Published : Dec 22, 2021, 03:18 PM ISTUpdated : Dec 22, 2021, 04:13 PM IST
ಮಾನವ ಕ್ರಿಯೆಗಳು ಕೆಲವೊಮ್ಮೆ ಅವನ ಹಣೆಬರಹವೂ ಅವನನ್ನು ಬೆಂಬಲಿಸುವುದನ್ನು ನಿಲ್ಲಿಸುವಂತೆ ಮಾಡುತ್ತದೆ. ಈ ಕಾರಣಕ್ಕಾಗಿ ಕೆಲವೊಮ್ಮೆ ಅಂದುಕೊಂಡ ಕಾರ್ಯಗಳು ಫಲ ನೀಡುವುದಿಲ್ಲ. ಮಲಗಿರುವ ಅದೃಷ್ಟವನ್ನು(luck) ಬೆಳಗಿಸಲು ಕೇಸರಿ ವಿಶೇಷವೆಂದು ಪರಿಗಣಿಸಲಾಗುತ್ತದೆ.
ಕೇಸರಿಯು ಅದೃಷ್ಟವನ್ನು ಬಲಪಡಿಸುತ್ತವೆ. ಇದೇ ವೇಳೆ ಈ ಕೇಸರಿ (saffron) ಗಂಡ-ಹೆಂಡತಿಯರ ನಡುವಿನ ಸಂಬಂಧವನ್ನು ಬಲಪಡಿಸುತ್ತವೆ. ಇದು ಜೀವನವನ್ನು ಸಂತೋಷವಾಗಿರಿಸುತ್ತದೆ. ಜೊತೆಗೆ ಜೀವನದಲ್ಲಿನ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ. ಅದೃಷ್ಟ ಬದಲಾಗುತ್ತದೆ. ಅದಕ್ಕಾಗಿ ಏನು ಮಾಡಬೇಕು ನೋಡೋಣ.
27
ಮಂಗಳ ದೋಷಗಳನ್ನು ತೆಗೆದುಹಾಕಲು ಕೇಸರಿ
ಜಾತಕದ ಮಂಗಳ ದೋಷವು ಜೀವನದಲ್ಲಿ ಯಶಸ್ಸಿಗೆ ಕಾರಣವಾಗುವುದಿಲ್ಲ. ಅದೇ ಸಮಯದಲ್ಲಿ ಅದೃಷ್ಟವೂ ಮಿತವಾಗುತ್ತದೆ. ಕೇಸರಿ ಇದನ್ನು ತೊಡೆದು ಹಾಕಲು ಪ್ರಯೋಜನಕಾರಿಯಾಗಿದೆ. ಮಂಗಳ ದೋಷಗಳಿಂದ ಬಳಲುತ್ತಿರುವವರು ಕೆಂಪು ಶ್ರೀಗಂಧ(Sandalwood) ಮತ್ತು ಕೇಸರಿಯನ್ನು ಮಿಶ್ರಣ ಮಾಡಿ ಹನುಮಂತನಿಗೆ ತಿಲಕವನ್ನು ಹಚ್ಚಿ.
37
ಆರ್ಥಿಕ ನಿರ್ಬಂಧಗಳನ್ನು ನಿವಾರಿಸಲು ಕೇಸರಿ
ಜಾತಕದಲ್ಲಿ ಪಿತೃ ದೋಷವು ಹಣಕಾಸಿನ ಅಡಚಣೆಗಳನ್ನು ಉಂಟುಮಾಡುತ್ತದೆ ಮತ್ತು ಜೀವನದಲ್ಲಿ ಅನೇಕ ತೊಂದರೆಗಳನ್ನು(problems in life) ಉಂಟುಮಾಡುತ್ತದೆ. ಸಮಸ್ಯೆಗಳನ್ನು ನಿವಾರಣೆ ಮಾಡಲು ನೀವು ಅನೇಕ ಉಪಾಯಗಳನ್ನು ಮಾಡಿ ಸೋತಿರಬಹುದು.
47
ಕೇಸರಿ ಹಣಕಾಸಿನ ಸಮಸ್ಯೆಗಳನ್ನು ತೆಗೆಯುವಲ್ಲಿ ವಿಶೇಷ ಪಾತ್ರ ವಹಿಸುತ್ತದೆ. ಚತುರ್ದಶಿ ಅಥವಾ ಅಮಾವಾಸ್ಯೆಯ ದಿನ ಮನೆಯ ನೈಋತ್ಯ ದಿಕ್ಕಿನಲ್ಲಿ ಕೇಸರಿಗೆ ಸೂರ್ಯನ ಬೆಳಕನ್ನು ತೋರಿಸಿ. ಇದು ದೇವರನ್ನು ಸಂತೋಷಪಡಿಸುತ್ತದೆ. ಇದರಿಂದ ಆರ್ಥಿಕ ಸಂಕಷ್ಟ(Financial Problem) ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.
57
ಲಕ್ಷ್ಮೀ ದೇವಿಯ ಶುಕ್ರವಾರದಂದು ಮಾತಾ ಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ಕಮಲದ ಹೂವನ್ನು ಅರ್ಪಿಸುವುದು ತುಂಬಾ ಉತ್ತಮ.
ಹಣ(Money)ಕ್ಕಾಗಿ ಕೇಸರಿ
ಜಾತಕದಲ್ಲಿ ಶುಕ್ರ ದುರ್ಬಲವಾಗಿರುವ ಮಹಿಳೆಯರಿಗೆ ಜೀವನದಲ್ಲಿ ಸಾಕಷ್ಟು ಗೌರವ ಮತ್ತು ಸಂಪತ್ತು ಸಿಗುವುದಿಲ್ಲ. ಈ ಸಂದರ್ಭದಲ್ಲಿ, ಕೇಸರಿ ಅದನ್ನು ತೆಗೆದುಹಾಕಲು ಪ್ರಯೋಜನಕಾರಿಯಾಗಿದೆ. ಮಹಿಳೆಯರು ಸುಮಂಗಲಿ ವಸ್ತುಗಳ ಜೊತೆಗೆ ಕೇಸರಿಯನ್ನು ದಾನ ಮಾಡಬೇಕು.
67
ಪತಿ-ಪತ್ನಿ ಸಂಬಂಧವನ್ನು ಬಲಪಡಿಸಲು ಕೇಸರಿ
ಗಂಡ-ಹೆಂಡತಿಯ ನಡುವೆ ವಿವಾದವಿದ್ದರೆ ಹಾಲಿಗೆ ಕೇಸರಿ ಸೇರಿಸಿ ಪೇಸ್ಟ್ (saffron paste)ತಯಾರಿಸಿ ಅದರ ಗಂಧವನ್ನು ನಿತ್ಯವೂ ಹಣೆ, ಹೊಕ್ಕಳು ಮತ್ತು ಗಂಟಲಿಗೆ ಹಚ್ಚಿ. ಈ ಕೇಸರಿ ಗಂಡ-ಹೆಂಡತಿ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ. ಇಬ್ಬರ ನಡುವಿನ ವಿವಾದ ದೂರವಾಗುತ್ತದೆ.
77
ಅದೃಷ್ಟ(Luck)ವನ್ನು ಬಲಪಡಿಸಲು ಕೇಸರಿ ಅದೃಷ್ಟ ಕೈ ಹಿಡಿಯದಿದ್ದರೆ ಪ್ರತಿದಿನ ಸ್ನಾನ ಮಾಡಿದ ನಂತರ ಶುದ್ಧ ಕೇಸರಿ ತಿಲಕವನ್ನು ಹಚ್ಚಿ. ಹೀಗೆ ಮಾಡುವುದರಿಂದ ಶಿವ, ವಿಷ್ಣು ಮತ್ತು ತಾಯಿ ಲಕ್ಷ್ಮಿ ಸಂತೋಷಗೊಳ್ಳುತ್ತಾರೆ. ಅದರ ನಂತರ ಅದೃಷ್ಟವು ಬರಲು ಪ್ರಾರಂಭಿಸುತ್ತದೆ.