ರಾಹುಕಾಲದಲ್ಲಿ ಯಾವುದೇ ಶುಭಕಾರ್ಯ ಯಾಕೆ ಮಾಡೋದಿಲ್ಲ ಗೊತ್ತಾ?

First Published Nov 30, 2022, 5:27 PM IST

ನೀವು ಸಾಮಾನ್ಯವಾಗಿ ಹಿರಿಯರು ರಾಹು ಕಾಲದಲ್ಲಿ ಒಳ್ಳೆ ಕೆಲಸ ಮಾಡಬಾರದು ಎಂದು ಹೇಳಿರೋದನ್ನು ಕೇಳಿರಬಹುದು. ಆದರೆ ಎಂದಾದರು ಇದನ್ನು ಯಾಕೆ ಮಾಡಬಾರದು? ರಾಹುಕಾಲವನ್ನು ಕೆಟ್ಟ ಕಾಲ ಎಂದು ಹೇಳೋದು ಯಾಕೆ ಎಂದು ನೀವು ಎಂದಾದರು ಯೋಚನೆ ಮಾಡಿದ್ದೀರಾ? ಇಲ್ಲಾ ಅಂದ್ರೆ ಇದನ್ನ ಓದಿ…

ಯೋಗ, ಮುಹೂರ್ತ ಮತ್ತು ಗ್ರಹಗಳ ನಕ್ಷತ್ರಪುಂಜಗಳ ಜೊತೆಗೆ, ಜ್ಯೋತಿಷ್ಯಶಾಸ್ತ್ರದಲ್ಲಿ ಅನೇಕ ಸಮಯವನ್ನು ಸಹ ಉಲ್ಲೇಖಿಸಲಾಗಿದೆ. ಈ ಅವಧಿಗಳಲ್ಲಿ ಒಂದು ರಾಹುಕಾಲ(Raahu kaal), ಇದನ್ನು ಅತ್ಯಂತ ಕ್ರೂರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯ ಮಾಡಲಾಗೋದಿಲ್ಲ. ಈ ಅವಧಿಯಲ್ಲಿ ಮಾಡಿದ ಕೆಲಸದಲ್ಲಿ ಯಶಸ್ಸು ಸಾಧಿಸಲಾಗೋದಿಲ್ಲ ಎಂಬ ನಂಬಿಕೆ ಇದೆ. ಹಾಗಾಗಿ ಇಲ್ಲಿ ರಾಹುಕಾಲದ ಬಗ್ಗೆ ವಿಶೇಷ ಮಾಹಿತಿಗಳನ್ನು ತಿಳಿಯೋಣ, ರಾಹುಕಾಲ ಎಂದರೇನು ಮತ್ತು ಅದರಲ್ಲಿ ಯಾವುದೇ ಶುಭ ಕೆಲಸವನ್ನು ಯಾಕೆ ಮಾಡಲಾಗೋದಿಲ್ಲ ಎಂದು ತಿಳಿಯೋಣ.

ವೈದಿಕ ಜ್ಯೋತಿಷ್ಯದ ಪ್ರಕಾರ, ರಾಹುವನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗಿದೆ. ಯಾರ ಜಾತಕದಲ್ಲಿ ರಾಹುದೋಷ ಕಂಡುಬರುತ್ತದೆಯೋ ಆ ವ್ಯಕ್ತಿಯು ಮಾನಸಿಕ ಒತ್ತಡದಿಂದ(Mental stress) ಸುತ್ತುವರಿಯಲ್ಪಟ್ಟಿರುತ್ತಾನೆ, ಮತ್ತು ಅವನು ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ, ರಾಹು ಗ್ರಹ ಶಾಂತಿಗಾಗಿ ಅನೇಕ ಪರಿಹಾರಗಳನ್ನು ಸಹ ಹೇಳಲಾಗಿದೆ. ಈ ಕ್ರಮಗಳನ್ನು ಅನುಸರಿಸೋದ್ರಿಂದ, ವ್ಯಕ್ತಿ ರಾಹು ದೋಷದಿಂದ  ಮುಕ್ತಿ ಪಡೆಯುತ್ತಾನೆ ಎಂದು ಹೇಳಲಾಗುತ್ತೆ. ಮಾತೆ ದುರ್ಗಾ(Durga) ಮತ್ತು ಭೈರವ ದೇವನನ್ನು ಪೂಜಿಸೋದರಿಂದ ರಾಹು ಗ್ರಹಕ್ಕೆ ಶಾಂತಿ ತರಬಹುದು. ಇದರೊಂದಿಗೆ, ಈ ಅವಧಿಯನ್ನು ತೊಡೆದುಹಾಕಲು ಯಾವ ರೀತಿಯ ದಾನ ಮಾಡೋದು ಒಳ್ಳೇದು ಎಂದು ಎಲ್ಲಿ ಹೇಳಲಾಗಿದೆ. .

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿದಿನ ಬರುವ ಅಶುಭ(Unlucky) ಮತ್ತು ಅದರ ಮೇಲೆ ರಾಹು ಗ್ರಹದ ನೆರಳನ್ನು ಹೊಂದಿರುವ ಸಮಯವನ್ನು ರಾಹು ಕಾಲ ಎಂದು ಕರೆಯಲಾಗುತ್ತೆ. ಪ್ರತಿ ದಿನ, ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ 8 ನೇ ಭಾಗವು ಅಂದರೆ ಒಂದೂವರೆ ಗಂಟೆಯನ್ನು ರಾಹುಕಾಲ ಎಂದು ಕರೆಯಲಾಗುತ್ತೆ. ಈ ಸಮಯದಲ್ಲಿ ಯಾವುದೇ ಶುಭ ಕೆಲಸವನ್ನು ಮಾಡೋದನ್ನು ನಿಷೇಧಿಸಲಾಗಿದೆ.

ರಾಹುಕಾಲದಲ್ಲಿ ಪ್ರಾರಂಭವಾದ ಕೆಲಸವು ಪೂರ್ಣಗೊಳ್ಳೋದಿಲ್ಲ ಎಂದು ಹೇಳಲಾಗುತ್ತೆ. ಈ ಕಾರಣದಿಂದಾಗಿ, ಜನರು ಮಾಡುವ ಹೊಸ ಕೆಲಸಕ್ಕಾಗಿ ಮುಹೂರ್ತ ನೋಡುವಾಗ ಅಥವಾ ಮದುವೆ-ನಿಶ್ಚಿತಾರ್ಥ(Engagement), ಮನೆ ಪ್ರವೇಶ, ವ್ಯವಹಾರ ಇತ್ಯಾದಿಗಳನ್ನು ಮಾಡುವಾಗ ಈ ಸಮಯವನ್ನು ತಪ್ಪಿಸಲಾಗುತ್ತೆ.
 

ಕೆಟ್ಟದಾಗುತ್ತದೆ ಎನ್ನುವ ಕಾರಣದಿಂದಾಗಿಯೇ, ರಾಹುಕಾಲದಲ್ಲಿ ಯಾವುದೇ ಶುಭ ಅಥವಾ ಹೊಸ ಕೆಲಸವನ್ನು ಮಾಡದಿರೋದನ್ನು ಕಾಣಬಹುದು. ದಿನದ ಯಾವ ಸಮಯದಲ್ಲಿ ರಾಹುಕಾಲ ಅಥವಾ ಯಾವ ಸಮಯದಲ್ಲಿ ಅಲ್ಲ ಎಂಬುದನ್ನು ಪಂಚಾಂಗ ಮತ್ತು ಜ್ಯೋತಿಷ್ಯದ (Astrology) ಪ್ರಕಾರ ಲೆಕ್ಕಹಾಕಲಾಗುತ್ತೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಹುಕಾಲದಲ್ಲಿ, ಮುಖ್ಯವಾಗಿ ಈ ಕೆಳಗಿನ ಕೆಲಸಗಳನ್ನು ಮಾಡಬಾರದು-
ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಮನೆಯೊಳಗೆ ಪ್ರವೇಶಿಸಬೇಡಿ. ಯಾವುದೇ ಹೊಸ ವಸ್ತು ಖರೀದಿಸಬೇಡಿ. ವಾಣಿಜ್ಯ ಸಂಸ್ಥೆ, ಅಂಗಡಿ ಇತ್ಯಾದಿಗಳನ್ನು ಉದ್ಘಾಟಿಸಬೇಡಿ. ಯಾವುದೇ ರೀತಿಯ ಆಸ್ತಿಯನ್ನು ಖರೀದಿಸಬೇಡಿ. ದ್ವಿಚಕ್ರ ವಾಹನ(Two wheeler), ನಾಲ್ಕು ಚಕ್ರ, ತ್ರಿಚಕ್ರ ವಾಹನಗಳು - ಹೀಗೆ ಯಾವುದೇ ರೀತಿಯ ವಾಹನಗಳನ್ನು ಖರೀದಿಸಬೇಡಿ. ಯಾವುದೇ ರೀತಿಯ ಹೊಸ ವ್ಯವಹಾರವನ್ನು ಪ್ರಾರಂಭಿಸಬೇಡಿ.
 

click me!