ಆನೆಗುಡ್ಡೆ ಗಣೇಶನಿಗೆ ಭಕ್ತರಿಂದ 21 ಸಾವಿರ ತೆಂಗಿನಕಾಯಿ ಸಮರ್ಪಣೆ!

Published : Dec 28, 2022, 05:46 PM IST

ಕುಂದಾಪುರ ತಾಲೂಕಿನಲ್ಲಿರುವ ಆನೆಗುಡ್ಡೆ ಶ್ರೀವಿನಾಯಕ ದೇವಳ ಹೆಸರುವಾಸಿಯಾಗಿರುವ ತೆಂಗಿನಕಾಯಿ ಮೂಡುಗಣಪತಿ ಸೇವೆ ಭಕ್ತರೋರ್ವರ ಹರಕೆ ಹಿನ್ನಲೆಯಲ್ಲಿ 21 ಸಾವಿರ ತೆಂಗಿನಕಾಯಿ ನೈವೇದ್ಯ ಗಣಪನಿಗೆ ಅರ್ಪಣೆ ಪೂಜೆಯ ಬಳಿಕ ಪ್ರಸಾದ ರೂಪದಲ್ಲಿ ನೈವೇದ್ಯ ದ ತೆಂಗಿನಕಾಯಿ ವಿತರಣೆ

PREV
112
ಆನೆಗುಡ್ಡೆ ಗಣೇಶನಿಗೆ ಭಕ್ತರಿಂದ 21 ಸಾವಿರ ತೆಂಗಿನಕಾಯಿ ಸಮರ್ಪಣೆ!

ಕುಂದಾಪುರ ತಾಲೂಕಿನಲ್ಲಿರುವ ಆನೆಗುಡ್ಡೆ ಶ್ರೀವಿನಾಯಕ ದೇವಳದಲ್ಲಿ ಭಕ್ತರೊಬ್ಬರು 21 ಸಾವಿರ ತೆಂಗಿನಕಾಯಿಗಳನ್ನು ಒಡೆಸಿ ಮೂಡುಗಣಪತಿ ಸೇವೆ ಮಾಡಿಸಿದ್ದಾರೆ. 

212

ಇಲ್ಲಿ ನಡೆಯುವ ತೆಂಗಿನಕಾಯಿ ಮೂಡುಗಣಪತಿ ಸೇವೆಯು ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಈ ಬಾರಿ ಹೆಸರನ್ನು ಹೇಳಲಿಚ್ಛಸದ ಭಕ್ತರೊಬ್ಬರು ಲೋಕ ಕಲ್ಯಾಣಕ್ಕಾಗಿ ಈ ಸೇವೆ ಮಾಡಿಸಿದ್ದಾರೆ.

312

ಈ ವಿಶೇಷ ಧಾರ್ಮಿಕ ಸಂಭ್ರಮ ನೋಡಲು ನೂರಾರು ಭಕ್ತರು ಆಗಮಿಸಿದ್ದರು. ಪೂಜೆಯ ಬಳಿಕ ಪ್ರಸಾದ ರೂಪದಲ್ಲಿ ನೈವೇದ್ಯದ ತೆಂಗಿನಕಾಯಿ ವಿತರಣೆ ಮಾಡಲಾಯಿತು. 

412

ಆನೆಗುಡ್ಡೆ ಕ್ಷೇತ್ರವು ಪರಶುರಾಮ ಸೃಷ್ಟಿಯ ಏಳು ಮುಕ್ತಿ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಭಕ್ತರೊಬ್ಬರು ಲೋಕಕಲ್ಯಾಣಾರ್ಥವಾಗಿ 21 ಸಾವಿರ ಈಡುಗಾಯಿ ಸಮರ್ಪಣೆ ಮಾಡಿದ್ದಾರೆ.

512

ಆನೆಗುಡ್ಡೆ ಗ್ರಾಮವು ಉಡುಪಿ ಜಿಲ್ಲೆಯ ಕುಂದಾಪುರದಿಂದ ದಕ್ಷಿಣಕ್ಕೆ 9 ಕಿ.ಮೀ ದೂರದಲ್ಲಿದೆ. ರಾಕ್ಷಸ ಕುಂಭಾಸುರನಿಂದ ಈ ದೇವಾಲಯಕ್ಕೆ ಕುಂಭಾಶಿ ಎಂಬ ಹೆಸರೂ ಬಂದಿದೆ. 

612

ಇತಿಹಾಸದ ಪ್ರಕಾರ, ಈ ಪ್ರದೇಶದಲ್ಲಿ ಬರ ಕಾಣಿಸಿಕೊಂಡಾಗ, ಅಗಸ್ತ್ಯ ಋಷಿ ಮಳೆ ದೇವರಾದ ವರುಣನನ್ನು ಸಮಾಧಾನಪಡಿಸಲು ತಪಸ್ಸು ಮಾಡಿದರು. ತಪಸ್ಸಿನ ಸಮಯದಲ್ಲಿ, ರಾಕ್ಷಸ ಕುಂಭಾಸುರನು ಋಷಿಗಳಿಗೆ ತೊಂದರೆ ಕೊಡಲಾರಂಭಿಸಿದನು. 

712

ಆಗ ಭೀಮಸೇನನು ಈ ಸ್ಥಳದಲ್ಲಿ ಕುಂಭಸುರನನ್ನು ಕೊಲ್ಲಲು ಗಣೇಶನಿಂದ ಆಯುಧವನ್ನು ಪಡೆಯುತ್ತಾನೆ. ಮತ್ತು ಋಷಿಗಳು ಹಾಗೂ ಈ ಭಾಗದಲ್ಲಿ ವಾಸಿಸುವ ಜನರನ್ನು ರಾಕ್ಷಸನ ಉಪಟಳದಿಂದ ಮುಕ್ತಗೊಳಿಸುತ್ತಾನೆ.

812

ಆನೆಗುಡ್ಡೆ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಮುಖ ಹಬ್ಬವಾಗಿದ್ದು, ಸಂಕಷ್ಟ ಚತುರ್ಥಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಪ್ರತಿ ಚಂದ್ರಮಾಸದ ಚೌತಿ/ಚತುರ್ಥಿಯಂದು (ಹುಣ್ಣಿಮೆಯ ನಂತರದ 4ನೇ ದಿನ) ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. 

912

ಪ್ರತಿದಿನ ಬೆಳಿಗ್ಗೆ 6 ಘಂಟೆಯಿಂದ 1.30ರವರೆಗೆ ಹಾಗು 3.00ರಿಂದ ರಾತ್ರಿ 8.30ರ ವರೆಗೆ ದೇವಸ್ಥಾನ ಭಕ್ತರಿಗಾಗಿ ತೆರೆದಿರುತ್ತದೆ. 

1012

ಇಲ್ಲಿನ ಗಣೇಶ ವಿಗ್ರಹವು ಆಕರ್ಷಕವಾಗಿದ್ದು, 12 ಅಡಿ ಎತ್ತರದ ಬೆರಗುಗೊಳಿಸುತ್ತದೆ. ಇಲ್ಲಿ ಗಣೇಶನು ನಿಂತ ರೂಪದಲ್ಲಿದ್ದು 4 ಕೈಗಳನ್ನು ಹೊಂದಿದ್ದಾನೆ. 

1112

ಭಕ್ತರು ಸಕ್ಕರೆ, ತೆಂಗಿನಕಾಯಿ, ಬೆಲ್ಲ, ಅಕ್ಕಿಯನ್ನು ತಮ್ಮ ತೂಕಕ್ಕೆ ಅನುಗುಣವಾಗಿ ತುಲಾಭಾರ ಮಾಡಿಸುತ್ತಾರೆ. ಭಕ್ತರ ಅಪೇಕ್ಷೆಯಂತೆ ವಿಶೇಷ ಯಜ್ಞಗಳಾದ ರಂಗಪೂಜೆ ಅಥವಾ ಗಣಹೋಮವನ್ನು ಸಹ ನಡೆಸಲಾಗುತ್ತದೆ. 

1212

ಅನೇಕರು ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ಸಹ ಬರುತ್ತಾರೆ ಮತ್ತು ಇಲ್ಲಿ ಸಲ್ಲಿಸಿದ ಪ್ರಾರ್ಥನೆಗಳಿಗೆ ಯಾವಾಗಲೂ ಉತ್ತರಿಸಲಾಗುತ್ತದೆ ಎಂದು ನಂಬಲಾಗಿದೆ.

click me!

Recommended Stories