ಮಕ್ಕಳ ಮತ್ತು ದೊಡ್ಡವರ ಮೇಲಿನ ಕೆಟ್ಟದೃಷ್ಟಿ ನಿವಾರಿಸಲು ಸ್ನಾನ ಮಾಡಿಸುವ ಸರಳ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಈ ವಿಧಾನವನ್ನು ಅಜ್ಜಿಯಂದಿರು ಇಂದಿಗೂ ಅನುಸರಿಸುತ್ತಾರೆ. ಈ ವಿಧಾನದಲ್ಲಿ ಮನೆಯಲ್ಲಿನ ಕೆಲ ಪದಾರ್ಥಗಳನ್ನು ಬಳಸಬೇಕಾಗುತ್ತದೆ.
ಮಕ್ಕಳ ಮೇಲೆ ಕೆಟ್ಟದೃಷ್ಟಿ ಆಗಿದೆ ಎಂದು ಮನೆಯಲ್ಲಿ ಹೇಳುತ್ತಿರುತ್ತಾರೆ. ಕೆಲವರು ಇದನ್ನು ಮೂಢನಂಬಿಕೆ ಅಂದ್ರೆ ಬಹುತೇಕರು ಇದು ನಂಬಿಕೆ ಅಂತಾರೆ. ಇಂದಿಗೂ ಮಕ್ಕಳ ಆರೋಗ್ಯದಲ್ಲಿ ಏರುಪೇರು ಆದ್ರೆ ಪೋಷಕರು ಆಸ್ಪತ್ರೆ ಜೊತೆ ದೃಷ್ಟಿದೋಷ ತೆಗೆಯುತ್ತಾರೆ. ಆದ್ರೆ ಕ್ರಮಬದ್ಧವಾಗಿ ಹೇಗೆ ದೃಷ್ಟಿ ತೆಗೆಸಬೇಕೆಂದು ಹೇಳುತ್ತಿದ್ದೇವೆ.
25
ಕೆಟ್ಟದೃಷ್ಟಿ
ಇಂದಿಗೂ ಗ್ರಾಮೀಣ ಭಾಗದಲ್ಲಿ ಎಷ್ಟೋ ಜನರ ಈ ಪದ್ದತಿಯನ್ನು ಅನುಸರಿಸುತ್ತಾರೆ. ಈ ಪದ್ದತಿಯಿಂದ ಯಾರಿಗೂ ಯಾವುದೇ ರೀತಿಯಲ್ಲಿ ತೊಂದರೆ ಆಗಲ್ಲ. ನಿಮ್ಮ ಮನೆಯಲ್ಲಿಯೇ ಸರಳ ವಿಧಾನಗಳಿಂದ ಮಕ್ಕಳ ದೃಷ್ಟಿ ತೆಗೆಯಬಹುದು. ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೆ ಈ ವಿಧಾನಗಳ ಮೂಲಕ ಕೆಟ್ಟದೃಷ್ಠಿಯನ್ನು ನಿವಾರಣೆ ಮಾಡಬಹುದು.
35
ದೃಷ್ಠಿ ನಿವಾರಣೆಗೆ ಬೇಕಾಗುವ ಸಾಮಾಗ್ರಿಗಳು
ಒಂದು ಪ್ಲೇಟ್‌ನಲ್ಲಿ ನಾಲ್ಕರಿಂದ ಐದು ಟೀ ಸ್ಪೂನ್‌ನಷ್ಟು ಕಲ್ಲುಪ್ಪು ಹಾಕಿಕೊಳ್ಳಿ. ಈ ಪ್ಲೇಟ್‌ಗೆ 1 ಟೀ ಸ್ಪೂನ್ ಅರಿಶಿನ, 2 ಟೀ ಸ್ಪೂನ್ ತೆಂಗಿನಎಣ್ಣೆ, 4 ರಿಂದ 5 ತುಳಸಿ ಎಲೆ, ಐದಾರು ಗುಲಾಬಿ ಹೂವಿನ ದಳಗಳನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಒಂದು ಬಕೆಟ್‌ಗೆ ಬಿಸಿನೀರು ಹಾಕಿಕೊಳ್ಳಬೇಕು. ಈ ಬಿಸಿನೀರಿಗೆ ಕಲ್ಲುಪ್ಪು, ಅರಿಶಿನ, ಗುಲಾಬಿ, ತುಳಸಿ ಎಲೆ, ತೆಂಗಿನಎಣ್ಣೆ ಮಿಶ್ರಣವನ್ನು ಸೇರಿಸಿಕೊಳ್ಳಿ. ಈ ಎಲ್ಲವನ್ನು ಬಿಸಿನೀರಿನಲ್ಲಿ ಸೇರಿಸಿಕೊಂಡು ಮಕ್ಕಳಿಗೆ ಸ್ನಾನ ಮಾಡಿಸಿ. ಈ ವಸ್ತುಗಳಲ್ಲಿರುವ ಸಕಾರಾತ್ಮಕ ಶಕ್ತಿಯು ಮಕ್ಕಳ ಮೇಲಾಗಿರುವ ದೃಷ್ಟಿಯನ್ನು ನಿವಾರಿಸುತ್ತದೆ ಎಂದು ಹಿರಿಯರು ಹೇಳುತ್ತಾರೆ.
55
ಈ ವಿಷಯ ಗಮನದಲ್ಲಿರಲಿ!
ಈ ವಿಶೇಷವಾದ ನೀರಿನಿಂದ ಸ್ನಾನವನ್ನು ಮಕ್ಕಳಿಂದ ದೊಡ್ಡವರು ಸಹ ಮಾಡಬಹುದು. ಸ್ನಾನ ಮಾಡುವ ಸಮಯದಲ್ಲಿ ಮಕ್ಕಳು ಧರಿಸಿದ್ದ ಬಟ್ಟೆಯನ್ನು ಮರುಬಳಕೆ ಮಾಡುತ್ತಿದ್ದರೆ ಅವುಗಳನ್ನು ಬಿಸಿನೀರಿನಲ್ಲಿ ತೊಳೆದು ಶುಚಿ ಮಾಡಿಕೊಳ್ಳಿ. ಇಲ್ಲವಾದ್ರೆ ಆ ಬಟ್ಟೆಯನ್ನು ಬಳಸದೇ ಎಸೆಯಿರಿ.