ನಾಗರಪಂಚಮಿ ದಿನ ನಿಜವಾದ ಹಾವನ್ನು ನೋಡುವುದು ಶುಭವೋ? ಅಶುಭವೋ?

Published : Jul 26, 2025, 09:23 AM IST

ಇನ್ನೇನು ನಾಗರಪಂಚಮಿ ಹಬ್ಬ ಬರುತ್ತಿದೆ. ಶ್ರಾವಣ ಮಾಸದ ಮೊದಲ ಹಬ್ಬ ಇದು. ಈ ಶುಭ ದಿನದಂದು ನೀವು ಜೀವಂತ ನಾಗರಹಾವನ್ನು ನೋಡುವುದು ಶುಭವೋ? ಅಶುಭವೋ? ತಿಳಿಯೋಣ.

PREV
17

ಈ ವರ್ಷ ನಾಗರ ಪಂಚಮಿಯನ್ನು (Nag Panchami) ಜುಲೈ 29, 2025 ರಂದು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ. ಈ ದಿನವನ್ನು ನಾಗ ದೇವತೆಗಳಿಗೆ ಅರ್ಪಿಸಲಾಗಿದೆ ಮತ್ತು ಈ ದಿನದಂದು ಅವುಗಳನ್ನು ಪೂಜಿಸಲಾಗುತ್ತದೆ.

27

ಈ ದಿನ ಬೆಳಗ್ಗೆ ಎದ್ದು ಪೂಜೆ ಮಾಡೋದು ಶುಭ ಎನ್ನಲಾಗುತ್ತೆ. ಆದರೆ ಈ ನಿರ್ದಿಷ್ಟ ದಿನದಂದು ನೀವು ನಿಜವಾದ ಹಾವನ್ನು (serpent) ನೋಡಿದರೆ, ಅದನ್ನು ಸಾಮಾನ್ಯ ಘಟನೆ ಎಂದು ಪರಿಗಣಿಸಲಾಗುವುದಿಲ್ಲ. ಹಾಗಿದ್ರೆ ಇದು ಶುಭವೋ? ಅಶುಭವೋ? ತಿಳಿಯೋಣ.

37

ಸಾಮಾನ್ಯವಾಗಿ ಹಾವುಗಳನ್ನು ಕಂಡರೆ ಜನರು ಭಯಪಡುವುದು ಸಹಜ, ಆದರೆ ಜ್ಯೋತಿಷ್ಯದ ಪ್ರಕಾರ, ನಾಗರಪಂಚಮಿಯಂದು ಹಾವನ್ನು ನೋಡುವುದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ.

47

ಜ್ಯೋತಿಷ್ಯದಲ್ಲಿ, ಹಾವನ್ನು ಸಂಪತ್ತು (wealth)ಮತ್ತು ಸಮೃದ್ಧಿಯ ರಕ್ಷಕ ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಯಾಕೆ ಶಿವನ ಕುತ್ತಿಗೆಯಲ್ಲೂ ನಾಗನಿದ್ದಾನೆ. ಹಾಗಾಗಿ ನಾಗಗಳಿಗೂ ವಿಶೇಷವಾದ ಸ್ಥಾನಮಾನ ನೀಡಲಾಗುತ್ತದೆ.

57

ಶಿವನು ಕುತ್ತಿಗೆಯಲ್ಲಿ ವಾಸುಕಿ ಹಾವನ್ನು ಹೊಂದಿದ್ದಾನೆ ಮತ್ತು ವಿಷ್ಣು ಶೇಷನಾಗದ ಮೇಲೆ ಕುಳಿತಿದ್ದಾನೆ ಅಂದರೆ ಹಾವುಗಳು ಸಂಪತ್ತು ಮತ್ತು ಸಮೃದ್ಧಿಗೆ ಸಂಬಂಧಿಸಿವೆ. ಹಾಗಿದ್ರೆ ನಾಗರಪಂಚಮಿಯಂದು ಹಾವನ್ನು ನೋಡಿದರೆ ಏನಾಗುತ್ತೆ?

67

ನಾಗರಪಂಚಮಿಯ ದಿನದಂದು ನೀವು ಹಾವನ್ನು ನೋಡಿದರೆ, ನಿಮ್ಮ ಜೀವನದಲ್ಲಿ ಆರ್ಥಿಕ ಸ್ಥಿತಿ (financial condition) ಸುಧಾರಿಸುತ್ತದೆ. ನೀವು ಇದ್ದಕ್ಕಿದ್ದಂತೆ ಆರ್ಥಿಕ ಲಾಭವನ್ನು ಪಡೆಯಬಹುದು ಅಥವಾ ವ್ಯವಹಾರದಲ್ಲಿ ಬೆಳವಣಿಗೆಯನ್ನು ನೋಡಬಹುದು.

77

ನಾಗರ ಪಂಚಮಿಯಂದು ಹಾವನ್ನು ನೋಡುವುದು ನಿಮ್ಮ ಈಡೇರದ ಆಸೆಗಳಲ್ಲಿ ಒಂದನ್ನು ಈಡೇರಿಸುವ ಸಂಕೇತವಾಗಿದೆ. ಹಾಗಾಗಿ ಈ ಬಾರಿ ನಾಗರಪಂಚಮಿಯಂದು ಹಾವನ್ನು ಕಂಡರೆ ಭಯಪಡಬೇಡಿ. ಬದಲಾಗಿ ಖುಷಿ ಪಡಿ.

Read more Photos on
click me!

Recommended Stories