ಹೊಸ ವರ್ಷದ ಮೊದಲ ದಿನ ಸಾಸಿವೆಯನ್ನು ಈ ರೀತಿ ಬಳಸಿದ್ರೆ ವರ್ಷವಿಡೀ ಅದೃಷ್ಟ!

First Published Dec 26, 2022, 3:55 PM IST

ಭಾರತದಲ್ಲಿಯೂ ಹೊಸ ವರ್ಷವನ್ನು ಆಚರಿಸಲಾಗುತ್ತೆ. ಜನರು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಜೀವನದಲ್ಲಿ ಪ್ರಗತಿ, ಸಂತೋಷ ಮತ್ತು ಶಾಂತಿಗಾಗಿ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತಾರೆ. ಅಲ್ಲದೆ, ವರ್ಷದ ಮೊದಲ ದಿನವನ್ನು ಹೊಸ ನಿರ್ಣಯಗಳೊಂದಿಗೆ ಪ್ರಾರಂಭಿಸುತ್ತಾರೆ.

ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ, ಹೊಸ ವರ್ಷವು ಜನವರಿ ತಿಂಗಳಿನಿಂದ ಪ್ರಾರಂಭವಾಗುತ್ತೆ. ಈ ದಿನದಂದು, ಪ್ರಪಂಚದಾದ್ಯಂತ ಹಬ್ಬದ ವಾತಾವರಣವಿರುತ್ತೆ. ಭಾರತದಲ್ಲಿಯೂ ಹೊಸ ವರ್ಷವನ್ನು(New year) ಆಚರಿಸಲಾಗುತ್ತೆ. ಜನರು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಜೀವನದಲ್ಲಿ ಪ್ರಗತಿ, ಸಂತೋಷ ಮತ್ತು ಶಾಂತಿಗಾಗಿ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತಾರೆ.ನೀವು ನಿಮ್ಮ ಇಡೀ ವರ್ಷವೂ ಉತ್ತಮವಾಗಿರಬೇಕು ಎಂದು ಬಯಸಿದರೆ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಆ ಮೂಲಕ ಹೊಸ ವರ್ಷಾಚರಣೆ ಮಾಡಬೇಕು.

ವರ್ಷದ ಮೊದಲ ದಿನವು ಉತ್ತಮವಾಗಿ ಪ್ರಾರಂಭವಾದಾಗ ಇಡೀ ವರ್ಷವು ಚೆನ್ನಾಗಿ ಹೋಗುತ್ತೆ ಎಂದು ನಂಬಲಾಗಿದೆ. ಇದಕ್ಕಾಗಿ, ಜನರು ಹೊಸ ವರ್ಷವನ್ನು ದೇವಸ್ಥಾನಕ್ಕೆ ತೆರಳುವ ಮೂಲಕ ಆಚರಿಸುತ್ತಾರೆ. ಇದರಿಂದ  ಬೆಳವಣಿಗೆ ಮತ್ತು ಪ್ರಗತಿಯಾಗುತ್ತದೆ ಎಂದು ಜನ ನಂಬುತ್ತಾರೆ. ನೀವು ಸಹ ಜೀವನದಲ್ಲಿ ಪ್ರಗತಿ ಪಡೆಯಲು ಬಯಸೋದಾದ್ರೆ, ಹೊಸ ವರ್ಷದ ಮೊದಲ ದಿನದಂದು, ನೀವು ಹಳದಿ ಸಾಸಿವೆ ಬೀಜಗಳನ್ನು(Yellow mustard) ಉಪಯೋಗಿಸಿ.

ಹಳದಿ ಸಾಸಿವೆ ಸುವಾಸನೆಯ ಅಡುಗೆಯ (Kitchen) ರುಚಿಯನ್ನು ಹೆಚ್ಚಿಸುತ್ತೆ  ಆದರೆ ನಿಮಗೆ ಗೊತ್ತಾ? ಈ ಹಳದಿ ಸಾಸಿವೆ ಬಳಕೆ ಮಾಡೋದ್ರಿಂದ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ತರುತ್ತೆ ಎಂದು ಹೇಳಲಾಗುತ್ತೆ. ಹೇಗೆಂದು ತಿಳಿದುಕೊಳ್ಳೋಣ. ಆ ಮೂಲಕ ನಿಮ್ಮ ಹೊಸ ವರ್ಷವನ್ನು ಸಂತೋಷದಿಂದ ಆಚರಿಸಿ.

ನೀವು ಹೊಸ ವರ್ಷದಂದು ಲಕ್ಷ್ಮಿ(Lakshmi) ದೇವಿಯ ಅನುಗ್ರಹ ಪಡೆಯಲು ಬಯಸೋದಾದ್ರೆ, ಹೊಸ ವರ್ಷದಂದು, ಮನೆಯ ಪ್ರತಿಯೊಂದೂ ಮೂಲೆ ಮತ್ತು ಚಾವಣಿಯಲ್ಲಿ ಹಳದಿ ಸಾಸಿವೆ ಹಿಡಿದು 'ಓಂ ಶ್ರೀಂ ಹ್ರೇನ್ ಶ್ರೀಂ ಕಮಲೇ ಕಮಲಲೇ ಪ್ರಸಿದ್ ಪ್ರಸಿದ್ ಶ್ರೀಂ ಹ್ರೀಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಿ ನಮಃ' ಎಂಬ ಮಂತ್ರವನ್ನು ಪಠಿಸಿ ಮತ್ತು ಅದನ್ನು ಚಿಮುಕಿಸಿ. ಈ ಪರಿಹಾರ ಮಾಡುವ ಮೂಲಕ, ವ್ಯಕ್ತಿಯ ಜೀವನದಿಂದ ಪ್ರತಿಯೊಂದು ಆಪತ್ತು ತಪ್ಪುತ್ತೆ. ಹಾಗೆಯೇ, ಸಂತೋಷ, ಶಾಂತಿ ಮತ್ತು ಸಮೃದ್ಧಿ ಮನೆಗೆ ಬರುತ್ತೆ.
 

ವೃತ್ತಿ ಜೀವನ (Profession) ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸಲು, ವರ್ಷದ ಮೊದಲ ದಿನದಂದು, ತಲೆ ಮೇಲಿಂದ ಕೆಲವು ಹಳದಿ ಸಾಸಿವೆ ಬೀಜಗಳನ್ನು ಎಸೆಯಿರಿ. ಈ ರೀತಿ ಮಾಡುವ ಮೂಲಕ, ವೃತ್ತಿಜೀವನ (Career) ಮತ್ತು ವ್ಯವಹಾರದಲ್ಲಿನ ಅಡೆತಡೆಗಳನ್ನು ತೆಗೆದು ಹಾಕಬಹುದು. ಹೊಸ ವರ್ಷದಂದು ನೀವು ಹಳದಿ ಸಾಸಿವೆಯ ಈ ಪರಿಹಾರಗಳನ್ನು ಮಾಡಬೇಕು.

ಗುರುವಾರವನ್ನು ಗುರು ದೇವರಿಗೆ ಮತ್ತು ಭಗವಾನ್ ಶ್ರೀ ಹರಿ ವಿಷ್ಣುವಿಗೆ ಸಮರ್ಪಿಸಲಾಗುತ್ತೆ. ಹಳದಿ ಬಣ್ಣವು(Yellow dress) ಭಗವಾನ್ ವಿಷ್ಣುವಿಗೆ ತುಂಬಾ ಪ್ರಿಯ. ಆದ್ದರಿಂದ, ಜನರು ಗುರುವಾರ ಹಳದಿ ಬಟ್ಟೆಗಳನ್ನು ಧರಿಸುವ ಮೂಲಕ ವಿಷ್ಣುವನ್ನು ಪೂಜಿಸುತ್ತಾರೆ. 

ಹಣದ (Money) ಕೊರತೆ ನಿವಾರಿಸಲು, ವರ್ಷದ ಮೊದಲ ಗುರುವಾರದಂದು ಹಳದಿ ಬಟ್ಟೆಯಲ್ಲಿ ಹಳದಿ ಸಾಸಿವೆ ಮತ್ತು ಕರ್ಪೂರ  ಕಟ್ಟಿ ಮತ್ತು ಅದನ್ನು ಮನೆಯ ಮುಖ್ಯ ದ್ವಾರದಲ್ಲಿ ನೇತುಹಾಕಿ. ಈ ಪರಿಹಾರ ಮಾಡೋದರಿಂದ ಹಣದ ಕೊರತೆ ಉಂಟಾಗೋದಿಲ್ಲ. ಹಾಗೆಯೇ, ಸಾಲವೂ ಸಹ ಪರಿಹಾರವಾಗುತ್ತೆ.

click me!