ಶನಿ, ಮಂಗಳ ಗ್ರಹಗಳನ್ನು ಶಾಂತಗೊಳಿಸಲು ದುರಭ್ಯಾಸ ಬಿಟ್ಟು ಬಿಡಿ

First Published | May 25, 2022, 1:06 PM IST

ಕೆಟ್ಟ ಅಭ್ಯಾಸಗಳು ಗ್ರಹಗಳ ಅಶುಭತೆಯನ್ನು ಹೆಚ್ಚಿಸುತ್ತವೆ. ಶನಿ ಮತ್ತು ಮಂಗಳ ಗ್ರಹಗಳನ್ನು ಎರಡು ಕ್ರೂರ ಗ್ರಹಗಳು ಎಂದು ಪರಿಗಣಿಸಲಾಗಿದೆ. ಅದನ್ನು ಮಂಗಳಕರವಾಗಿಡಲು ನಾವು ಎಂದಿಗೂ ಕೆಲವು ಕೆಲಸಗಳನ್ನು ಮಾಡಬಾರದು. ಅಂತಹ ಕೆಲಸಗಳು ಯಾವುವು ಅನ್ನೋದನ್ನು ತಿಳಿಯೋಣ.
 

ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) , ಶನಿಯನ್ನು(Saturn) ಕ್ರೂರ ಗ್ರಹ ಮತ್ತು ಮಂಗಳ ಗ್ರಹವನ್ನು ಉದ್ರೇಕಕಾರಿ ಗ್ರಹ ಎಂದು ವಿವರಿಸಲಾಗಿದೆ. ಈ ಎರಡೂ ಗ್ರಹಗಳು ಮಂಗಳಕರವಾದಾಗ, ಅಲ್ಲಿ ಮನುಷ್ಯನಿಗೆ ಉತ್ತಮ ಪ್ರಯೋಜನಗಳು ಉಂಟಾಗುತ್ತೆ, ಆದರೆ ಅಶುಭತೆಯ ಸಂದರ್ಭದಲ್ಲಿ, ಅವು ಜೀವನದಲ್ಲಿ ನೋವು, ತೊಂದರೆ ಮತ್ತು ಅಡೆತಡೆಗಳನ್ನು ಸಹ ತುಂಬುತ್ತವೆ. ಈ ಎರಡೂ ಗ್ರಹಗಳು ಕೆಟ್ಟ ಅಭ್ಯಾಸಗಳಿಂದ ಕೆಟ್ಟ ಫಲಿತಾಂಶಗಳನ್ನು ನೀಡುತ್ತವೆ. ಆದ್ದರಿಂದ ಈ ಕೆಲಸಗಳನ್ನು ಎಂದಿಗೂ ಮಾಡಬಾರದು.

ಶನಿಯು ಈ ತಪ್ಪು ವಿಷಯವನ್ನು ಇಷ್ಟಪಡೋದಿಲ್ಲ

ಶನಿಯನ್ನು ಕಲಿಯುಗದ ದಂಡಾಧಿಕಾರಿ ಎಂದು ಹೇಳಲಾಗುತ್ತದೆ. ಶನಿದೇವನನ್ನು(Shani) ಕರ್ಮಫಲದಾತ ಮತ್ತು ನ್ಯಾಯಾಧೀಶ ಎಂದೂ ಸಹ ಕರೆಯಲಾಗುತ್ತದೆ. ಮನುಷ್ಯನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಆಧಾರದ ಮೇಲೆ ಮಾತ್ರ, ಶನಿದೇವನು ಫಲವನ್ನು ನೀಡುತ್ತಾನೆ ಎಂದು ನಂಬಲಾಗಿದೆ. 

Tap to resize

ಒಬ್ಬ ಮನುಷ್ಯನು ನೀತಿಯ ಮಾರ್ಗದಲ್ಲಿ (Good Path) ನಡೆದರೆ ಮತ್ತು ಸತ್ಕಾರ್ಯಗಳನ್ನು (Good Workds) ಮಾಡಿದರೆ, ಶನಿದೇವನು ಅವನಿಗೆ ಶುಭ ಫಲಗಳನ್ನು ನೀಡುತ್ತಾನೆ. ಅಂತಹ ಜನರು ಜೀವನದಲ್ಲಿ ಅಪಾರ ಯಶಸ್ಸನ್ನು(Success) ಸಾಧಿಸುತ್ತಾರೆ. ಆದುದರಿಂದ ಯಾವಾಗಲೂ ಸತ್ಕಾರ್ಯಗಳನ್ನು ಮಾತ್ರ ಮಾಡಬೇಕು. 

ಈ ಕೆಳಗಿನ ಕೆಲಸಗಳನ್ನು ಮಾಡುವುದರಿಂದ ಶನಿಯು ಬಹಳ ಬೇಗನೆ ಕೋಪಗೊಳ್ಳುತ್ತಾನೆ :
ದುರ್ಬಲರಿಗೆ ಎಂದಿಗೂ ತೊಂದರೆ ಕೊಡಬೇಡಿ.
ಇತರರಿಗೆ ಹಾನಿ ಮಾಡಲು ಹಣ ಬಳಸಬೇಡಿ.
ಕಷ್ಟಪಟ್ಟು ದುಡಿಯುವವರಿಗೆ ಎಂದಿಗೂ ತೊಂದರೆ ನೀಡಬೇಡಿ.
ಪ್ರಾಣಿಗಳು ಮತ್ತು ಪಕ್ಷಿಗಳಿಗೆ (Birds) ಹಾನಿ ಮಾಡಬೇಡಿ.
ನಿಯಮಗಳನ್ನು ಉಲ್ಲಂಘಿಸಬೇಡಿ.
ದುರಾಸೆ ಬೇಡ.
ಯಾರಿಗೂ ಅಗೌರವ (Disrespect)ತೋರಬೇಡಿ.

ಈ ಕೆಲಸಗಳನ್ನು ಮಾಡುವುದರಿಂದ, ಮಂಗಳನು (Mars) ಕೋಪಗೊಳ್ಳುತ್ತಾನೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹವನ್ನು ಗ್ರಹಗಳ ದಂಡನಾಯಕ ಎಂದು ವಿವರಿಸಲಾಗಿದೆ. ಮಂಗಳ ಗ್ರಹವನ್ನು ಧೈರ್ಯ, ಯುದ್ಧ, ರಕ್ತ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ. ಮಂಗಳ ಗ್ರಹವನ್ನು ಶಕ್ತಿ ಎಂದೂ ವಿವರಿಸಲಾಗಿದೆ. ಮಂಗಳ ಗ್ರಹವು ಅಶುಭವಾಗಿರುವಾಗ, ಅದು ವ್ಯಕ್ತಿಯ ಸ್ವಭಾವದಲ್ಲಿ ವಿಶೇಷ ಬದಲಾವಣೆಯನ್ನು ತರುತ್ತದೆ, ಇದರಿಂದಾಗಿ ಗಂಭೀರ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ. 

ಮಂಗಳ ಕೋಪಗೊಳ್ಳುವಂತಹ(Angry) ಈ ಕೆಲಸಗಳನ್ನು ಮಾಡಬಾರದು :
ಯಾರ ಮೇಲೂ ಕೋಪಗೊಳ್ಳಬೇಡಿ.
ಇತರರನ್ನು ಅವಮಾನಿಸುವುದನ್ನು ತಪ್ಪಿಸಿ.
ಎಲ್ಲಾ ರೀತಿಯ ಚಟದಿಂದ ದೂರವಿರಿ.
ಅಹಂಕಾರಿಯಾಗಬೇಡಿ.
ಕಠಿಣ ಪದಗಳನ್ನು ಬಳಸಬೇಡಿ.
ಕರ್ಕಶ ಸ್ವರ ಹೊರಡಿಸೋ ಪಕ್ಕವಾದ್ಯದಿಂದ ದೂರವಿರಿ.

ಶನಿ ಮತ್ತು ಮಂಗಳ ಗ್ರಹಗಳನ್ನು ಶಾಂತಗೊಳಿಸೋದು ಹೇಗೆ?
ಶನಿ ಮತ್ತು ಮಂಗಳ ಗ್ರಹವನ್ನು ಶಾಂತಗೊಳಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಕ್ರಮಗಳನ್ನು ಮಾಡುವ ಮೂಲಕ, ಈ ಗ್ರಹಗಳು ಶಾಂತವಾಗುತ್ತವೆ(Silent) ಮತ್ತು ಶುಭ ಫಲಗಳನ್ನು ನೀಡುತ್ತವೆ. 

ಶನಿವಾರ (Saturday) ಶನಿದೇವನ ದಿನ ಮತ್ತು ಮಂಗಳನ ದಿನವು ಹನುಮಾನ್ ಜೀಗೆ (Hanuman) ಸಮರ್ಪಿತವಾಗಿದೆ. ಈ ಗ್ರಹಗಳು ಹನುಮಾನ್ ಜಿ ಮತ್ತು ಶನಿದೇವನನ್ನು ಪೂಜಿಸಲು ಶುಭ. ದಾನ ಮತ್ತು ಸದ್ಗುಣದ ಕಾರ್ಯಗಳನ್ನು ಮಾಡುವುದರಿಂದ ಜೀವನದಲ್ಲಿನ ಅಡೆತಡೆಗಳನ್ನು ತೆಗೆದುಹಾಕುತ್ತದೆ. 
 

Latest Videos

click me!