ದೇವರ ಬಳಿ ನೈವೇದ್ಯವನ್ನು ಹಾಗೆಯೇ ಬಿಟ್ರೆ, ನಕರಾತ್ಮಕ ಪರಿಣಾಮ ಬೀರುತ್ತೆ!

First Published Jan 6, 2023, 4:52 PM IST

ಹೆಚ್ಚಿನ ಎಲ್ಲಾ ಮನೆಗಳಲ್ಲಿ ಪೂಜೆಗೆ ನೈವೇದ್ಯವನ್ನು ದೇವರಿಗೆ ಅರ್ಪಿಸುವುದು ಸಾಮಾನ್ಯ. ಆದರೆ ದೇವರಿಗೆ ನೈವೇದ್ಯ ಅರ್ಪಿಸೋ ಮೊದಲು ಕೆಲವು ವಿಷಯಗಳನ್ನು ತಿಳಿದುಕೊಳ್ಳೋದು ಮುಖ್ಯ. ಆ ವಿಷಯಗಳು ಏನೆಂದು ಇಲ್ಲಿ ತಿಳಿಯಿರಿ. 

ಪ್ರತಿ ಹಿಂದೂ ಕುಟುಂಬದಲ್ಲಿ, ದೇವರು ಮತ್ತು ದೇವತೆಗಳನ್ನು ಬೆಳಗ್ಗೆ ಮತ್ತು ಸಂಜೆ ನಿಯಮಿತವಾಗಿ ಪೂಜಿಸಲಾಗುತ್ತೆ. ಪೂಜೆ ನಂತರ, ದೇವಾನು ದೇವತೆಗಳಿಗೆ ನೈವೇದ್ಯವನ್ನು (Bhog) ಅರ್ಪಿಸಲಾಗುತ್ತೆ. ನೈವೇದ್ಯದಲ್ಲಿ, ಪ್ರತಿಯೊಬ್ಬ ವ್ಯಕ್ತಿಯೂ ಕೆಲವು ಆಹಾರ ಪದಾರ್ಥಗಳನ್ನು ತಾನು ಇಷ್ಟಪಡುವ ಅಥವಾ ದೇವರು ಇಷ್ಟ ಪಡುವ ಆಹಾರವನ್ನು ನೈವೇದ್ಯವಾಗಿಸಿ, ದೇವರಿಗೆ ಅರ್ಪಿಸುತ್ತಾನೆ. ನೈವೇದ್ಯವನ್ನು ದೇವರಿಗೆ ಅರ್ಪಿಸೋ ಮೊದಲು ಈ ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ.  

ಪೂಜೆಯ (Pooja) ಸಮಯದಲ್ಲಿ ಮಾಡಿದ ತಪ್ಪುಗಳಿಂದ ದೇವರು ಕೋಪಗೊಳ್ಳುತ್ತಾರೆ ಮತ್ತು ಇದು ಪೂಜೆಯನ್ನು ಪೂರ್ಣಗೊಳಿಸೋದಿಲ್ಲ ಎಂದು ಜ್ಯೋತಿಷ್ಯ ಶಾಸ್ತ್ರ ನಂಬುತ್ತೆ. ಇತರ ಪೂಜಾ ವಿಧಾನಗಳಂತೆ, ನೈವೇದ್ಯವನ್ನು ಅರ್ಪಿಸುವ ಕೆಲವು ನಿಯಮಗಳಿವೆ, ಅವುಗಳನ್ನು ಅನುಸರಿಸಬೇಕು, ಆಗ ಮಾತ್ರ ಪೂಜೆಯ ಫಲವನ್ನು ಪಡೆಯಲಾಗುತ್ತೆ.

ಧರ್ಮಗ್ರಂಥಗಳಲ್ಲಿ, ದೇವರಿಗೆ ನೈವೇದ್ಯ ಅರ್ಪಿಸೋದಕ್ಕೆ ವಿಶೇಷ ಪ್ರಾಮುಖ್ಯತೆ ಸಹ ನೀಡಲಾಗಿದೆ. ದೇವರ ಪ್ರೀತಿಯ ನೈವೇದ್ಯ ಅವರಿಗೆ ಅರ್ಪಿಸುವ ಮೂಲಕ, ಅವರು ಬೇಗನೆ ಸಂತೋಷಗೊಳ್ಳುತ್ತಾರೆ ಮತ್ತು ಭಕ್ತರ ಮೇಲೆ ಕೃಪೆಯನ್ನು ಸುರಿಯುತ್ತಾರೆ ಎಂದು ಹೇಳಲಾಗುತ್ತೆ. 

ವಾಸ್ತು ಪ್ರಕಾರ, ದೇವರಿಗೆ ನೈವೇದ್ಯ ಅರ್ಪಿಸುವ ಬಗ್ಗೆ ಅನೇಕ ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳನ್ನು ನಿರ್ಲಕ್ಷಿಸಿದರೆ, ನಿಮ್ಮ ಅದೃಷ್ಟವು(Luck) ಕೈ ಕೊಡಲು ಹೆಚ್ಚು ಸಮಯ ತೆಗೆದುಕೊಳ್ಳೋದಿಲ್ಲ. ಹಾಗಾದರೆ ಆ ನಿಯಮಗಳು ಯಾವುವು ಅನ್ನೋದನ್ನು ತಿಳಿದು, ಅದರಂತೆ ನಡೆದುಕೊಳ್ಳೋದನ್ನು ಕಲಿಯಿರಿ.

ಜನರು ಪೂಜಿಸುವಾಗ ದೇವರಿಗೆ ನೈವೇದ್ಯ ಅರ್ಪಿಸುತ್ತಾರೆ ಮತ್ತು ಅದರ ನಂತರ ನೈವೇದ್ಯವನ್ನು ದೇವರ ಹತ್ತಿರ ಹಾಗೆ ಬಿಟ್ಟುಬಿಡುತ್ತಾರೆ, ಅದನ್ನು ಮಾಡಬಾರದು. ಹಾಗೆ ಮಾಡೋದರಿಂದ ಜೀವನದಲ್ಲಿ ಸಮಸ್ಯೆಗಳು(Problems) ಹೆಚ್ಚಾಗುತ್ತೆ.ಪೂಜೆ ಮಾಡಿದ ತಕ್ಷಣ ನೈವೇದ್ಯವನ್ನು ಹಂಚಬೇಕು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೈವೇದ್ಯವನ್ನು ದೇವರ ಹತ್ತಿರ ಹಾಗೆ ಬಿಡೋದರಿಂದ, ವ್ಯಕ್ತಿಯ ಅದೃಷ್ಟವು ದುರಾದೃಷ್ಟವಾಗಿ ಬದಲಾಗುತ್ತೆ ಮತ್ತು ಸಂತೋಷವನ್ನು ಕಳೆದುಕೊಳ್ಳುತ್ತೆ. ದೇವರ ಬಳಿ ನೈವೇದ್ಯ ಬಿಡೋದರಿಂದ ವಿಶ್ವಕ್ಸೇನ್, ಚಂದೇಶ್ವರ, ಚಂದನಶು ಮತ್ತು ಚಾಂಡಾಲಿಯಂತಹ ನಕಾರಾತ್ಮಕ ಶಕ್ತಿಗಳು(Negative energy) ಬರುತ್ತವೆ ಎಂದು ಹೇಳಲಾಗುತ್ತೆ.

ಪೂಜೆ ಪೂರ್ಣಗೊಂಡ ನಂತರ, ನೈವೇದ್ಯವನ್ನು ಭಗವಂತನಿಂದ ತೆಗೆದುಕೊಳ್ಳಬೇಕು ಮತ್ತು ಅದನ್ನು ಗೌರವದಿಂದ ಕುಟುಂಬದೊಂದಿಗೆ(Family) ಸ್ವೀಕರಿಸಬೇಕು ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಇದನ್ನು ಮಾಡೋದರಿಂದ, ಆರಾಧನೆಯ ಫಲಗಳನ್ನು ಪಡೆಯುವುದು ಮಾತ್ರವಲ್ಲದೆ, ಈ ವಿಧಾನದ ಮೂಲಕ ಪ್ರಸಾದವನ್ನು ಪಡೆಯುವುದು ದೇವರ ಬಗ್ಗೆ ಗೌರವ ಮತ್ತು ಪೂಜ್ಯಭಾವನೆಯನ್ನು ತೋರಿಸುತ್ತೆ. 
 

ಹಾಗಾಗಿ ಈ ವಿಧಾನದಿಂದ ನೈವೇದ್ಯ ಅರ್ಪಿಸುವ ಮೂಲಕ ಮತ್ತು ಅದನ್ನೇ ಪ್ರಸಾದವಾಗಿ ಸ್ವೀಕರಿಸುವ ಮೂಲಕ, ದೇವಾನುದೇವತೆಗಳು ಸಹ ಸಂತೋಷವಾಗಿ ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ. ಹಾಗಿದ್ರೆ ಇನ್ನು ಮುಂದೆ ದೇವರ ನೈವೇದ್ಯ ಹಾಗೆಯೇ ಬಿಡುವಂತಹ ತಪ್ಪನ್ನು ಮಾಡಬೇಡಿ. 
 

click me!