N ಅಕ್ಷರದಿಂದ ಹೆಸರು ಆರಂಭವಾಗುವ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತೆ?

First Published | Dec 29, 2022, 4:11 PM IST

ಹೆಸರಿನ ಮೊದಲ ಅಕ್ಷರದ ಸಹಾಯದಿಂದ, ನಿಮ್ಮ ವ್ಯಕ್ತಿತ್ವ ಮತ್ತು ನಿಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳು ಬಹಿರಂಗಗೊಳ್ಳುತ್ತವೆ. ಹೆಸರಿನ ಮೊದಲ ಅಕ್ಷರವು ರಾಶಿ, ನಕ್ಷತ್ರಪುಂಜ ಮತ್ತು ಸಂಖ್ಯೆಯನ್ನು ನಿರ್ಧರಿಸಲು ಸಹಾಯ ಮಾಡುತ್ತೆ. ಹಾಗಾಗಿ ಇಲ್ಲಿ N ಅಕ್ಷರದಿಂದ ಹೆಸರು ಆರಂಭವಾಗುವವರು ಹೇಗಿರ್ತಾರೆ ತಿಳಿಯೋಣ.  

ಹೆಸರಿನ ಮೊದಲ ಅಕ್ಷರವು  ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಅದರ ಸಹಾಯದಿಂದ, ವ್ಯಕ್ತಿತ್ವ (Personality) ಮತ್ತು ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳು ಬಹಿರಂಗಗೊಳ್ಳುತ್ತವೆ. ಹೆಸರಿನ ಮೊದಲ ಅಕ್ಷರವು ರಾಶಿ, ನಕ್ಷತ್ರಪುಂಜ ಮತ್ತು ಸಂಖ್ಯೆಯನ್ನು ನಿರ್ಧರಿಸಲು ಸಹಾಯ ಮಾಡುತ್ತೆ. ನಿಮ್ಮ ಹೆಸರಿನ ಮೊದಲ ಅಕ್ಷರದ ಗ್ರಹ ಮತ್ತು ಅದರ ಗುಣಲಕ್ಷಣಗಳ ಬಗ್ಗೆ ತಿಳಿಯೋಣ. 

N ಅಕ್ಷರವು ಸಂಖ್ಯೆ 5 ಅನ್ನು ಪ್ರತಿನಿಧಿಸುತ್ತೆ. ಈ ಸಂಖ್ಯೆಯು ಮುಕ್ತ ಮತ್ತು ಕಾಲ್ಪನಿಕ ವ್ಯಕ್ತಿಯನ್ನು ಪ್ರತಿನಿಧಿಸುತ್ತೆ. ಸಂಖ್ಯೆ 5 ಅನ್ನು ಬುಧ ಗ್ರಹ(Mercury) ಆಳುತ್ತೆ. 
 

Tap to resize

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅನುರಾಧಾ ನಕ್ಷತ್ರವನ್ನು N ಅಕ್ಷರದ ಮೇಲೆ ಪ್ರತಿನಿಧಿಸಲಾಗುತ್ತೆ. ಇದನ್ನು ಶನಿದೇವನು (Shani dev) ಆಳುತ್ತಾನೆ. N ಎಂಬ ಹೆಸರಿನ ಜನರ ರಾಶಿಯು ವೃಶ್ಚಿಕ ಮತ್ತು ಅವರ ಅಧಿಪತಿ ಚಂದ್ರನಾಗಿರುತ್ತಾನೆ.

N ಎಂಬ ಹೆಸರಿನ ಜನರು ಇತರರನ್ನು ಲೆಕ್ಕಿಸದೆ ತಮ್ಮದೇ ಆದ ನಿಯಮಗಳ(Rules) ಮೇಲೆ ಜೀವನ ನಡೆಸಲು ಇಷ್ಟಪಡುತ್ತಾರೆ. ಅವರು ತಮ್ಮ ಬಗ್ಗೆ ಬೇರೆಯವರು ಹೊಗಳುವುದನ್ನು ಕೇಳಲು ಇಷ್ಟಪಡುತ್ತಾರೆ. 

N ಎಂಬ ಹೆಸರಿನ ಜನರು  ಟೀಕೆಗಳನ್ನು ಎದುರಿಸಲು ಕಷ್ಟ ಪಡುತ್ತಾರೆ. ಅವರು ಕಷ್ಟಪಟ್ಟು ಕೆಲಸ ಮಾಡದೆಯೇ ಕೆಲಸ ಮುಗಿಸಲು ಬಯಸುತ್ತಾರೆ. ಸಂಬಂಧಗಳನ್ನು(Relationship) ಹೇಗೆ ನಿರ್ಮಿಸೋದು ಎಂದು ಅವರಿಗೆ ತಿಳಿದಿದೆ. ಅವರು ತಮ್ಮ ಸ್ಪೆಷಲ್ ಜನರೊಂದಿಗೆ ತುಂಬಾ ಪ್ರಾಮಾಣಿಕರಾಗಿರುತ್ತಾರೆ. 

N ಎಂಬ ಹೆಸರಿನ ಜನರು ಯಾವಾಗಲೂ ತಮ್ಮ ವ್ಯಾಪ್ತಿಯ ಹೊರಗೆ ಯೋಚಿಸಲು ಇಷ್ಟಪಡುತ್ತಾರೆ. ಇವರು ಬಹಳ ಮಹತ್ವಾಕಾಂಕ್ಷೆಯುಳ್ಳವರಾಗಿರತ್ತಾರೆ. ನೋಡಲು ಇವರು  ಸುಂದರವಾಗಿ ಮತ್ತು ಸಣ್ಣ(Slim) ಕಾಣುತ್ತಾರೆ. ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸಲು, ಇವರು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕು, ಆಗ ಮಾತ್ರ ಯಶಸ್ಸು ಪಡೆಯಲು ಸಾಧ್ಯವಾಗುತ್ತೆ.

Latest Videos

click me!