುತ್ತಿ. ನಂತ್ರ ಈ ಲವಂಗವನ್ನು ಪೇಪರ್ ನಲ್ಲಿ ಕಟ್ಟಿ ಮನೆಯಿಂದ ಹೊರಗೆ ಹಾಕಿ.

59
ಮೂಲಾಂಕ 5

ನಿಮ್ಮ ಹುಟ್ಟುಹಬ್ಬ 5, 14, 23 ಆಗಿದ್ದರೆ ನೀವು ಹಸಿರು ಹುಲ್ಲಿನಿಂದ ದೃಷ್ಟಿ ತೆಗೆಯಬೇಕು. ನೀವು ಕೈನಲ್ಲಿ ಹಸಿರು ಹುಲ್ಲನ್ನು ಹಿಡಿದುಕೊಂಡು ತಲೆಗೆ ಉಲ್ಟಾ 7 ಸುತ್ತು ಸುತ್ತಿ ನಂತ್ರ ಅದನ್ನು ಹೊರಗೆ ಹಾಕಿ. ಇದರಿಂದ ಕೆಟ್ಟ ದೃಷ್ಟಿ ದೂರವಾಗುತ್ತದೆ.

69
ಮೂಲಾಂಕ 6

ನೀವು 6, 15 ಅಥವಾ 24 ರಂದು ಹುಟ್ಟಿದ್ದರೆ ಮೊಸರು ಉಪಾಯ ಆಗ್ಬಹುದು. ನಿಮ್ಮ ಮೈತುಂಬ ಮೊಸರನ್ನು ಹಚ್ಚಿಕೊಂಡು ನಂತ್ರ ಸ್ನಾನ ಮಾಡಬೇಕು. ಶುದ್ಧ ನೀರಿನಲ್ಲಿ ಸ್ನಾನ ಮಾಡಿದ ನಂತ್ರ ಪರ್ಫ್ಯೂಮ್ ಹಚ್ಚಿಕೊಳ್ಳಿ.

79
ಮೂಲಾಂಕ 7

ನಿಮ್ಮ ಬರ್ತ್ ಡೇ 7, 16 ಅಥವಾ 25 ಆಗಿದ್ದರೆ ಕೈಗೆ ಐದು ಲವಂಗ ತೆಗೆದುಕೊಳ್ಳಿ. ಒಂದು ಚಿಟಕಿ ಅರಿಶಿನ ಪುಡಿಯನ್ನು ಅದಕ್ಕೆ ಹಾಕಿ. ನಂತ್ರ ತಲೆ ಹಾಗೂ ದೇಹಕ್ಕೆ ಏಳು ಬಾರಿ ಸುತ್ತಿ. ನಂತ್ರ ಅದನ್ನು ಪೇಪರ್ ನಲ್ಲಿ ಕಟ್ಟಿ ಮನೆಯಿಂದ ಹೊರಗೆ ಹಾಕಿ.

89
ಮೂಲಾಂಕ 8

ನೀವು 8, 17 ಮತ್ತು 26ನೇ ದಿನಾಂಕದಂದು ಹುಟ್ಟಿದ್ರೆ ಮೊದಲು ಉಪ್ಪು ಬೆರೆಸಿದ ನೀರಿನಲ್ಲಿ ಸ್ನಾನ ಮಾಡಿ. ನಂತ್ರ ಸಾಸಿವೆ ಎಣ್ಣೆಯನ್ನು ಮೈಗೆಲ್ಲ ಹಚ್ಚಿಕೊಳ್ಳಿ. ಇದ್ರಿಂದ ಕೆಟ್ಟ ದೃಷ್ಟಿ ದೂರವಾಗುತ್ತದೆ.

99
ಮೂಲಾಂಕ 9

ನೀವು 9, 18 ಮತ್ತು 27ನೇ ದಿನಾಂಕದಂದು ಹುಟ್ಟಿದ್ರೆ ಕೈಗೆ ಒಂದು ಕೆಂಪು ಮೆಣಸನ್ನು ತೆಗೆದುಕೊಳ್ಳಿ. ಈ ಮೆಣಸನ್ನು ತಲೆಗೆ 9 ಸುತ್ತು ಉಲ್ಟಾ ಸುತ್ತಿ. ನಂತ್ರ ಅದನ್ನು ಮನೆಯಿಂದ ಹೊರಗೆ ಹಾಕಿ.

Read more Photos on
click me!

Recommended Stories