New Year 2026 Astrology: ಸೂರ್ಯನ ಜೊತೆ ಹೊಸ ವರ್ಷದ ನಂಟು, ಮನೆಗೆ ಈ ಎಲ್ಲ ವಸ್ತು ತರೋದು ಮರೀಬೇಡಿ

Published : Dec 24, 2025, 04:14 PM IST

New Year 2026 Numerology : 2026ಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಹೊಸ ವರ್ಷ ಯಾವ ಗ್ರಹದ ಜೊತೆ ಸಂಬಂಧ ಹೊಂದಿದೆ, ಏನೆಲ್ಲ ಮಾಡ್ಬೇಕು, ಯಾವೆಲ್ಲ ವಸ್ತುಗಳನ್ನು ಮನೆಗೆ ತರಬೇಕು ಎಂಬ ವಿವರ ಇಲ್ಲಿದೆ.

PREV
17
ಹೊಸ ವರ್ಷ ಹೊಸ ಭರವಸೆ

ಹೊಸ ವರ್ಷದ ಸ್ವಾಗತಕ್ಕೆ ಪ್ರತಿಯೊಬ್ಬರೂ ಉತ್ಸುಕರಾಗಿದ್ದಾರೆ. 2026 ಹೇಗಿರುತ್ತೆ ಎನ್ನುವ ಕುತೂಹಲ ಇದ್ದೇ ಇದೆ. 2026 ನ್ನು ಜ್ಯೋತಿಷ್ಯದಲ್ಲಿ ಬಹಳ ಮುಖ್ಯವಾದ ವರ್ಷವೆಂದು ಪರಿಗಣಿಸಲಾಗಿದೆ. ಸಂಖ್ಯಾಶಾಸ್ತ್ರದ ಪ್ರಕಾರ, 2026 ಸೂರ್ಯನ ವರ್ಷವಾಗಿದೆ. ಪ್ರತಿಯೊಂದು ವರ್ಷವೂ ಒಂದೊಂದು ಗ್ರಹದ ಜೊತೆ ಸಂಬಂಧ ಹೊಂದಿರುತ್ತದೆ. ಯಾವ ವರ್ಷ ಯಾವ ಗ್ರಹದ ಜೊತೆ ಸಂಬಂಧ ಹೊಂದಿದೆ ಎಂಬುದನ್ನು ಸಂಖ್ಯಾ ಶಾಸ್ತ್ರದ ಮೂಲಕ ಪತ್ತೆ ಮಾಡಲಾಗುತ್ತದೆ.

27
2026 ಸೂರ್ಯನ ವರ್ಷ

ಸಂಖ್ಯಾ ಶಾಸ್ತ್ರದ ಪ್ರಕಾರ 2026ರಲ್ಲಿ 2 +0+ 2+6 =10. ಇದನ್ನು ಸೇರಿಸಿದಾಗ ಅಂದ್ರೆ 1 + 0 = 1. ಸಂಖ್ಯಾಶಾಸ್ತ್ರದಲ್ಲಿ ಸೂರ್ಯನನ್ನು ಸಂಖ್ಯೆ 1 ರ ಅಧಿಪತಿ ಎಂದು ಪರಿಗಣಿಸಲಾಗಿದೆ. ಸೂರ್ಯನನ್ನು ಗೌರವ, ನಾಯಕತ್ವ, ಆತ್ಮ ವಿಶ್ವಾಸ, ಶಕ್ತಿ ಮತ್ತು ಹೊಸ ಆರಂಭಗಳಿಗೆ ಕಾರಣವಾದ ಗ್ರಹವೆಂದು ಪರಿಗಣಿಸಲಾಗುತ್ತದೆ. ಹೊಸ ವರ್ಷದಲ್ಲಿ ಈ ಎಲ್ಲ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯಾಗುವ ಸಾಧ್ಯತೆ ಇದೆ. ಮೂಲಾಂಕ ಒಂದನ್ನು ಹೊಂದಿರುವ ಜನರಿಗೆ ಯಶಸ್ಸು, ಪ್ರಗತಿ, ಗೌರವ ಸಿಗಲಿದೆ. ನಿಮ್ಮ ಜೀವನದಲ್ಲೂ ಯಶಸ್ಸು, ಸುಖ, ಆರೋಗ್ಯ, ಸಂತೋಷ ಬೇಕೆಂದ್ರೆ ನೀವು 2026 ರಲ್ಲಿ ಸೂರ್ಯನಿಗೆ ಸಂಬಂಧಿಸಿದ ಕೆಲವೊಂದು ವಸ್ತುಗಳನ್ನು ಅಗತ್ಯವಾಗಿ ಮನೆಗೆ ತರಬೇಕು.

37
ಸೂರ್ಯನ ವಿಗ್ರಹ

2026 ಸೂರ್ಯನಿಗೆ ಸಂಬಂಧಿಸಿದ ವರ್ಷವಾಗಿರೋದ್ರಿಂದ ನೀವು ಹೊಸ ವರ್ಷದಲ್ಲಿ ಸೂರ್ಯನ ವಿಗ್ರಹ ಅಥವಾ ಸೂರ್ಯನ ಫೋಟೋವನ್ನು ಮನೆಗೆ ತನ್ನಿ. ಇದ್ರಿಂದ ನಿಮ್ಮ ಗೌರವ ಹೆಚ್ಚಾಗಲಿದೆ. ಜೀವನದಲ್ಲಿ ಪ್ರಗತಿ ಲಭಿಸಲಿದೆ.

47
ತಾಮ್ರದ ಸೂರ್ಯ ಚಿಹ್ನೆ

ನೀವು ಹೊಸ ವರ್ಷ ತಾಮ್ರದ ಸೂರ್ಯ ಚಿಹ್ನೆಯನ್ನು ಕೂಡ ಮನೆಗೆ ತರಬಹುದು. ಇದು ತುಂಬ ಅದೃಷ್ಟವನ್ನು ತರುತ್ತದೆ. ಸೂರ್ಯ ಚಿಹ್ನೆಯನ್ನು ಮುಖ್ಯ ದ್ವಾರದಲ್ಲಿ ಅಥವಾ ಮನೆಯ ಪೂರ್ವ ಗೋಡೆಯಲ್ಲಿ ಇಡಿ. ಪ್ರತಿದಿನ ಅದರ ಮೇಲೆ ಗಂಗಾಜಲವನ್ನು ಅರ್ಪಿಸಿ. ಕುಂಕುಮದ ತಿಲಕವನ್ನು ಹಚ್ಚಿ. ಇದ್ರಿಂದ ಮನೆಗೆ ಧನಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ. ವೃತ್ತಿಯಲ್ಲಿ ಯಶಸ್ಸು ಲಭಿಸುತ್ತದೆ.

57
ತಾಮ್ರದ ವಸ್ತುಗಳು

ಜಾತಕದಲ್ಲಿ ಸೂರ್ಯನನ್ನು ಬಲಪಡಿಸಲು 2026 ರಲ್ಲಿ ತಾಮ್ರದ ವಸ್ತುಗಳನ್ನು ಮನೆಗೆ ತರಬೇಕು. ತಾಮ್ರದ ಪಾತ್ರೆ ಅಥವಾ ಇತರ ತಾಮ್ರದ ವಸ್ತುಗಳನ್ನು ತರುವುದು ಶುಭಕರವಾಗಿರುತ್ತದೆ.

67
ಸೂರ್ಯ ದೇವನ ಏಳು ಕುದುರೆಗಳ ಫೋಟೋ

2026 ಸೂರ್ಯನ ವರ್ಷ. ಸೂರ್ಯ ದೇವ ಏಳು ಕುದುರೆಗಳಿರುವ ರಥದ ಮೇಲೆ ಸವಾರಿ ಮಾಡುತ್ತಿರುವ ಫೋಟೋವನ್ನು ಮನೆಗೆ ತನ್ನಿ. ಈ ಫೋಟೋವನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇಡಬೇಕು. ಇದು ಜ್ಞಾನ ಮತ್ತು ಶಕ್ತಿಯ ಸಂಕೇತವಾಗಿದೆ. ಇದು ಕುಟುಂಬಸ್ಥರ ಜ್ಞಾನ ಹೆಚ್ಚಿಸುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಿಸುತ್ತದೆ. ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ.

77
ಸೂರ್ಯನ ಆಶೀರ್ವಾದಕ್ಕೆ ಹೀಗೆ ಮಾಡಿ

ಸ್ನಾನದ ನಂತ್ರ ಪ್ರತಿದಿನ ಸೂರ್ಯನಿಗೆ ಜಲವನ್ನು ಅರ್ಪಿಸಿ. ಸೂರ್ಯ ದೇವರಿಗೆ ತಾಮ್ರದ ಪಾತ್ರೆಯಿಂದ ಮಾತ್ರ ಜಲವನ್ನು ಅರ್ಪಿಸಿ. ನೀರಿರುವ ಪಾತ್ರೆಯಲ್ಲಿ ಕೆಂಪು ಹೂವುಗಳು, ಅಕ್ಷತೆಯನ್ನು ಹಾಕಿ. ಭಾನುವಾರದಂದು ಬೆಲ್ಲ, ಗೋಧಿ, ಧಾನ್ಯಗಳು ಮತ್ತು ಹಣವನ್ನು ದಾನ ಮಾಡಿ. ನೀರನ್ನು ಅರ್ಪಿಸುವಾಗ, ಓಂ ಸೂರ್ಯಾಯ ನಮಃ ಮಂತ್ರವನ್ನು ಪಠಿಸಿ. ಪೂರ್ವಕ್ಕೆ ಮುಖ ಮಾಡಿ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ. ಇದ್ರಿಂದ ವರ್ಷಪೂರ್ತಿ ಸಂತೋಷ, ಏಳ್ಗೆ, ಆರ್ಥಿಕ ವೃದ್ಧಿಯಲ್ಲಿ ಯಾವುದೇ ಸಮಸ್ಯೆ ಕಾಡದು.

Read more Photos on
click me!

Recommended Stories