ಮೀನ ರಾಶಿಯಲ್ಲಿ ಶನಿ: ಮುಂದಿನ 218 ದಿನ ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ!

Published : Oct 28, 2026, 12:34 PM IST

ಮೀನ ರಾಶಿಯಲ್ಲಿ ಶನಿಯ ಸಂಚಾರದಿಂದ 3 ರಾಶಿಯವರಿಗೆ ಆರ್ಥಿಕ ಹಾಗೂ ವೃತ್ತಿಪರ ಜೀವನದಲ್ಲಿ ಭರ್ಜರಿ ಲಾಭ ಸಿಗಲಿದೆ. ಈ ಮೂರು ರಾಶಿಯವರ ನಿಂತುಹೋದ ಕೆಲಸಗಳು ಶುರುವಾಗಿ, ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ.

PREV
14
ಆರ್ಥಿಕ, ವೃತ್ತಿಪರ ಜೀವನದಲ್ಲಿ ಭರ್ಜರಿ ಲಾಭ

ಜ್ಯೋತಿಷ್ಯ ಶಾಸ್ತ್ರದಲ್ಲಿ ನ್ಯಾಯದೇವ ಎಂದೇ ಕರೆಯುವ ಶನಿ ಗ್ರಹ ಈಗ ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಶನಿಯ ಈ ಚಲನೆಯಿಂದ ಮುಂದಿನ ದಿನಗಳಲ್ಲಿ ಮೂರು ರಾಶಿಯವರಿಗೆ ಆರ್ಥಿಕವಾಗಿ ಹಾಗೂ ವೃತ್ತಿಪರ ಜೀವನದಲ್ಲಿ ಭರ್ಜರಿ ಲಾಭ ಸಿಗಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂಬುದರ ಮಾಹಿತಿಯನ್ನು ಈ ಲೇಖನ ಹೊಂದಿದೆ.

24
ವೃಷಭ ರಾಶಿ: ಹೊಸ ಮಾರ್ಗ, ಆತ್ಮವಿಶ್ವಾಸದ ಹೆಚ್ಚಳ

ಶನಿ ಸಂಚಾರದಿಂದ ವೃಷಭ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಹೊಸ ದಾರಿಗಳು ತೆರೆದುಕೊಳ್ಳಲಿವೆ. ಕೆಲಸ ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗಲಿದೆ. ವ್ಯಾಪಾರಸ್ಥರಿಗೆ ಲಾಭ ಹೆಚ್ಚಾಗಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ನೀವು ಹೊಸ ಜವಾಬ್ದಾರಿಗಳನ್ನು ಆತ್ಮವಿಶ್ವಾಸದಿಂದ ನಿಭಾಯಿಸುತ್ತೀರಿ. ಕುಟುಂಬದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳ ಕನಸು ನನಸಾಗಲಿದೆ.

34
ತುಲಾ ರಾಶಿ: ಯಶಸ್ಸು ಮತ್ತು ನೆಮ್ಮದಿ

ಶನಿಯ ಸಂಚಾರ ತುಲಾ ರಾಶಿಯವರಿಗೆ ಅದೃಷ್ಟ ತರಲಿದೆ. ಹಿಂದೆ ನಿಂತುಹೋಗಿದ್ದ ಕೆಲಸಗಳು ಮತ್ತೆ ಶುರುವಾಗುತ್ತವೆ. ವಿರೋಧಿಗಳು ತೊಂದರೆ ಕೊಡಲು ಪ್ರಯತ್ನಿಸಿದರೂ ಕೊನೆಗೆ ಅವರಿಗೇ ಸೋಲಾಗುತ್ತದೆ. ಕೋರ್ಟ್ ಕೇಸ್ ಮತ್ತು ವಿವಾದಗಳು ನಿಮ್ಮ ಪರವಾಗಿ ಬಗೆಹರಿಯುತ್ತವೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ದೊಡ್ಡ ಯಶಸ್ಸು ಸಾಧಿಸುತ್ತಾರೆ. ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

44
ಮಕರ ರಾಶಿ: ಆದಾಯ ಮೂಲ ಹೆಚ್ಚಳ

ಮಕರ ರಾಶಿಗೆ ಶನಿದೇವನೇ ಅಧಿಪತಿ. ಹಾಗಾಗಿ ಈ ಸಮಯ ನಿಮಗೆ ತುಂಬಾ ಒಲಿದು ಬರಲಿದೆ. ಹೊಸ ಆದಾಯದ ಮೂಲಗಳು ನಿಮಗೆ ಸಿಗಲಿವೆ. ಹಿಂದೆ ಬರಬೇಕಿದ್ದ ಹಳೆಯ ಬಾಕಿ ಹಣ ಕೈ ಸೇರುತ್ತದೆ. ಸಮಾಜದಲ್ಲಿ ದೊಡ್ಡವರ ಪರಿಚಯ ನಿಮ್ಮ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸರ್ಕಾರಿ ಕೆಲಸಗಳಲ್ಲಿರುವ ಅಡೆತಡೆಗಳು ದೂರವಾಗುತ್ತವೆ. ಉದ್ಯೋಗಿಗಳಿಗೆ ಮೇಲಧಿಕಾರಿಗಳ ಬೆಂಬಲ ಸಿಕ್ಕು ಪ್ರಮೋಷನ್ ಹಾಗೂ ಪ್ರಮುಖ ಜವಾಬ್ದಾರಿಗಳು ಸಿಗುವ ಸಾಧ್ಯತೆಗಳಿವೆ

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

Read more Photos on
click me!

Recommended Stories