ಸೌಂದರ್ಯವತಿ, ರೂಪವತಿ ಹೆಂಡತಿ ಬೇಕೆಂದು ಬಯಸೋ ಗಂಡನಿಂದ ಹೆಣ್ಣು ಬಯಸೋದು ಏನು?

First Published | Jul 24, 2023, 5:22 PM IST

ಆಚಾರ್ಯ ಚಾಣಕ್ಯನು ಮಹಾನ್ ವ್ಯಕ್ತಿತ್ವವಾಗಿದ್ದು, ಅವರು ತಮ್ಮ ಪಾಂಡಿತ್ಯ, ಬುದ್ಧಿವಂತಿಕೆ ಮತ್ತು ಸಾಮರ್ಥ್ಯದ ಬಲದಿಂದ ಭಾರತೀಯ ಇತಿಹಾಸವನ್ನೇ ಬದಲಾಯಿಸಿದರು. ಮೌರ್ಯ ಸಾಮ್ರಾಜ್ಯದವರಾಗಿದ್ದ ಆಚಾರ್ಯ ಚಾಣಕ್ಯನು ನುರಿತ ರಾಜಕಾರಣಿ, ಬುದ್ಧಿವಂತ ರಾಜತಾಂತ್ರಿಕ, ಪ್ರಸಿದ್ಧ ಅರ್ಥಶಾಸ್ತ್ರಜ್ಞನಾಗಿಯೂ ಹೆಸರುವಾಸಿಯಾಗಿದ್ದರು.
 

ಶತಮಾನಗಳ ನಂತರವೂ, ಚಾಣಕ್ಯನು ರೂಪಿಸಿದ ತತ್ವಗಳು ಮತ್ತು ನೀತಿಗಳು ಇಂದಿಗೂ ಪ್ರಸ್ತುತ ಎಂದಾದರೆ, ಅದಕ್ಕೆ ಕಾರಣ ಅವರು ತಮ್ಮ ಆಳ ಅಧ್ಯಯನ, ಚಿಂತನೆ ಮತ್ತು ಜೀವನ ಅನುಭವಗಳಿಂದ ಪಡೆದ ಅಮೂಲ್ಯ ಜ್ಞಾನವನ್ನು ಮಾನವ ಕಲ್ಯಾಣದ ಉದ್ದೇಶಕ್ಕಾಗಿ ಸಂಪೂರ್ಣವಾಗಿ ನಿಸ್ವಾರ್ಥವಾಗಿ ವ್ಯಕ್ತಪಡಿಸಿದ್ದಾರೆ.
 

"ಚಾಣಕ್ಯ ನೀತಿ" ಆಚಾರ್ಯ ಚಾಣಕ್ಯನ ನೀತಿಗಳ (Chanakya Niti) ಅದ್ಭುತ ಸಂಗ್ರಹ. ಇದು ಎರಡು ಸಾವಿರದ ನಾಲ್ಕು ನೂರು ವರ್ಷಗಳ ಹಿಂದೆ ಬರೆಯಲ್ಪಟ್ಟಾಗ ಎಷ್ಟು ಪ್ರಸ್ತುತವಾಗಿದೆಯೋ, ಇಂದಿಗೂ ಪ್ರಸ್ತುತವಾಗಿದೆ. ಮನುಷ್ಯನ ಜೀವನದ ಪ್ರತಿಯೊಂದು ಘಟ್ಟದಲ್ಲೂ ಇದು ಪ್ರಸ್ತುತ.
 

Tap to resize

ಚಾಣಕ್ಯನ ನೀತಿಯು ಸ್ನೇಹಿತರು ಮತ್ತು ಶತ್ರುಗಳ ಗುರುತನ್ನು, ಗಂಡಂದಿರು ಮತ್ತು ಚಾರಿತ್ರ್ಯಹೀನ ಮಹಿಳೆಯರ ನಡುವಿನ ವ್ಯತ್ಯಾಸವನ್ನು, ರಾಜನ ಕರ್ತವ್ಯ ಮತ್ತು ಜನರ ಹಕ್ಕುಗಳು ಮತ್ತು ಜಾತಿ ವ್ಯವಸ್ಥೆಯನ್ನು ಸರಿಯಾಗಿ ನಿರ್ಣಯಿಸುತ್ತದೆ. ಮಹಾಪಂಡಿತ ಆಚಾರ್ಯ ಚಾಣಕ್ಯನ 'ಚಾಣಕ್ಯ ನೀತಿ'ಯಲ್ಲಿ ಒಟ್ಟು ಹದಿನೇಳು ಅಧ್ಯಾಯಗಳಿವೆ, ಅವುಗಳಲ್ಲಿ ಪತಿ -ಪತ್ನಿ ಬಗ್ಗೆ ಏನು ಹೇಳಲಾಗಿದೆ ನೋಡೋಣ. 
 

ಆಚಾರ್ಯ ಚಾಣಕ್ಯನು ಜೀವನವನ್ನು ಸುಧಾರಿಸಲು ಅನೇಕ ಸಲಹೆಗಳನ್ನು ನೀಡಿದ್ದಾನೆ. ಚಾಣಕ್ಯ ನೀತಿಯ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಜೀವನ ಸಂಗಾತಿಗೆ (life partner) ಹೆಚ್ಚಿನ ಪ್ರಾಮುಖ್ಯತೆ ಇದೆ. ಮಹಿಳೆಯರು ಮತ್ತು ಪುರುಷರು ತಮಗಾಗಿ ಉತ್ತಮ ಜೀವನ ಸಂಗಾತಿಯನ್ನು ಹುಡುಕಲು ಪ್ರಯತ್ನಿಸುತ್ತಾರೆ. ಆದರೆ ಮಹಿಳೆಯರಿಗೆ ತಮ್ಮ ಜೀವನ ಸಂಗಾತಿ ಎಂತವನಿರಬೇಕು?
 

ಚಾಣಕ್ಯನು ಸ್ವತಃ ತನ್ನ ನೀತಿಗಳಲ್ಲಿ ಮಹಿಳೆಯರಿಗೆ ಯಾವ ರೀತಿಯ ಜೀವನ ಸಂಗಾತಿ ಬೇಕು ಎಂದು ಉಲ್ಲೇಖಿಸಿದ್ದಾನೆ. ಆಚಾರ್ಯ ಚಾಣಕ್ಯನು ಪುರುಷರಲ್ಲಿ ಕೆಲವು ಗುಣಗಳಿವೆ, ಮಹಿಳೆಯರು ಆ ಗುಣಗಳನ್ನು ನೋಡಿ ಪುರುಷರತ್ತ ಆಕರ್ಷಿತರಾಗುತ್ತಾರೆ. ಅಂತಹ ಪುರುಷನನ್ನು ಪಡೆಯಲು ಅವಳು ಹೆಚ್ಚಿನ ಪ್ರಯತ್ನ ಮಾಡುತ್ತಾಳೆ. ಹಾಗಾಗಿ ಪ್ರತಿಯೊಬ್ಬ ಮಹಿಳೆ ತನ್ನ ಸಂಗಾತಿಯು ಈ ಮೂರು ಗುಣಗಳನ್ನು ಹೊಂದಬೇಕೆಂದು ಬಯಸುತ್ತಾಳೆ.
 

ಶಾಂತ ಸ್ವಭಾವ ಮತ್ತು ಬಲವಾದ ಧ್ವನಿ
ಆಚಾರ್ಯ ಚಾಣಕ್ಯನು ಹೇಳುವಂತೆ, ಯಾವುದೇ ವ್ಯಕ್ತಿಯ ಮಾತಿನ ಧಾಟಿಯು ಅವನು ಯಾವ ರೀತಿಯ ವ್ಯಕ್ತಿ ಮತ್ತು ಅವನು ಮೌಲ್ಯಗಳನ್ನು ಹೇಗೆ ಸ್ವೀಕರಿಸಿದ್ದಾನೆ ಎಂದು ಹೇಳುತ್ತದೆ. ಮಹಿಳೆಯರು ಶಾಂತ ಮತ್ತು ಬಲವಾದ ಧ್ವನಿ ಹೊಂದಿರುವ ಪುರುಷರನ್ನು ಇಷ್ಟಪಡುತ್ತಾರೆ.

ಶಾಂತ ಸ್ವಭಾವದ ಪುರುಷರು ಗಂಭೀರ ವ್ಯಕ್ತಿತ್ವದವರು ಮತ್ತು ಜ್ಞಾನಿಗಳು ಎಂದು ನಂಬಲಾಗಿದೆ. ಅವರು ಯಾರೊಂದಿಗೂ ಕೆಟ್ಟದಾಗಿ ವರ್ತಿಸುವುದಿಲ್ಲ ಮತ್ತು ಮಹಿಳೆಯರನ್ನು ಗೌರವಿಸುತ್ತಾರೆ (respect women). ಅದೇ ಸಮಯದಲ್ಲಿ, ಅವರು ತಮ್ಮ ಧ್ವನಿಯಿಂದಾಗಿಯೇ ಎಲ್ಲೆಡೆ ಪ್ರಭಾವ ಬೀರುತ್ತಾರೆ.

ವ್ಯಕ್ತಿತ್ವವೂ ಮುಖ್ಯ
ಆಚಾರ್ಯ ಚಾಣಕ್ಯನು ಮಹಿಳೆಯರು ಮತ್ತು ಪುರುಷರು ಇಬ್ಬರೂ ತಮ್ಮ ಸಂಗಾತಿ ಸುಂದರವಾಗಿರಬೇಕೆಂದು ಬಯಸುತ್ತಾರೆ, ಆದರೆ ಮಹಿಳೆಯರು ಸೌಂದರ್ಯಕ್ಕಿಂತ ವ್ಯಕ್ತಿತ್ವವನ್ನು (personality) ಹೆಚ್ಚು ಗೌರವಿಸುತ್ತಾರೆ ಎಂದು ನಂಬುತ್ತಾರೆ.

ಮಹಿಳೆಯರು ಸ್ವಭಾವತಃ ಅಹಂಕಾರಿ, ಕುತಂತ್ರಿ ಅಥವಾ ದುರಾಸೆ ಜನರಿಂದ ದೂರವಿರಲು ಬಯಸುತ್ತಾರೆ. ಇವರು ಹೆಚ್ಚಾಗಿ ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮಿ ಪುರುಷರನ್ನು (hard working men) ಬಯಸುತ್ತಾರೆ. ಅಂತಹ ಜನರು ಎಲ್ಲಾ ತೊಂದರೆಗಳನ್ನು ಎದುರಿಸುತ್ತಾರೆ ಎನ್ನುವ ನಂಬಿಕೆ ಮಹಿಳೆಯರಿಗಿದೆ ಎಂದು ಚಾಣಕ್ಯ ಹೇಳುತ್ತಾನೆ. 

ಉತ್ತಮ ಕೇಳುಗ (good listener)
ಆಚಾರ್ಯ ಚಾಣಕ್ಯನ ಪ್ರಕಾರ, ತನ್ನ ಸಂಗಾತಿಯು ತನ್ನ ಪ್ರತಿಯೊಂದು ಸಣ್ಣ ವಿಷಯವನ್ನೂ ಆಲಿಸಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಮಹಿಳೆಯ ಬಯಕೆಯಾಗಿದೆ.ಮಹಿಳೆಯರು ತಮ್ಮ ದುಃಖ ಮತ್ತು ನೋವನ್ನು ತಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳುವ ಮೂಲಕ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾರೆ. ಅದೇ ಸಮಯದಲ್ಲಿ, ಮಹಿಳೆಯರು ಯಾವಾಗಲೂ ತಮ್ಮನ್ನು ಬೆದರಿಸುವ ಪುರುಷರಿಂದ ದೂರವಿರಲು ಬಯಸುತ್ತಾರೆ.

Latest Videos

click me!