ಸಾಮುದ್ರಿಕ ಶಾಸ್ತ್ರ: ಕಣ್ಣಿನ ಬಣ್ಣ ವ್ಯಕ್ತಿತ್ವ ಹೇಳುತ್ತೆ, ನಿಮ್ಮ ಸ್ವಭಾವವೇನು?

First Published Jul 28, 2023, 5:39 PM IST

ಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ವ್ಯಕ್ತಿತ್ವದ ಕೆಲವು ವಿಶೇಷ ವಿಷಯಗಳನ್ನು ವ್ಯಕ್ತಿಯ ದೇಹದ ವಿನ್ಯಾಸ ಮತ್ತು ದೇಹದ ಮೇಲಿರುವ ಮಚ್ಚೆಗಳಿಂದ ಹಿಡಿದು ಅವರ ಕಣ್ಣುಗಳ ಬಣ್ಣದವರೆಗೆ ತಿಳಿಯಬಹುದು. 

ಸಾಮುದ್ರಿಕ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಕಣ್ಣುಗಳ ಬಣ್ಣವು(Eye colour) ಅವನ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಹೇಳುತ್ತೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ. ಇದರಲ್ಲಿ, ಮಾನವ ದೇಹದ ಭಾಗಗಳ ರಚನೆಯ ಆಧಾರದ ಮೇಲೆ ಮನುಷ್ಯನ ವ್ಯಕ್ತಿತ್ವದ ಬಗ್ಗೆ ಅನೇಕ ವಿಷಯಗಳನ್ನು ಕಂಡುಹಿಡಿಯಬಹುದು ಎಂದು ಹೇಳಲಾಗಿದೆ. 

ಈ ಧರ್ಮಗ್ರಂಥವನ್ನು ಸಮುದ್ರ ಋಷಿ ಬರೆದಿದ್ದಾರೆ, ಆದ್ದರಿಂದ ಈ ಧರ್ಮಗ್ರಂಥವನ್ನು ಸಾಮುದ್ರಿಕ ಶಾಸ್ತ್ರ ಎಂದು ಕರೆಯಲಾಗುತ್ತೆ. ಇದರಲ್ಲಿ ವ್ಯಕ್ತಿಯ ವ್ಯಕ್ತಿತ್ವದ ಕೆಲವು ವಿಷಯಗಳನ್ನು ಅವನ ಕಣ್ಣುಗಳ ಬಣ್ಣದಿಂದ ಸಹ ತಿಳಿಯಬಹುದು. ಎಂದು ಹೇಳಲಾಗಿದೆ. ಬನ್ನಿ ಯಾವ ಬಣ್ಣ, ಯಾವ ವ್ಯಕ್ತಿತ್ವ (Personality) ಹೇಗಿದೆ?

Latest Videos


ಕಂದು ಕಣ್ಣು
ಸಾಮುದ್ರಿಕ ಶಾಸ್ತ್ರದ ಪ್ರಕಾರ, ಗಾಢ ಕಂದು ಬಣ್ಣದ ಕಣ್ಣನ್ನು ಹೊಂದಿರುವ ಜನರು ಹುಟ್ಟಿನಿಂದಲೇ ನಾಯಕನಾಗುವ ಗುಣಗಳನ್ನು ಹೊಂದಿರುತ್ತಾರೆ. ಈ ಗುಣದಿಂದಾಗಿ, ಜನರು  ಬೇಗ ನಂಬುತ್ತಾರೆ. ಅಂತಹ ಜನರು ಸ್ವಭಾವದಿಂದ ದಯಾಪರರು, ಹಾಗೆಯೇ ಇವರು ಎಲ್ಲರಿಗೂ ಸಹಾಯ ಮಾಡಲು ಸಿದ್ಧರಿರುತ್ತಾರೆ.

ಕಪ್ಪು (Black) ಕಣ್ಣುಗಳು ಏನು ಹೇಳುತ್ತವೆ?
ಹೆಚ್ಚಿನ ಜನರ ಕಣ್ಣುಗಳು ಕಪ್ಪು. ಇದರರ್ಥ ಈ ಜನರು ತುಂಬಾ ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಜನರು. ಈ ಜನರು ಮೋಸ ಮಾಡೋದಿಲ್ಲ ಎಂದು ಸಾಮುದ್ರಿಕ ಶಾಸ್ತ್ರದಲ್ಲಿ ನಂಬಲಾಗಿದೆ. ಜೊತೆಗೆ ಇಂತಹ ಜನರು ನಿಗೂಢರಾಗಿರುತ್ತಾರೆ ಎಂದು ಸಹ ಹೇಳಲಾಗುತ್ತೆ..

ಈ ಬಣ್ಣದ ಕಣ್ಣುಗಳನ್ನು ಹೊಂದಿರುವ ಜನರು ಬುದ್ಧಿವಂತರು.
ಹಸಿರು(Green) ಕಣ್ಣುಗಳು ವಿರಳವಾಗಿ ಕಂಡುಬರುತ್ತವೆ. ಆದರೆ ಹಸಿರು ಕಣ್ಣಿನ ಬಣ್ಣ ಹೊಂದಿರುವವರನ್ನು ಬುದ್ಧಿವಂತ ಮತ್ತು ಉತ್ಸುಕ ಎಂದು ಪರಿಗಣಿಸಲಾಗುತ್ತೆ. ಇಂತಹ ಜನರು ಎಲ್ಲವನ್ನೂ ಬಹಳ ಉತ್ಸಾಹದಿಂದ ಮಾಡುತ್ತಾರೆ.

ನೀಲಿ ಕಣ್ಣುಗಳ(Blue eyes) ಅರ್ಥ
ನೀಲಿ ಕಣ್ಣುಗಳನ್ನು ಹೊಂದಿರುವ ಯಾರಾದರೂ ತುಂಬಾ ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣುತ್ತಾರೆ. ಈ ಜನರು ತುಂಬಾ ಶಾಂತ ಮತ್ತು ತೀಕ್ಷ್ಣ ಮನಸ್ಸಿನವರು ಎಂದು ಸಾಮುದ್ರಿಕ ಶಾಸ್ತ್ರದಲ್ಲಿ ನಂಬಲಾಗಿದೆ. ಇಂತಹ ಜನರು ಪ್ರತಿಯೊಂದು ಸಂಬಂಧವನ್ನು ಪೂರ್ಣ ನಿಷ್ಠೆಯಿಂದ ನಿಭಾಯಿಸುತ್ತಾರೆ ಎಂದು ಹೇಳಲಾಗುತ್ತೆ.

click me!