ಮುಂಬರುವ ಮೂರು ವರ್ಷ, ಈ ರಾಶಿಗಳ ಜನರ ಮೇಲಿರುತ್ತೆ ಶನಿ ದೃಷ್ಟಿ

First Published | Dec 2, 2022, 12:49 PM IST

ಶನಿದೇವನ ರಾಶಿಯ ಬದಲಾವಣೆಯೊಂದಿಗೆ, ಶನಿಯ ಸಮಯ ಕೆಲವು ರಾಶಿಗಳಿಂದ ಪ್ರಾರಂಭವಾಗುತ್ತೆ. ಶನಿ ಸಾಡೇ ಸಾತ್ ಸಮಯದಲ್ಲಿ, ಈ  ರಾಶಿಯ ಜಾತಕದವರು ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತೆ. ಅವು ಯಾವುವು, ಅದಕ್ಕೆ ಏನು ಪರಿಹಾರ ಎಂದು ಇಲ್ಲಿ ತಿಳಿಯಿರಿ-

ಏಪ್ರಿಲ್ 29, 2022 ರಂದು, ಶನಿದೇವನು ತನ್ನ ಸ್ವಂತ ರಾಶಿ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರಯಾಣಿಸಿದ್ದಾನೆ. ಇದರ ನಂತರ, ಶನಿ ಜುಲೈನಲ್ಲಿ ಮತ್ತೆ ಮಕರ ರಾಶಿಗೆ ಮರಳಿದನು. ಈಗ ಜನವರಿ 17, 2023 ರಂದು, ಶನಿದೇವನು (Shani) ಮತ್ತೆ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅಲ್ಲಿ ಶನಿದೇವನು 29 ಮಾರ್ಚ್ 2025 ರವರೆಗೆ ಇರಲಿದ್ದಾನೆ. ಶನಿಯು ಕುಂಭ ರಾಶಿಗೆ ಆಗಮಿಸಿದ ನಂತರ, ಕೆಲವು ರಾಶಿಚಕ್ರ ಚಿಹ್ನೆಗಳ ಜನರು 2025 ರವರೆಗೆ ಜಾಗರೂಕರಾಗಿರಬೇಕು. ಅವು ಯಾವುವು ನೋಡೋಣ 
 

ಕುಂಭ ರಾಶಿ (Aquaries):

ಏಪ್ರಿಲ್ 29, 2022 ರಂದು, ಶನಿ ಕುಂಭ ರಾಶಿಗೆ ಹೋಗಿದ್ದನು. ನಂತರ ಜೂನ್ 05 ರಂದು, ಶನಿ  ಒಂದೇ ರಾಶಿಯಲ್ಲಿ ಹಿಮ್ಮುಖವಾಗಿದ್ದನು. ಇದರ ನಂತರ, ಜುಲೈ 12 ರಂದು, ಶನಿ ಮಕರ ರಾಶಿಯನ್ನು ಪ್ರವೇಶಿಸಿದನು. ಅಕ್ಟೋಬರ್ 23 ರಂದು, ಶನಿ ಮಕರ ರಾಶಿಯಲ್ಲಿ ಸಂಚರಿಸುತ್ತಿದ್ದನು. 

Tap to resize

ಇನ್ನೂ ಜನವರಿ 17, 2023 ರಂದು, ಶನಿ ಮತ್ತೆ ಕುಂಭರಾಶಿಯಲ್ಲಿ ಸಂಚರಿಸುತ್ತಾನೆ. ಪ್ರಸ್ತುತ, ಶನಿಯ ಸಾಡೇ ಸಾಥ್ (Sade sath) ಕುಂಭ ರಾಶಿಯ ಜನರ ಮೇಲೆ ನಡೆಯುತ್ತಿದೆ. ಕುಂಭ ರಾಶಿಯವರು 2025 ರವರೆಗೆ ಜೀವನದಲ್ಲಿ ಏರಿಳಿತಗಳನ್ನು ನೋಡಬಹುದು. ಫೆಬ್ರವರಿ 23, 2028 ರಂದು ನೀವು ಶನಿಯ ಸಾಡೇ ಸಾಥ್‌ನಿಂದ ಮುಕ್ತಿ ಹೊಂದುತ್ತೀರಿ.

ಮಕರ ರಾಶಿ(Capricorn)-

ಮಕರ ರಾಶಿಗೆ ಶನಿಯ ಸಾಡೇ ಸಾಥ್ ಜನವರಿ 26, 2017 ರಂದು ಪ್ರಾರಂಭವಾಗಿದೆ. ಇದು ಮಾರ್ಚ್ 29, 2025 ರವರೆಗೆ ಇರಲಿದೆ. ಶನಿಯ ಸಾಡೇ ಸಾಥಿನ ಎರಡನೇ ಹಂತ ಮಕರ ರಾಶಿಯಲ್ಲಿ ನಡೆಯುತ್ತಿದೆ. ಶನಿಯ ಸಾಡೇ ಸಾಥಿನಲ್ಲಿ  ಮೂರು ಹಂತಗಳಿವೆ. ಹಾಗಾಗಿ ಮಕರ ರಾಶಿಯವರು ಸ್ವಲ್ಪ ಜಾಗರೂಕರಾಗಿರಬೇಕು. 

ಮೀನ ರಾಶಿ (Pisces Zodiac)-

ಶನಿಯು ಕುಂಭ ರಾಶಿಗೆ ಚಲಿಸಿದರಿಂದ 2022 ರ ಏಪ್ರಿಲ್ 29 ರಂದು ಮೀನ ರಾಶಿಯವರಿಗೆ ಶನಿಯ ಸಾಡೇ ಸತಿ ಪ್ರಾರಂಭವಾಯಿತು. ಇದರ ನಂತರ, ಶನಿ ಮಕರ ರಾಶಿಗೆ ಮತ್ತೆ ಹೋಗಿದ್ದರಿಂದ ಸಾಡೇ ಸಾಥ್ ಮೀನದಿಂದ ಶನಿ ದೂರವಾಯಿತು. ಈಗ ಹೊಸ ವರ್ಷದಲ್ಲಿ ಶನಿ ಕುಂಭ ರಾಶಿಗೆ ಹೋಗುತ್ತಿರೋದರಿಂದ, ಸಾಡೇ ಸಾಥ್ ಮೀನ ರಾಶಿಗೆ ಮತ್ತೆ ಪ್ರಾರಂಭವಾಗಲಿದೆ. ಏಪ್ರಿಲ್ 17, 2030 ರವರೆಗೆ ಶನಿಯ ಸಾಡೇ ಸಾಥ್ ಮೀನ ರಾಶಿಯ ಮೇಲೆ ಇರಲಿದೆ.

ಶನಿಯ ಸಾಡೇ  ಸಾಥಿನಲ್ಲಿ ಮೂರು ಹಂತಗಳಿವೆ-

ಶನಿಯ ಸಾಡೇ ಸಾಥ್ ಮೂರು ಹಂತಗಳನ್ನು ಹೊಂದಿದೆ. ಶನಿಯ ಸಾಡೇ ಸಾಥ್‌ನ ಕೊನೆಯ ಹಂತವು ಮಕರ ರಾಶಿಯ ಮೇಲೆ, ಎರಡನೇ ಹಂತವು ಕುಂಭರಾಶಿಯಲ್ಲಿ ಮತ್ತು ಮೊದಲ ಹಂತವು ಮೀನ ರಾಶಿ ಮೇಲೆ ನಡೆಯಲಿದೆ. ಹಾಗಾಗಿ ಈ ರಾಶಿಯವರು(Zodiac ಏಗುಲ) ಸ್ವಲ್ಪ ಹುಷಾರಾಗಿರಬೇಕು. 

ಈ ಮೂರು ರಾಶಿಯವರು ಯಾವಾಗ ಮುಕ್ತಿಯನ್ನು ಪಡೆಯುತ್ತಾರೆ

ಜನವರಿ 17, 2023 ರಂದು ಧನು ರಾಶಿಯ ಜನರು ಶನಿಯ ಸಾಡೇ ಸತಿಯಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯುತ್ತಾರೆ. ಇದಲ್ಲದೆ, ಮಿಥುನ ಮತ್ತು ತುಲಾ ರಾಶಿಯಿಂದ ಶನಿ ದೃಷ್ಟಿ ಪೂರ್ತಿ ತೆಗೆದುಹಾಕಲಾಗುತ್ತೆ. ಜನವರಿ 17, 2023 ರಿಂದ ಕರ್ಕಾಟಕ ಮತ್ತು ವೃಶ್ಚಿಕ (Scorpio)ರಾಶಿಯಲ್ಲಿ ಶನಿ ಧೈಯಾ ಪ್ರಾರಂಭವಾಗುತ್ತೆ.

Latest Videos

click me!