ದೀಪಾವಳಿ ಸಂತೋಷ ಮತ್ತು ಬೆಳಕಿನ ಹಬ್ಬ. ಈ ಹಬ್ಬದಂದು ರಂಗೋಲಿ ಇಲ್ಲ ಅಂದ್ರೆ ಹೇಗೆ? ಧಾರ್ಮಿಕ ನಂಬಿಕೆಗಳ ಪ್ರಕಾರ, ರಂಗೋಲಿ ಶುಭ ಮತ್ತು ಸಂತೋಷದ ಸಂಕೇತ. ದೀಪಾವಳಿಯಂದು ಮನೆಯ ಮುಖ್ಯ ಬಾಗಿಲಿನ ಮುಂದೆ ಯಾವ ರೀತಿಯ ರಂಗೋಲಿ ಬಿಡಿಸಿದ್ರೆ ಅದೃಷ್ಟ ಒಲಿಯುತ್ತೆ ಎಂಬ ಮಾಹಿತಿ ಇಲ್ಲಿದೆ.
ದೀಪಾವಳಿಯಂದು ಮನೆಯ ಮುಖ್ಯ ಬಾಗಿಲಿನ ಮುಂದೆ ಕಮಲದ ಹೂವಿನ ರಂಗೋಲಿ ಬಿಡಿಸುವುದು ಶುಭವೆಂದು ನಂಬಲಾಗಿದೆ. ಕಮಲದ ಹೂವು ಲಕ್ಷ್ಮಿ ದೇವಿಗೆ ಪ್ರಿಯವಾದದ್ದು ಎಂಬ ಧಾರ್ಮಿಕ ನಂಬಿಕೆಯಿದೆ. ಇದನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿಯೂ ಪರಿಗಣಿಸಲಾಗುತ್ತದೆ. ಗುಲಾಬಿ, ಕೆಂಪು ಮತ್ತು ಹಳದಿ ಬಣ್ಣಗಳನ್ನು ಬಳಸಿ ಸುಂದರವಾದ ಕಮಲದ ರಂಗೋಲಿ ಬಿಡಿಸಬಹುದು.
25
ಸ್ವಸ್ತಿಕ್ ರಂಗೋಲಿ
ಹಿಂದೂ ಧರ್ಮದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ದೀಪಾವಳಿಯಂದು ಮನೆಯ ಬಾಗಿಲಿನ ಬಳಿ ಸ್ವಸ್ತಿಕ್ ರಂಗೋಲಿ ಬಿಡಿಸಬಹುದು. ಇದರ ಸುತ್ತಲೂ ಹೂವುಗಳು ಮತ್ತು ಚಿಕ್ಕ ಚಿಕ್ಕ ಹಣತೆಗಳನ್ನು ಇಟ್ಟು ಅಲಂಕರಿಸಿದರೆ ರಂಗೋಲಿ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ.
35
ದೀಪದ ರಂಗೋಲಿ
ದೀಪಾವಳಿಯಂದು ದೀಪದ ರಂಗೋಲಿ ಬಿಡಿಸುವುದು ಕೂಡ ವಿಶೇಷ. ಮನೆಯ ಮುಖ್ಯ ಬಾಗಿಲಿನ ಮುಂದೆ ಬಣ್ಣಗಳನ್ನು ಬಳಸಿ ದೊಡ್ಡದಾದ ದೀಪದ ಚಿತ್ರ ಬಿಡಿಸಬಹುದು. ಅದರ ಸುತ್ತಲೂ ಚಿಕ್ಕ ಚಿಕ್ಕ ಹಣತೆಗಳನ್ನು ಇಟ್ಟರೆ ರಂಗೋಲಿಯ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ.
ದೀಪಾವಳಿಗೆ ನವಿಲು, ಹೂವು ಮತ್ತು ಎಲೆಗಳ ವಿನ್ಯಾಸದ ರಂಗೋಲಿಯನ್ನೂ ಬಿಡಿಸಬಹುದು. ವಿವಿಧ ಬಣ್ಣಗಳನ್ನು ಬಳಸಿ ಬಿಡಿಸುವ ಈ ರಂಗೋಲಿ ನೋಡಲು ಸುಂದರವಾಗಿರುತ್ತದೆ. ಮನೆಯ ಪ್ರವೇಶ ದ್ವಾರಕ್ಕೂ ವಿಶೇಷ ಮೆರುಗು ನೀಡುತ್ತದೆ.
55
ಈ ದಿಕ್ಕಿನಲ್ಲಿ ರಂಗೋಲಿ ಬಿಡಿಸುವುದು ಶುಭ!
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲಿನ ಬಳಿ ರಂಗೋಲಿ ಬಿಡಿಸಲು ಉತ್ತರ-ಪೂರ್ವ ದಿಕ್ಕೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಇದರ ಜೊತೆಗೆ ಪೂರ್ವ ದಿಕ್ಕಿನಲ್ಲಿಯೂ ರಂಗೋಲಿ ಬಿಡಿಸಬಹುದು. ಈ ದಿಕ್ಕುಗಳಲ್ಲಿ ರಂಗೋಲಿ ಹಾಕುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಒಂದು ವೇಳೆ ಈ ದಿಕ್ಕುಗಳಲ್ಲಿ ರಂಗೋಲಿ ಬಿಡಿಸಲು ಸಾಧ್ಯವಾಗದಿದ್ದರೆ, ಮನೆಯ ಮುಖ್ಯ ಬಾಗಿಲಿನ ಮುಂದೆ ಸ್ವಚ್ಛವಾದ ಜಾಗದಲ್ಲಿ ರಂಗೋಲಿ ಹಾಕಬಹುದು. ಮನೆಯ ಮುಂದೆ ಹಾಕುವ ಈ ರಂಗೋಲಿಗಳು ಲಕ್ಷ್ಮಿಯನ್ನು ಆಕರ್ಷಿಸುತ್ತವೆ. ಮನೆಯ ತ್ರಿಜೋರಿ ಎಂದೂ ಖಾಲಿಯಾಗುವುದಿಲ್ಲ. ಬಲಗಾಲಿಟ್ಟು ಲಕ್ಷ್ಮಿ ನಿಮ್ಮ ಮನೆಗೆ ಬರ್ತಾಳೆ.