ಅಮೆರಿಕದಲ್ಲಿ ತಲೆ ಎತ್ತಲಿದೆ ಕಾಲಭೈರವೇಶ್ವರ ದೇಗುಲ, ನಿರ್ಮಲಾನಂದ ಶ್ರೀಗಳಿಂದ ಕಾಮಗಾರಿ ವೀಕ್ಷಣೆ

First Published | Jul 22, 2023, 3:43 PM IST

ಅಮೆರಿಕದ ನ್ಯೂ ಜೆರ್ಸಿಯ ಫ್ರ್ಯಾಂಕ್ಲಿನ್ ಟೌನ್ ಶಿಪ್‌ನಲ್ಲಿ  ಕಾಲಭೈರವೇಶ್ವರ ದೇಗುಲ ನಿರ್ಮಾಣ ಆಗಲಿದ್ದು, ಅಮೆರಿಕ ಪ್ರವಾಸ ಕೈಗೊಂಡಿರುವ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು  ಕಾಮಗಾರಿಯನ್ನು ವೀಕ್ಷಣೆ ಮಾಡಿದ್ದಾರೆ.

ಅಮೇರಿಕದಲ್ಲಿ 80 ಕೋಟಿ ರೂ ವೆಚ್ಚದ ಕಾಲಭೈರವೇಶ್ವರ ದೇಗುಲ  ತಲೆ ಎತ್ತಲಿದ್ದು, ನಿರ್ಮಲಾನಂದ ಶ್ರೀಗಳಿಂದ ಕಾಮಗಾರಿ ಪರಿಶೀಲನೆ ನಡೆದಿದೆ.

ಅಮೆರಿಕದ ನ್ಯೂ ಜೆರ್ಸಿಯ ಫ್ರ್ಯಾಂಕ್ಲಿನ್ ಟೌನ್ ಶಿಪ್‌ನಲ್ಲಿ ಕಾಲಭೈರವೇಶ್ವರ ದೇಗುಲ ನಿರ್ಮಾಣ ಆಗಲಿದ್ದು, ಮಾದರಿಯನ್ನು ತಯಾರಿಸಲಾಗಿದೆ.

Tap to resize

ಶ್ರೀ ಆದಿ ಚುಂಚನಗಿರಿ ಮಠದ ವತಿಯಿಂದ 80 ಕೋಟಿ ರೂ ವೆಚ್ಚದಲ್ಲಿ ಈ ದೇವಾಲಯ ನಿರ್ಮಾಣ ಆಗಲಿದ್ದು, ಮಠದ ಸ್ವಾಮೀಜಿ ನಿರ್ಮಲಾನಂದ ಅವರು ಕಾಮಗಾರಿಯನ್ನ ಪರಿಶೀಲಿಸಿದ್ದಾರೆ.

ಆದಿ ಚುಂಚನಗಿರಿ ಮಹಾಸಂಸ್ಥಾನ ಈ ಟೌನ್ಶಿಪ್ ನಲ್ಲಿ 20 ಎಕರೆ ಜಮೀನು ಖರೀದಿಸಿದೆ. ದೇಗುಲ ಕಾಮಗಾರಿ ಪರಿಶೀಲನೆಗಾಗಿಯೇ ಅವರು ಸ್ವಾಮೀಜಿ ಅಮೇರಿಕ ಪ್ರವಾಸ ಕೈಗೊಂಡಿದ್ದಾರೆ.

ನ್ಯೂ ಜೆರ್ಸಿಯ ಫ್ರ್ಯಾಂಕ್ಲಿನ್ ಟೌನ್ ಶಿಪ್‌ನಲ್ಲಿ ನಿರ್ಮಾಣ ಆಗುತ್ತಿರುವ 5000 ಚದರ ಮೀಟರ್ ಕಟ್ಟಡದಲ್ಲಿ ಯೋಗ, ಧ್ಯಾನ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳ ಕಟ್ಟಡ ನಿರ್ಮಾಣ ಉದ್ದೇಶ ಹೊಂದಿದೆ.

ಮೊದಲ ಹಂತದಲ್ಲಿ ದೇವಾಲಯ, ಅರ್ಚಕರ ನಿವಾಸ ನಿರ್ಮಾಣವಾಗಲಿದೆ. ಡಾ. ಅಮರನಾಥಗೌಡ, ಡಾ. ಬಾಬು ಕಿಲಾರ ಅವರ ಮುಂದಾಳತ್ವದಲ್ಲಿ ಈ ಕಾಮಗಾರಿಗಳು ಆರಂಭವಾಗಿವೆ.

ಸುಮಾರು 10 ಮಿಲಿಯನ್ ಡಾಲರ್ (80 ಕೋಟಿ ರೂ.) ಮೊತ್ತದ ಯೋಜನೆ ಇದಾಗಿದೆ. ಕಿಲಾರ ಅವರು ದೇವಾಲಯದ ವಿನ್ಯಾಸ, ಪರಿಸರ ಇಲಾಖೆ ಅನುಮತಿ ಮತ್ತು ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
 

Latest Videos

click me!